ಬೆಂಗಳೂರು:ಅಣ್ಣಾವ್ರ ಮೊಮ್ಮಗಳು ಧನ್ಯಾ ರಾಮ್ಕುಮಾರ್ ಅಭಿನಯದ ಮೊದಲ ಚಿತ್ರ "ನಿನ್ನ ಸನಿಹಕೆ" ಇಂದು ಸೆಟ್ಟೇರಿದೆ. ನಗರದ ದೊಡ್ಡಗಣಪತಿ ದೇವಾಲಯದಲ್ಲಿ ನಡೆದ ಚಿತ್ರದ ಮುಹೂರ್ತ ಕಾರ್ಯಕ್ರಮಕ್ಕೆ ಪವರ್ ಸ್ಟಾರ್ ಪುನೀತ್ ರಾಜ್ ಕುಮಾರ್, ರಾಘವೇಂದ್ರ ರಾಜ್ ಕುಮಾರ್, ಪೂರ್ಣಿಮಾ ರಾಮ್ ಕುಮಾರ್, ಲಕ್ಷ್ಮಿ ಗೋವಿಂದರಾಜು ಹಾಗೂ ನಿರ್ದೇಶಕ ದಿನಕರ್ ತೂಗುದೀಪ ಅಗಮಿಸಿ ಚಿತ್ರ ತಂಡಕ್ಕೆ ಶುಭಕೋರಿದ್ರು.
ಅಲ್ಲದೆ, ಚಿತ್ರಕ್ಕೆ ಕ್ಲಾಪ್ ಮಾಡಿ ಮಾತನಾಡಿದ ಪವರ್ ಸ್ಟಾರ್, ನಮ್ಮ ಕುಟುಂಬದ ಮೂರನೇ ತಲೆಮಾರಿನಿಂದ ನಾಲ್ಕು ಜನ ಇಂಡಸ್ಟ್ರಿಗೆ ಎಂಟ್ರಿ ಕೊಡ್ತಿದ್ದಾರೆ. ಅಣ್ಣಾವ್ರ ಫ್ಯಾಮಿಲಿಯಿಂದ ಮೊದಲ ಹೆಣ್ಣು ಮಗಳು ಚಿತ್ರರಂಗಕ್ಕೆ ಎಂಟ್ರಿಕೊಡ್ತಿದ್ದಾರೆ ಎಂಬ ಪ್ರಶ್ನೆಗೆ ಪ್ರತಿಕ್ರಿಯೆ ನೀಡಿದ ಅಪ್ಪು, ನಮಗೆ ಹೆಣ್ಣು ಗಂಡೆಂಬ ಭೇದವಿಲ್ಲ. ಅದ್ರೆ ಶ್ರದ್ಧೆಯಿಂದ ಕೆಲಸ ಮಾಡಬೇಕು ಅಷ್ಟೇ ಎಂದು ಧನ್ಯಾ ರಾಮ್ ಕುಮಾರ್ ಗೆ ಪವರ್ ಸ್ಟಾರ್ ಕಿವಿಮಾತು ಹೇಳಿದ್ರು.