ಕರ್ನಾಟಕ

karnataka

ETV Bharat / sitara

'The Sound of Chaos​' ರಿಲೀಸ್​: ಸಿನಿಪ್ರಿಯರಿಗೆ ಸನಿಹವಾದ 'ನಿನ್ನ ಸನಿಹಕೆ' ಹಾಡು - ನಿನ್ನ ಸನಿಹಕೆ ಸಿನಿಮಾ

ನಿನ್ನ ಸನಿಹಕೆ ಚಿತ್ರದ 'The Sound of Chaos​' ಹಾಡು ರಿಲೀಸ್​ ಆಗಿದ್ದು, ಸಖತ್​ ಸೌಂಡ್​ ಮಾಡುತ್ತಿದೆ.

The Sound of Chaos
'The Sound of Chaos​' ರಿಲೀಸ್

By

Published : Mar 25, 2021, 6:54 AM IST

ನಿನ್ನ ಸನಿಹಕೆ ಚಿತ್ರದ 'The Sound of Chaos​' ಹಾಡು ಸ್ಯಾಂಡಲ್​ವುಡ್​ನಲ್ಲಿ ಹೊಸ ಅಲೆ ಸೃಷ್ಟಿಸುತ್ತಿದೆ. ರಘು ದೀಕ್ಷಿತ್ ಕಂಪೋಸ್ ಮಾಡಿ ಹಾಡಿರುವ ಈ ರ‍್ಯಾಪ್ ಸಾಂಗ್ ಸಖತ್​ ಸೌಂಡ್​ ಮಾಡ್ತಿದೆ.

ಲವ್ ಫೇಲ್ ಆದ ಬಳಿಕ ಹೀರೋ ಈ ಹಾಡು ಹಾಡುತ್ತಿರುವಂತೆ ಭಾಸವಾಗುವ ಈ ಸಾಂಗ್​ಗೆ ಸಾಹಿತ್ಯ ನೀಡಿದ್ದು ವಾಸುಕಿ ವೈಭವ್. 'ಯಾರು ಯಾರು ನಾನ್ ಯಾರು ಈ ನಶೆಯೂ ಹೇಳಿದೆ ಪತ್ತೆಯಾ' ಎಂಬ ಕ್ಯಾಚಿ ಲಿರಿಕ್ಸ್ ಇರೋ‌ ಈ ಹಾಡು ಕೇಳೋದಕ್ಕೆ ಸಖತ್ ಮಜವಾಗಿದೆ. ವಿರಹ ಮನಸುಗಳಿಗೆ ನೇರವಾಗಿ ನಾಟುವಂತಿದೆ.

ಮ್ಯೂಸಿಕಲಿ‌ ಸಖತ್ ಸ್ಪೆಷಲ್ ಆಗಿ ಕಾಣುತ್ತಿರುವ ಸಿನಿಮಾ ದೊಡ್ಡ ನಿರೀಕ್ಷೆಯನ್ನು ಹುಟ್ಟಿಸಿದೆ. ಈಗಾಗಲೇ ವಿಡಿಯೋ ಹಾಡುಗಳಿಂದ ದೊಡ್ಡ ನಿರೀಕ್ಷೆಯನ್ನ ಹುಟ್ಟಿಸಿರುವ 'ನಿನ್ನ ಸನಿಹಕೆ'‌ ಟೀಮ್ ವರ್ಕ್ ನೋಡಿದ್ರೆ ಇದು ಸಾಮಾನ್ಯ ಸಿನಿಮಾವಂತೂ ಅಲ್ಲ ಎಂದು ಭಾಸವಾಗುತ್ತದೆ.

ಸೂರಜ್ ಗೌಡ ನಟಿಸಿ ನಿರ್ದೇಶಿಸಿರುವ ಈ ಚಿತ್ರದಲ್ಲಿ ಧನ್ಯರಾಮ್ ಕುಮಾರ್ ಮೊದಲ ಬಾರಿಗೆ ನಾಯಕಿಯಾಗಿ ಕಾಣಿಸಿಕೊಂಡಿದ್ದಾರೆ. ವೈಟ್ ಆ್ಯಂಡ್ ಗ್ರೇ ಪಿಕ್ಚರ್ಸ್ ಬ್ಯಾನರ್ ಅಡಿ ಅಕ್ಷಯ್ ರಾಜಶೇಖರ್, ರಂಗನಾಥ್ ಕುಡ್ಲಿ ನಿರ್ಮಿಸಿದ್ದಾರೆ. ಸದ್ಯ ಈ ಲಿರಿಕಲ್ ವಿಡಿಯೋದಿಂದ ಸದ್ದು ಮಾಡ್ತಿರುವ ನಿನ್ನ ಸನಿಹಕೆ‌ ತಂಡ ಇಷ್ಟರಲ್ಲೇ ಟ್ರೈಲರ್ ರಿಲೀಸ್ ಮಾಡೋ‌ ಪ್ಲಾನ್​ನಲ್ಲಿದೆ. ಬ್ಯಾಕ್ ಟು ಬ್ಯಾಕ್ ಬಹುಭಾಷೆಯಲ್ಲಿ ಕನ್ನಡ ಸಿನಿಮಾಗಳು ಬರುತ್ತಿರುವ‌ ಹೊತ್ತಲ್ಲಿ, ಕನ್ನಡದಲ್ಲಿ ಮಾತ್ರ ಬಿಡುಗಡೆ ಅನ್ನೋ ಟ್ಯಾಗ್ ಲೈನ್​ನೊಂದಿಗೆ ನಿನ್ನ‌ಸನಿಹಕೆ‌ ಸಿನಿಮಾ ತಂಡ ಏಪ್ರಿಲ್ 16ಕ್ಕೆ ಪ್ರೇಕ್ಷಕರೆದುರಿಗೆ ಬರ್ತಿದೆ. ವಿಶ್ವದಾದ್ಯಂತ ಕೆ.ಆರ್.ಜಿ ಸ್ಟುಡಿಯೋ ಈ ಚಿತ್ರವನ್ನ ರಿಲೀಸ್ ಮಾಡ್ತಿದೆ.

ABOUT THE AUTHOR

...view details