ಕರ್ನಾಟಕ

karnataka

ETV Bharat / sitara

ಕಿಸ್ ಸಿನಿಮಾಕ್ಕೆ ಕಿಸ್​ ಕೊಡಿ ಎಂದ "ಅಯೋಗ್ಯ"..! - ಎ.ಪಿ.ಅರ್ಜುನ್​​​ ನಿರ್ದೇಶನದ ಕಿಸ್​​

ಕಿಸ್​​ ಸಿನಿಮಾ ಚಂದನವನದಲ್ಲಿ ಸಖತ್​ ಸದ್ದು ಮಾಡ್ತಿದ್ದು, ಸಿನಿ ತಾರೆಯರು ಕಿಸ್​​ ಸಿನಿಮಾಕ್ಕೆ ಶುಭಾಶಯ ಕೋರುತ್ತಿದ್ದಾರೆ. ಇದೀಗ ಕಿಸ್​​ಗೆ ವಿಶ್​ ಮಾಡಿರುವ ನಟ ಕ್ವಾಟ್ಲೆ ಸತೀಶ್​, ಹೊಸಬರನ್ನು ಹಾಕಿಕೊಂಡು ಸಿನಿಮಾ ಮಾಡುತ್ತಿರುವ ಎ.ಪಿ ಅರ್ಜುನ್​ಗೆ ಶುಭಾಶಯ ಎಂದಿದ್ದಾರೆ. ಅಲ್ಲದೆ ಕಿಸ್​ ಸಿನಿಮಾದ ನೀನೇ ಮೊದಲು ನೀನೇ ಕೊನೆ ಎಂಬ ಹಾಡು ನನಗೆ ಇಷ್ಟವಾದ ಹಾಡು ಎಂದು ಸತೀಶ್​ ತಿಳಿಸಿದ್ದಾರೆ.

"ಕಿಸ್" ಸಿನಿಮಾಕ್ಕೆ ಕಿಸ್​ ಕೊಡಿ ಎಂದ "ಅಯೋಗ್ಯ"..!

By

Published : Sep 26, 2019, 10:31 PM IST

Updated : Sep 26, 2019, 11:15 PM IST

ಅಂಬಾರಿ ಚಿತ್ರದ ಮೂಲಕ ನಿರ್ದೇಶಕರಾಗಿ ಚಂದನವನಕ್ಕೆ ಪರಿಚಿತರಾದ ಎ.ಪಿ ಅರ್ಜುನ್, ಹೊಸ ಹಿರೋ ಹಿರೋಯಿನ್​ರನ್ನ ಸ್ಯಾಂಡಲ್ ವುಡ್​​ಗೆ ಪರಿಚಯ ಮಾಡಿಸ್ತಿದ್ದು, ಮೊದಲ ಬಾರಿಗೆ ನಿರ್ದೇಶನದ ಜೊತೆ ನಿರ್ಮಾಣಕ್ಕೂ ಕೈ ಹಾಕಿದ್ದಾರೆ.

ಈ ಸಿನಿಮಾ ಚಂದನವನದಲ್ಲಿ ಸಖತ್​ ಸದ್ದು ಮಾಡ್ತಿದ್ದು, ಸಿನಿ ತಾರೆಯರು ಕಿಸ್​​ ಸಿನಿಮಾಕ್ಕೆ ಶುಭಾಶಯ ಕೋರುತ್ತಿದ್ದಾರೆ. ಇದೀಗ ಕಿಸ್​​ಗೆ ವಿಶ್​ ಮಾಡಿರುವ ನಟ ಕ್ವಾಟ್ಲೆ ಸತೀಶ್​, ಹೊಸಬರನ್ನು ಹಾಕಿಕೊಂಡು ಸಿನಿಮಾ ಮಾಡುತ್ತಿರುವ ಎ.ಪಿ ಅರ್ಜುನ್​ಗೆ ಶುಭಾಶಯ ಎಂದಿದ್ದಾರೆ. ಅಲ್ಲದೆ ಕಿಸ್​ ಸಿನಿಮಾದ ನೀನೆ ಮೊದಲು ನೀನೆ ಕೊನೆ ಎಂಬ ಹಾಡು ನನಗೆ ಇಷ್ಟವಾದ ಹಾಡು ಎಂದು ಸತೀಶ್​ ತಿಳಿಸಿದ್ದಾರೆ.

"ಕಿಸ್" ಸಿನಿಮಾಕ್ಕೆ ಕಿಸ್​ ಕೊಡಿ ಎಂದ "ಅಯೋಗ್ಯ"..!

ಕಿಸ್ ಚಿತ್ರ ನಾಳೆ ರಿಲೀಸ್ ಆಗ್ತಿದ್ದು, ನಾನು ಕೂಡ ಈ ಚಿತ್ರಕ್ಕಾಗಿ ಕಾಯ್ತಿದ್ದೇನೆ. ನೀವು ಕೂಡ ಕಿಸ್ ಚಿತ್ರಕ್ಕೆ ಒಂದು ಕಿಸ್ ಕೊಡೋ ಮೂಲಕ ಚಿತ್ರತಂಡಕ್ಕೆ ವಿಶ್​ ಮಾಡಿ ಎಂದು ಅಭಿನಯ ಚತುರ ಕಿಸ್ ಚಿತ್ರಕ್ಕೆ ವಿಶ್ ಮಾಡಿದ್ದಾರೆ.

ಕಿಸ್ ಚಿತ್ರದಲ್ಲಿ ಕಿರುತೆರೆ ನಟ ವಿರಾಟ್ ಹಾಗು ಶ್ರೀಲೀಲಾ ನಟಿಸಿದ್ದು. ವಿ. ಹರಿಕೃಷ್ಣ ಅವರ ಸಂಗೀತದಲ್ಲಿ ಮೂಡಿಬಂದಿರುವ ಹಾಡುಗಳು ಈಗಾಗಲೇ ಮೋಡಿ ಮಾಡಿವೆ. ನಾಳೆ ತೆರೆಗೆ ಬರ್ತಿರುವ "ಕಿಸ್'" ಹದಿಹರೆಯದ ಹೃದಯಗಳಿಗೆ ಲಗ್ಗೆ ಇಡುತ್ತಾ..? ಕಾದು ನೋಡಬೇಕಿದೆ.

Last Updated : Sep 26, 2019, 11:15 PM IST

ABOUT THE AUTHOR

...view details