ನಟ ಪುನೀತ್ ರಾಜ್‍ಕುಮಾರ್ ಅಗಲಿ ಒಂದು ತಿಂಗಳು ಕಳೆದಿದೆ. ಆದರೆ ಇಂದಿಗೂ ಅಭಿಮಾನಿಗಳು, ಸಿನಿಮಾ ಸ್ನೇಹಿತರು, ಗಣ್ಯರು ಅವರ ಮನೆಗೆ ಭೇಟಿ ನೀಡುತ್ತಿದ್ದಾರೆ.
ಪುನೀತ್ ರಾಜ್‍ಕುಮಾರ್ ನಿವಾಸಕ್ಕೆ ಭೇಟಿ ನೀಡಿದ ನಿರ್ಮಲಾನಂದ ಸ್ವಾಮೀಜಿ ಇಂದು ಆದಿಚುಂಚನಗಿರಿ ಮಹಾಸಂಸ್ಥಾನ ಮಠದ ಪೀಠಾಧ್ಯಕ್ಷರಾದ ನಿರ್ಮಲಾನಂದ ಸ್ವಾಮೀಜಿ ಹಾಗೂ ಆರೋಗ್ಯ ಸಚಿವ ಕೆ.ಸುಧಾಕರ್ ಸದಾಶಿವನಗರ ನಿವಾಸಕ್ಕೆ ಭೇಟಿ ನೀಡಿದರು. ಈ ಸಂಧರ್ಭದಲ್ಲಿ ಪುನೀತ್ ರಾಜ್‍ಕುಮಾರ್ ನಿವಾಸದಲ್ಲಿರುವ ಅಪ್ಪು ಭಾವಚಿತ್ರಕ್ಕೆ ಸ್ವಾಮೀಜಿ ಪುಷ್ಪ ನಮನ ಸಲ್ಲಿಸಿದ್ದಾರೆ.
ರಾಘವೇಂದ್ರ ರಾಜ್‍ಕುಮಾರ್ ಜೊತೆ ನಿರ್ಮಲಾನಂದ ಸ್ವಾಮೀಜಿ ಪುನೀತ್ ಪತ್ನಿ ಅಶ್ವಿನಿ ಅವರ ಸನ್ಮಾನಿಸಿದ ನಿರ್ಮಲಾನಂದ ಸ್ವಾಮೀಜಿ ಬಳಿಕ ಸುಮಾರು ಅರ್ಥ ಗಂಟೆಗಳ ಕಾಲ ಪುನೀತ್ ಪತ್ನಿ ಅಶ್ವಿನಿ, ರಾಘವೇಂದ್ರ ರಾಜ್‍ಕುಮಾರ್ ಜೊತೆ ಮಾತನಾಡಿ ಸಾಂತ್ವನ ಹೇಳಿದ್ದಾರೆ. ಜೊತೆಗೆ ಅಮೆರಿಕದಲ್ಲಿರುವ ಮಠಕ್ಕೆ ಹಾಗೂ ಆದಿಚುಂಚನಗಿರಿ ಮಹಾಸಂಸ್ಥಾನದ ಮಠಕ್ಕೆ ಬನ್ನಿ ಎಂದು ಅಶ್ವಿನಿ ಪುನಿತ್ ರಾಜ್‍ಕುಮಾರ್ ಅವರನ್ನು ಸ್ವಾಮೀಜಿ ಆಹ್ವಾನಿಸಿದ್ದಾರೆ.
ಪುನೀತ್ ರಾಜ್‍ಕುಮಾರ್ ಭಾವಚಿತ್ರಕ್ಕೆ ಕೆ.ಸುಧಾಕರ್ ನಮನ ಇದನ್ನೂ ಓದಿ:ಬಿಳಿ ಬಿಕನಿಯಲ್ಲಿ ಇಲಿಯಾನಾ ಬಾತ್.. ಆಕೆಯ ಮಾದಕ ನೋಟಕ್ಕೆ ಪಡ್ಡೆ ಹುಡುಗರು ಫುಲ್ ಫಿದಾ