ಕರ್ನಾಟಕ

karnataka

ETV Bharat / sitara

ದೊಡ್ಡ ಚಿತ್ರಗಳು ಒಂದೇ ದಿನ ಬಿಡುಗಡೆಯಿಂದ ನಮ್ಮ ಸಿನಿಮಾಗೆ ತೊಂದರೆ - ನಟ ಸೂರಜ್‌, ಧನ್ಯಾ - ನಿನ್ನ ಸನಿಹಕೆ ಚಿತ್ರ ತಂಡ ಸುದ್ದಿಗೋಷ್ಠಿ

ಥಿಯೇಟರ್‌ಗಳಲ್ಲಿ 100 ರಷ್ಟು ಪ್ರೇಕ್ಷಕರಿಗೆ ಸರ್ಕಾರ ಅನುಮತಿ ನೀಡಿರುವ ಹಿನ್ನೆಲೆಯಲ್ಲಿ ಅಕ್ಟೋಬರ್‌ 14 ರಂದು ಕೋಟಿಗೊಬ್ಬ 3 ಹಾಗೂ ಸಲಗ ಸಿಮಾನಗಳು ಒಟ್ಟಿಗೆ ಬಿಡುಗಡೆಯಾಗುತ್ತಿವೆ. ಇದರ ನಡುವೆ ಅಕ್ಟೋಬರ್ 8 ನಿನ್ನೆ ಸನಿಹಕೆ ಚಿತ್ರ ಬಿಡುಗಡೆಯಾಗುತ್ತಿದ್ದು, ದೊಡ್ಡ ಚಿತ್ರಗಳು ಒಮ್ಮೆಗೆ ರಿಲೀಸ್‌ ಆಗುವುದರಿಂದ ತಮ್ಮ ಚಿತ್ರದ ಮೇಲೆ ಪರಿಣಾಮ ಬೀರುತ್ತೆ ಎಂದು ನಿನ್ನೆ ಸನಿಹಕೆ ಚಿತ್ರದ ನಾಯಕ ಸೂರಜ್‌ ಗೌಡ ಹಾಗೂ ನಟಿ ಧನ್ಯಾ ರಾಮ್‌ ಕುಮಾರ್‌ ಹೇಳಿದ್ದಾರೆ.

Ninna Sanihake Movie actor suraj gowda, dhanya ram kumar press meet
ದೊಡ್ಡ ಚಿತ್ರಗಳು ಒಂದೇ ಬಿಡುಗಡೆಯಿಂದ ನಮ್ಮ ಸಿನಿಮಾಗೆ ತೊಂದರೆ - ನಟ ಸೂರಜ್‌, ಧನ್ಯಾ ರಾಮ್‌ ಕುಮಾರ್‌

By

Published : Sep 30, 2021, 5:07 AM IST

Updated : Sep 30, 2021, 12:21 PM IST

ಬೆಂಗಳೂರು:ಮಹಾಮಾರಿ ಕೋವಿಡ್‌ನಿಂದಾಗಿ ಕಳೆದ ನಾಲ್ಕೈದು ತಿಂಗಳಿಂದ ಕನ್ನಡ ಚಿತ್ರರಂಗದಲ್ಲಿ ಸಿನಿಮಾ‌ ಬಿಡುಗಡೆ ಇಲ್ಲದೇ ಹಾಗೂ 50 ಪರ್ಸೆಂಟ್ ಪ್ರೇಕ್ಷಕರಿಗೆ ಅನುಮತಿ ಇದ್ದ ಕಾರಣ ಅದೆಷ್ಟೋ ಚಿತ್ರಮಂದಿರಗಳು ಬಾಗಿಲು ಮುಚ್ಚಿದ್ದವು. ಅದ್ರೀಗ ರಾಜ್ಯ ಸರ್ಕಾರ ಚಿತ್ರಮಂದಿರಗಳಲ್ಲಿ 100 ರಷ್ಟು ಪ್ರೇಕ್ಷಕರಿಗೆ ಅನುಮತಿ ನೀಡಿದೆ. ಹೀಗಾಗಿ ಸಾಲು ಸಾಲು ಚಿತ್ರಗಳು ಥಿಯೇಟರ್‌ಗೆ ಲಗ್ಗೆ ಹಿಡೋದಿಕ್ಕೆ ಸಜ್ಜಾಗಿವೆ. ಈ ಸಾಲಿನಲ್ಲಿ ಕಿಚ್ಚ ಸುದೀಪ್​ ನಟನೆಯ ಕೋಟಿಗೊಬ್ಬ 3 ಹಾಗೂ ದುನಿಯಾ ವಿಜಯ್​ ನಟನೆಯ ಸಲಗ ಒಂದೇ ದಿನ ತೆರೆಗೆ ಬರುತ್ತಿದೆ.

