ಬೆಂಗಳೂರು: ನಿರ್ಭಯಾ ಅತ್ಯಚಾರಗೈದು ಕೊಲೆ ಮಾಡಿದ ಹಂತಕರಿಗೆ ಇದೀಗ ಗಲ್ಲು ಶಿಕ್ಷೆಯಾಗಿದೆ. ಶುಕ್ರವಾರ ಮುಂಜಾನೆ 5.30ಕ್ಕೆ ತಿಹಾರ್ ಜೈಲಿನಲ್ಲಿ ನಿರ್ಭಯಾ ಹಂತಕರನ್ನು ಗಲ್ಲಿಗೇರಿಸಿದ್ದು, ಈ ನಿರ್ಧಾರ ಎಲ್ಲರಲ್ಲೂ ಸಂತಸ ತಂದಿದೆ.
ನಿರ್ಭಯಾ ಆತ್ಮಕ್ಕೆ ಈಗ ಶಾಂತಿ ಸಿಗಲಿದೆ : ಅಶಿತಾ ಚಂದ್ರಪ್ಪ - ನಿರ್ಭಯಾ ಅತ್ಯಚಾರಗೈದು ಕೊಲೆ ಮಾಡಿದ ಹಂತಕರಿಗೆ ಇಂದು ಗಲ್ಲು ಶಿಕ್ಷೆ
ನಿರ್ಭಯಾ ಸಾವಿಗೆ ಅಂತೂ ನ್ಯಾಯ ದೊರಕಿದೆ. ಕಳೆದ ಏಳು ವರ್ಷಗಳ ಹಿಂದೆ ಇಡೀ ದೇಶವನ್ನೇ ಬೆಚ್ಚಿ ಬೀಳಿಸಿದ ನಿರ್ಭಯಾ ಪ್ರಕರಣಕ್ಕೆ ಇಂದು ಫುಲ್ ಸ್ಟಾಪ್ ಸಿಕ್ಕಿದೆ.

ಕಿರುತೆರೆ ನಟಿ ಆಶಿತ ಚಂದ್ರಪ್ಪ ಕೂಡಾ ಇದನ್ನು ಪ್ರಶಂಸಿದ್ದು ಬಹಳ ಸಂತಸ ವ್ಯಕ್ತಪಡಿಸಿದ್ದಾರೆ. ಇತ್ತೀಚಿನ ದಿನಗಳಲ್ಲಿ ತಮ್ಮ ಸುತ್ತಮುತ್ತ ನಡೆಯುತ್ತಿರುವ ಅತ್ಯಾಚಾರ, ಕೊಲೆ ಪ್ರಕರಣಗಳಿಂದ ನಾನು ತೀವ್ರ ಅಸಮಾಧಾನಕ್ಕೆ ಒಳಗಾಗಿದ್ದೆ. ಆದರೆ ಇಂದು ಆ ಅಸಮಾಧಾನ ಮಾಯವಾಗಿ ನಗು ಮೂಡಿದೆ. ಸೆಲೆಬ್ರೆಟ್ ಮಾಡುವ ಸಮಯ ಇದು ಎಂದರೆ ತಪ್ಪಲ್ಲ. ಕಳೆದ ಏಳು ವರುಷಗಳ ಹಿಂದೆ ನಡೆದ ನಿರ್ಭಯಾ ಪ್ರಕರಣಕ್ಕೆ ಇದೀಗ ನ್ಯಾಯ ದೊರಕಿದೆ.
ನಿಜವಾಗಿ ಹೇಳಬೇಕೆಂದರೆ ನಿರ್ಭಯಾ ತೀರ್ಪು ತಡವಾಗುತ್ತಿದ್ದುದು ಕಂಡು ನಾನು ಆಕೆಯ ಸಾವಿಗೆ ನ್ಯಾಯ ಸಿಗದು ಎಂದೇ ಭಾವಿಸಿದ್ದೆ. ಪ್ರತಿ ಬಾರಿಯೂ ನ್ಯಾಯಾಲಯದ ತೀರ್ಮಾನ ಹೊರಬಂದ ಬಳಿಕ ಕಸಿವಿಸಿಯಾಗುತ್ತಿತ್ತು. ನನಗೆ ಹೀಗೆ ಆಗುತ್ತಿರಬೇಕಾದರೆ ಇನ್ನು ಆಕೆಯ ಹೆತ್ತವರಿಗೆ ಅದೆಷ್ಟು ಸಂಕಟವಾಗಿರಬೇಕು? ಎಂದು ಹೇಳಿರುವ ಆಶಿತ ಚಂದ್ರಪ್ಪ, ಕೊನೆಗೂ ಜನರ ಪ್ರಾರ್ಥನೆಗೆ ಫಲ ದೊರಕಿತು. ಖಂಡಿತಾ ನಿರ್ಭಯಾ ಆತ್ಮಕ್ಕೆ ಶಾಂತಿ ದೊರಕಿರಬಹುದು. ಮಾತ್ರವಲ್ಲ ಏಳು ವರುಷಗಳ ನಂತರ ನಿರ್ಭಯಾ ಹೆತ್ತವರು ನೆಮ್ಮದಿಯ ನಿಟ್ಟುಸಿರು ಬಿಟ್ಟಿರಬಹುದು ಎಂದಿದ್ದಾರೆ.