ಕರ್ನಾಟಕ

karnataka

ETV Bharat / sitara

ಕವಿ ನಿಸಾರ್ ಅಹಮದ್ ಅವರ ಹೆಚ್ಚು ಹಾಡುಗಳನ್ನು ಹೊರತಂದಿದ್ದು ಲಹರಿ ಸಂಸ್ಥೆ - ತುಳಸಿ ರಾಮ್ ನಾಯ್ಡು ಅಲಿಯಾಸ್ ಲಹರಿ ವೇಲು

ತುಳಸಿ ರಾಮ್ ನಾಯ್ಡು ಅಲಿಯಾಸ್ ಲಹರಿ ವೇಲು ಅವರು ಸದ್ಯದಲ್ಲೇ ದಿ.ನಿಸಾರ್ ಅಹಮದ್ ಅವರ ಎಲ್ಲಾ 155 ಹಾಡುಗಳನ್ನು ಮತ್ತೆ ಮಾರುಕಟ್ಟೆಗೆ ತರುವ ಯೋಚನೆಯಲ್ಲಿದ್ದಾರೆ.

Nisar Ahmed
ನಿಸಾರ್ ಅಹಮದ್

By

Published : May 11, 2020, 11:53 AM IST

ಕಳೆದ ನಾಲ್ಕು ದಶಕಗಳಿಂದ ಧ್ವನಿಸುರುಳಿ ಸಂಸ್ಥೆಯಲ್ಲಿ ವಿಶಿಷ್ಠ ರೀತಿಯ ಛಾಪು ಮೂಡಿಸುತ್ತಾ ಬರುತ್ತಿರುವ ಲಹರಿ ರೆಕಾರ್ಡಿಂಗ್ ಸಂಸ್ಥೆಯ ಮನೋಹರ ನಾಯ್ಡು ಹಾಗೂ ತುಳಸಿ ರಾಮ್ ನಾಯ್ಡು ಮಾತನಾಡುತ್ತಾ ನಿತ್ಯೋತ್ಸವ ಹಾಡುಗಳು ಜನರು ನಿತ್ಯ ನೆನಪಿಟ್ಟುಕೊಳ್ಳುವ ಹಾಗಿದೆ ಎಂದು ಅಭಿಪ್ರಾಯಪಡುತ್ತಾರೆ.

ತುಳಸಿ ರಾಮ್ ನಾಯ್ಡು ಅಲಿಯಾಸ್ ಲಹರಿ ವೇಲು ಮಾತನಾಡುತ್ತಾ, ನಿಸಾರ್ ಅಹಮದ್ ಅವರ 155 ಕವಿತೆಗಳನ್ನು ನಿತ್ಯೋತ್ಸವ ಲೇಬಲ್ ಅಡಿ ಬಿಡುಗಡೆ ಮಾಡಿದ್ದು ನಮ್ಮ ಹೆಮ್ಮೆ. ಸದ್ಯದಲ್ಲೇ ಅವರ ಎಲ್ಲಾ ಹಾಡುಗಳನ್ನು ಮತ್ತೆ ಮಾರುಕಟ್ಟೆಗೆ ತರುವ ಯೋಚನೆಯಲ್ಲಿದ್ದೇವೆ ಎಂದು ತಿಳಿಸಿದರು.

ಲಹರಿ ಸಂಸ್ಥೆಯ ಲಹರಿ ವೇಲು

ಲಹರಿ ಸಂಸ್ಥೆ 1978ರಲ್ಲಿ ಹೊರ ತಂದ ಮೈಸೂರು ಅನಂತಸ್ವಾಮಿ ಅವರ ರಾಗ ಸಂಯೋಜನೆಯ ‘ನಿತ್ಯೋತ್ಸವ’ ಹಾಡುಗಳ ಗುಚ್ಛ ಬಹಳ ಜನಪ್ರಿಯವಾಗಿತ್ತು. ನಿಸಾರ್ ಅವರ 75 ನೇ ಹುಟ್ಟುಹಬ್ಬದಂದು 75 ಗೀತೆಗಳ ಒಂದು ಸಿಡಿಯನ್ನು ಕೂಡಾ ಬಿಡುಗಡೆ ಮಾಡಲಾಗಿತ್ತು. ಬೆಳಗಾವಿಯಲ್ಲಿ ವಿಶ್ವ ಕನ್ನಡ ಸಮ್ಮೇಳನ ನಡೆದಾಗ ಇದೇ ಸಂಸ್ಥೆ ‘ನಿತ್ಯೋತ್ಸವ’ ಸಿಡಿಯನ್ನು ಮತ್ತೊಮ್ಮೆ ರಿಲೀಸ್ ಮಾಡಿತ್ತು.

ಇನ್ನು ಲಹರಿ ವೇಲು ಅವರನ್ನು ನಿಸಾರ್ ಅಹಮದ್ ಅಪಾರವಾಗಿ ಇಷ್ಟ ಪಡುತ್ತಿದ್ದರಂತೆ. ಒಂದು ರೀತಿಯಲ್ಲಿ ಅಪ್ಪ-ಮಗನ ಸಂಬಂಧವನ್ನು ನಾವು ಹಂಚಿಕೊಂಡಿದ್ದೆವು ಎಂದು ಹೇಳುವ ವೇಲು ಭಾವುಕರಾಗ್ತಾರೆ. ಸಂಸ್ಥೆಯು ಅತ್ಯುತ್ತಮ ರೀತಿ, ನೀತಿಗಳನ್ನು ಪಾಲಿಸಿಕೊಂಡು ಬರುತ್ತಿದ್ದು, ‘ದೇವರು ನಿಮ್ಮನ್ನು ಚೆನ್ನಾಗಿಟ್ಟಿರಲಿ' ಎಂದು ನಿಸಾರ್ ಅಹಮದ್ ಲಹರಿ ಸಂಸ್ಥೆಯನ್ನು ಹರಸುತ್ತಿದ್ದರು ಅವರು ಹೇಳಿದ್ರು.

ABOUT THE AUTHOR

...view details