ದೊಡ್ಡ ಚಿತ್ರಗಳು ಒಂದೇ ದಿನ ಬಿಡುಗಡೆಯಿಂದ ನಮ್ಮ ಸಿನಿಮಾಗೆ ತೊಂದರೆ - ನಟ ಸೂರಜ್‌, ಧನ್ಯಾ

ಇದರಿಂದ ಸಿನಿಮಾ ಪ್ರೇಕ್ಷಕ ಯಾವ ಸಿನಿಮಾ ನೋಡಬೇಕು ಎನ್ನುವ ಗೊಂದಲ ಒಂದು‌ ಕಡೆಯಾದರೆ ಮತ್ತೊಂದು ಕಡೆ ಕೋಟ್ಯಾಂತರ ರೂಪಾಯಿ ಸುರಿದು ನಿರ್ಮಾಪಕರು ಸಿನಿಮಾ ಮಾಡಿರುತ್ತಾರೆ. ಆದರೆ ಇಬ್ಬರು ಸ್ಟಾರ್ ನಟರ​ ಸಿನಿಮಾಗಳು ಒಂದೇ ದಿನ ತೆರೆಗೆ ಬಂದರೆ ಇದರಿಂದ ನಷ್ಟವಾಗುವುದು ನಿರ್ಮಾಪಕರಿಗೆ. ಈ ಸಮಸ್ಯೆ ಗೊತ್ತಿದ್ದರೂ ಕೋಟಿಗೊಬ್ಬ 3 ಹಾಗೂ ಸಲಗ ಚಿತ್ರಗಳು ಅಕ್ಟೋಬರ್ 14ಕ್ಕೆ ಬಿಡುಗಡೆ ಆಗುತ್ತಿದೆ. ಆದರೆ ಈ‌ ಸಿನಿಮಾಗಳಿಗಿಂತ ಮುಂಚಿತವಾಗಿ ನಿನ್ನ‌ ಸನಿಹಕೆ ಸಿನಿಮಾ ಬಿಡುಗಡೆ ಆಗುತ್ತಿದೆ.

'ಚಿತ್ರತಂಡಗಳು ಮಾತಾಡಿಕೊಂಡು ಸಿನಿಮಾ ರಿಲೀಸ್‌ ಮಾಡಿ':

ಸೂರಜ್ ಗೌಡ ಅಭಿನಯದ ಜೊತೆಗೆ ನಿರ್ದೇಶನ ಮಾಡಿರೋ ಹಾಗೂ ಧನ್ಯಾ ರಾಮ್ ಕುಮಾರ್ ಅಭಿನಯದ ನಿನ್ನ ಸನಿಹಕೆ ಚಿತ್ರ, ಅಕ್ಟೋಬರ್ 8 ರಂದು ಬಿಡುಗಡೆ ಆಗುತ್ತಿದೆ. ಈ‌ ಸಿನಿಮಾ ಬಿಡುಗಡೆ ಆಗಿ ಒಂದೇ ವಾರಕ್ಕೆ ಇಬ್ಬರು ಸ್ಟಾರ್ ನಟರ ಸಿನಿಮಾಗಳು ಬಿಡುಗಡೆ ಆಗುವುದರಿಂದ ಸಹಜವಾಗಿ ಚಿತ್ರಮಂದಿರಗಳ‌ ಸಮಸ್ಯೆ ಆಗುತ್ತೆ. ಈ ಕಾರಣಕ್ಕೆ ಸೂರಜ್ ಗೌಡ ಹಾಗೂ ಧನ್ಯಾ ರಾಮ್ ಕುಮಾರ್, ಇಬ್ಬರು ಸ್ಟಾರ್ ನಟರ ಸಿನಿಮಾಗಳು ಒಂದೇ ದಿನ‌ ರಿಲೀಸ್ ಆಗುವುದರಿಂದ, ನಮ್ಮಂಥ ಕಡಿಮೆ ಬಜೆಟ್ ಸಿನಿಮಾಗಳ‌ ಮೇಲೆ‌ ಪರಿಣಾಮ ಬೀರುತ್ತದೆ. ಹೀಗಾಗಿ ದಯವಿಟ್ಟು ಕೋಟಿಗೊಬ್ಬ 3, ಸಲಗ ಚಿತ್ರತಂಡಗಳು ಮಾತನಾಡಿಕೊಂಡು ಸಿನಿಮಾ ಬಿಡುಗಡೆ ಮಾಡಿ ಎಂದು ನಿನ್ನ ಸನಿಹಕೆ ನಾಯಕ‌ ಸೂರಜ್ ಗೌಡ, ನಾಯಕಿ ಧನ್ಯಾ ರಾಮ್ ಕುಮಾರ್ ಮನವಿ ಮಾಡಿಕೊಂಡಿದ್ದಾರೆ.

Last Updated : Sep 30, 2021, 12:21 PM IST

ABOUT THE AUTHOR

...view details