ಕರ್ನಾಟಕ

karnataka

ETV Bharat / sitara

ಗುರು ಶಿಷ್ಯರು ಚಿತ್ರದಲ್ಲಿ ಅಪ್ಪಟ ಹಳ್ಳಿ ಹುಡುಗಿಯಾದ ನಿಶ್ವಿಕಾ ನಾಯ್ಡು! - ಗುರು ಶಿಷ್ಯರು ಚಿತ್ರ,

ಈ ಚಿತ್ರದಲ್ಲಿ ನಿಶ್ವಿಕಾ ಬರೀ ಹಳ್ಳಿಹುಡುಗಿಯಷ್ಟೇ ಅಲ್ಲ, ರವಿಚಂದ್ರನ್ ಅವರ ಅಪ್ಪಟ ಅಭಿಮಾನಿಯಾಗಿಯೂ ಕಾಣಿಸಿಕೊಂಡಿರುವುದು ವಿಶೇಷ. 90ರ ದಶಕದ ಕಥೆ ಇರುವ `ಗುರು ಶಿಷ್ಯರು' ಈಗಾಗಲೇ ಶೇ.60ರಷ್ಟು ಮುಗಿದಿದೆ..

Nishita naidu acting in village girl role, Nishita naidu acting in village girl role in Guru Shishyaru movie, Guru Shishyaru movie, Guru Shishyaru movie news, ಹಳ್ಳಿಹುಡುಗಿಯಾದ ನಿಶ್ವಿಕಾ ನಾಯ್ಡು, ಗುರು ಶಿಷ್ಯರು ಚಿತ್ರದಲ್ಲಿ ಹಳ್ಳಿಹುಡುಗಿಯಾದ ನಿಶ್ವಿಕಾ ನಾಯ್ಡು, ಗುರು ಶಿಷ್ಯರು ಚಿತ್ರ, ಗುರು ಶಿಷ್ಯರು ಚಿತ್ರ ಸುದ್ದಿ,
ಗುರು ಶಿಷ್ಯರ ಚಿತ್ರದಲ್ಲಿ ಅಪ್ಪಟ ಹಳ್ಳಿ ಹುಡುಗಿಯಾದ ನಿಶ್ವಿಕಾ ನಾಯ್ಡು

By

Published : May 19, 2021, 2:38 PM IST

`ಗುರು ಶಿಷ್ಯರು' ಚಿತ್ರದಲ್ಲಿ ನಿಶ್ವಿಕಾ ನಾಯ್ಡು ನಟಿಸುತ್ತಿರುವ ವಿಷಯ ಹೊಸದೇನಲ್ಲ. ಈಗಾಗಲೇ ಈ ವಿಷಯವನ್ನು ಚಿತ್ರತಂಡದವರು ಹೇಳಿಕೊಂಡಿದ್ದರು.

ಆದರೆ, ಅವರ ಪಾತ್ರವೇನು ಮತ್ತು ಚಿತ್ರದಲ್ಲಿ ಹೇಗೆ ಕಾಣುತ್ತಾರೆ ಎಂಬ ವಿಷಯವನ್ನು ಬಿಟ್ಟುಕೊಟ್ಟಿರಲಿಲ್ಲ. ಇಂದು ನಿಶ್ವಿಕಾ ಹುಟ್ಟುಹಬ್ಬದ ನೆಪದಲ್ಲಿ ಆಕೆಯ ಫಸ್ಟ್​ಲುಕ್​ ಪೋಸ್ಟರ್ ಬಿಡುಗಡೆ ಮಾಡಲಾಗಿದೆ. ಈ ಪೋಸ್ಟರ್ ಮೂಲಕ ನಿಶ್ವಿಕಾಗೆ ಚಿತ್ರತಂಡದವರು ಗಿಫ್ಟ್ ಕೊಟ್ಟಿದ್ದಾರೆ.

ಗುರು ಶಿಷ್ಯರು ಚಿತ್ರದಲ್ಲಿ ಅಪ್ಪಟ ಹಳ್ಳಿ ಹುಡುಗಿಯಾದ ನಿಶ್ವಿಕಾ ನಾಯ್ಡು

ಈ ಚಿತ್ರಕ್ಕೆ ನಿಶ್ವಿಕಾ ಆಯ್ಕೆಯಾಗಿದ್ದು ಅಷ್ಟೇನೂ ಸುಲಭವಾಗಿರಲಿಲ್ಲವಂತೆ. ಈ ಪಾತ್ರಕ್ಕಾಗಿ 30 ಹೊಸ ನಟಿಯರು, ಕನ್ನಡ ಚಿತ್ರರಂಗದಲ್ಲಿ ಈಗಾಗಲೇ ಹೆಸರು ಮಾಡಿರುವ ಒಂದಿಷ್ಟು ನಟಿಯರು ಮತ್ತು ಪರಭಾಷೆಯ ಹುಡುಗಿಯರನ್ನು ಈ ಪಾತ್ರಕ್ಕಾಗಿ ಪರಿಗಣಿಸಲಾಗಿತ್ತಂತೆ. ಕೊನೆಗೆ ಈ ಪಾತ್ರಕ್ಕೆ ನಿಶ್ವಿಕಾ ಸೂಕ್ತ ಎನ್ನುವ ಕಾರಣಕ್ಕೆ ಅವರನ್ನು ಆಯ್ಕೆ ಮಾಡಲಾಗಿದೆ.

ಈ ಚಿತ್ರದಲ್ಲಿ ನಿಶ್ವಿಕಾ ಬರೀ ಹಳ್ಳಿಹುಡುಗಿಯಷ್ಟೇ ಅಲ್ಲ, ರವಿಚಂದ್ರನ್ ಅವರ ಅಪ್ಪಟ ಅಭಿಮಾನಿಯಾಗಿಯೂ ಕಾಣಿಸಿಕೊಂಡಿರುವುದು ವಿಶೇಷ. 90ರ ದಶಕದ ಕಥೆ ಇರುವ `ಗುರು ಶಿಷ್ಯರು' ಈಗಾಗಲೇ ಶೇ.60ರಷ್ಟು ಮುಗಿದಿದೆ.

ಚಿತ್ರವನ್ನು ಶರಣ್ ಮತ್ತು ತರುಣ್ ಸುಧೀರ್ ಜೊತೆಯಾಗಿ ನಿರ್ಮಿಸುತ್ತಿದ್ದು, ಜಡೇಶ್ ಹಂಪಿ ಕಥೆ-ಚಿತ್ರಕಥೆ ಬರೆದು ನಿರ್ದೇಶನ ಮಾಡುತ್ತಿದ್ದಾರೆ.

ABOUT THE AUTHOR

...view details