ಕರ್ನಾಟಕ

karnataka

ETV Bharat / sitara

ಮಜಾಭಾರತದಿಂದ ಅನುಪಮಾ ಗೌಡ ಔಟ್​​... ಅವರ ಜಾಗಕ್ಕೆ ಯಾರು? - ನಿರಂಜನ್​​ ದೇಶಪಾಂಡೆ

ಮಜಾಭಾರಾತ ಕಾರ್ಯಕ್ರಮದಲ್ಲಿ ಒಂದು ಸಣ್ಣ ಬದಲಾವಣೆಯಾಗಿದೆ‌‌. ಅದೇನಂತಿರಾ, ಈ ಕಾರ್ಯಕ್ರಮದಲ್ಲಿ ನಿರೂಪಣೆ ಮಾಡುವ ಮೂಲಕ ಮನ ಸೆಳೆಯುತ್ತಿದ್ದ ಅನುಪಮಾ ಗೌಡ ಬದಲಿಗೆ ಇದೀಗ ನಿರಂಜನ ದೇಶಪಾಂಡೆ ಕಾಣಿಸಿಕೊಂಡಿದ್ದಾರೆ. ನಿರೂಪಣೆಯ ಜೊತೆಗೆ ಗೆಸ್ಟ್ ಆಗಿಯೂ ನಿರಂಜನ್​ ಕಾರ್ಯಕ್ರಮದಲ್ಲಿ ಮಿಂಚಲಿದ್ದಾರೆ.

niranjan deshpande anchor in majabharata
ಮಜಾಭಾರತದಲ್ಲಿ ಇನ್ಮುಂದೆ ಕಾಣಿಸಲ್ಲ ಅನುಪಮಾ ಗೌಡ

By

Published : Dec 7, 2019, 1:44 PM IST

ಕಲರ್ಸ್ ಸೂಪರ್ ವಾಹಿನಿಯಲ್ಲಿ ವಾರವಿಡೀ ವೀಕ್ಷಕರಿಗೆ ನವಿರಾದ ಹಾಸ್ಯದ ಮೂಲಕ ಮನರಂಜನೆಯ ರಸದೌತಣ ಉಣಬಡಿಸುವ ಕಾರ್ಯಕ್ರಮ ಮಜಾಭಾರತ. ಈಗಾಗಲೇ ಯಶಸ್ವಿ ಎರಡು ಸೀಸನ್​ಗಳನ್ನು ಪೂರೈಸಿರುವ ಮಜಾಭಾರತದ ಮೂರನೇ ಸೀಸನ್ ಆರಂಭವಾಗಿದೆ‌.

ಮಜಾಭಾರಾತ ಕಾರ್ಯಕ್ರಮದಲ್ಲಿ ಒಂದು ಸಣ್ಣ ಬದಲಾವಣೆಯಾಗಿದೆ‌‌. ಅದೇನಂತಿರಾ, ಈ ಕಾರ್ಯಕ್ರಮದಲ್ಲಿ ನಿರೂಪಣೆ ಮಾಡುವ ಮೂಲಕ ಮನ ಸೆಳೆಯುತ್ತಿದ್ದ ಅನುಪಮಾ ಗೌಡ ಬದಲಿಗೆ ಇದೀಗ ನಿರಂಜನ ದೇಶಪಾಂಡೆ ಕಾಣಿಸಿಕೊಂಡಿದ್ದಾರೆ. ನಿರೂಪಣೆಯ ಜೊತೆಗೆ ಗೆಸ್ಟ್ ಆಗಿಯೂ ನಿರಂಜನ್​ ಕಾರ್ಯಕ್ರಮದಲ್ಲಿ ಮಿಂಚಲಿದ್ದಾರೆ.

ನಿರಂಜನ್​ ದೇಶಪಾಂಡೆ

ಸದ್ಯ ಅನುಪಮಾ ಸಿನಿಮಾದಲ್ಲಿ ನಟಿಸುತ್ತಿರುವ ಕಾರಣ ಅವರಿಗೆ ಮಜಾಭಾರತ ಕಾರ್ಯಕ್ರನದಲ್ಲಿ ಭಾಗವಹಿಸಲು ಸಾಧ್ಯವಾಗುತ್ತಿಲ್ಲ. ಅದೇ ಕಾರಣಕ್ಕೆ ಅವರ ಜಾಗಕ್ಕೆ ನಿರಂಜನ ದೇಶಪಾಂಡೆ ಬಂದಿದ್ದಾರೆ. ಮಾತ್ರವಲ್ಲ ನಿರಂಜನ ಅವರ ಜೊತೆಗೆ ಕನ್ನಡ ಕೋಗಿಲೆಯ ನಿರೂಪಕರಾಗಿ ಕರ್ನಾಟಕದಾದ್ಯಂತ ಮನೆ ಮಾತಾಗಿದ್ದ ಚೆಂದುಳ್ಳಿ ಚೆಲುವೆ ಆರ್​​ಜೆ ಸಿರಿ ಕೂಡಾ ಮಜಾಭಾರತದಲ್ಲಿ ನಿರೂಪಣೆ ಮಾಡಲಿದ್ದಾರೆ.

ABOUT THE AUTHOR

...view details