ಡಾ. ರಾಜ್ಕುಮಾರ್ ಅವರ ಮೊಮ್ಮಗಳು ಮತ್ತು ನಟ ರಾಮ್ಕುಮಾರ್ ಅವರ ಮಗಳು ಧನ್ಯಾ ರಾಮ್ಕುಮಾರ್ 'ನಿನ್ನ ಸನಿಹಕೆ' ಎಂಬ ಚಿತ್ರದಲ್ಲಿ ನಟಿಸುತ್ತಿರುವ ವಿಷಯ ಗೊತ್ತೇ ಇದೆ. ಈ ಚಿತ್ರ ವರ ಮಹಾಲಕ್ಷ್ಮೀ ಹಬ್ಬದ ಪ್ರಯುಕ್ತ ಆಗಸ್ಟ್ 20ರಂದು ರಾಜ್ಯಾದ್ಯಂತ ಬಿಡುಗಡೆಯಾಗಲು ಸಜ್ಜಾಗಿದೆ. ಈ ಮಧ್ಯೆ, ಭಾನುವಾರ ಚಿತ್ರದ ಟ್ರೈಲರ್ ಬಿಡುಗಡೆಯಾಗಿದೆ.
ರಘು ದೀಕ್ಷಿತ್ ಯೂಟ್ಯೂಬ್ ಮ್ಯೂಸಿಕ್ ಚಾನೆಲ್ನಲ್ಲಿ 'ನಿನ್ನ ಸನಿಹಕೆ' ಚಿತ್ರದ ಟ್ರೈಲರ್ ಬಿಡುಗಡೆಯಾಗಿದ್ದು, ಇದುವರೆಗೆ ಎಂಟು ಲಕ್ಷಕ್ಕೂ ಹೆಚ್ಚು ವೀಕ್ಷಣೆಯನ್ನು ಪಡೆದಿದೆ. ನಾಯಕಿ ಅಮೃತಾ ಅಲಿಯಾಸ್ ಡಿಂಪಿಯ ಪರಿಚಯದಿಂದ ಶುರುವಾಗುವ ಈ ಟ್ರೈಲರ್ನಲ್ಲಿ, ಕ್ರಮೇಣ ನಾಯಕನ ಪರಿಚಯ, ಅವರಿಬ್ಬರ ಸ್ನೇಹ, ಪ್ರೀತಿ, ಕಿತ್ತಾಟ ಮುಂತಾದ ಹಲವು ದೃಶ್ಯಗಳಿವೆ. ಈ ಪ್ರೇಮಕಥೆ ಸುಖಾಂತ್ಯ ಕಾಣುತ್ತದಾ ಅಥವಾ ದುರಂತ ಅಂತ್ಯ ಕಾಣುತ್ತದಾ ಎಂಬುವುದನ್ನು ಆಗಸ್ಟ್ 20ರಂದು ತೆರೆಯ ಮೇಲೆ ನೋಡಬೇಕು.
ಇದನ್ನೂಓದಿ: ವಿಜಯಾನಂದ ಫಸ್ಟ್ಲುಕ್ ಬಿಡುಗಡೆ: ಬಯೋಪಿಕ್ ಆಗ್ತಿದೆ ಡಾ.ವಿಜಯ ಸಂಕೇಶ್ವರ ಜೀವನ