ಕರ್ನಾಟಕ

karnataka

ETV Bharat / sitara

‘ಬ್ರಹ್ಮಚಾರಿ’ಯ ಫಿಟ್ನೆಸ್​​​​​​​​ ಸೀಕ್ರೆಟ್​​​​​ ಬಿಚ್ಚಿಟ್ಟ ನೀನಾಸಂ ಸತೀಶ್​​​​​​​ - Brahmachari movie

ನೀನಾಸಂ ಸತೀಶ್​ ಅಭಿನಯದ ‘ಬ್ರಹ್ಮಚಾರಿ’ ಚಿತ್ರದ ಹಿಡ್ಕ ಹಿಡ್ಕ.. ತಡ್ಕ ತಡ್ಕ... ಹಾಡಿನ ಲಿರಿಕಲ್ ವಿಡಿಯೋ ರಿಲೀಸ್ ಆಗಿದೆ. ಸಖತ್ ಫಿಟ್ ಆಗಿ ಕಾಣುವ ಸತೀಶ್​, ಚಿತ್ರಕ್ಕಾಗಿಯೇ ಎರಡು ತಿಂಗಳು ಡಯಟ್ ಮಾಡಿ ಜಿಮ್​​ನಲ್ಲಿ ವರ್ಕ್ ಔಟ್ ಮಾಡಿದ್ದರಂತೆ.

ಬ್ರಹ್ಮಚಾರಿ

By

Published : Oct 20, 2019, 9:32 AM IST

ನೀನಾಸಂ ಸತೀಶ್​ ಅಭಿನಯದ ‘ಬ್ರಹ್ಮಚಾರಿ’ ಚಿತ್ರದ ಹಿಡ್ಕ ಹಿಡ್ಕ.. ತಡ್ಕ ತಡ್ಕ... ಹಾಡಿನ ಲಿರಿಕಲ್ ವಿಡಿಯೋ ರಿಲೀಸ್ ಆಗಿದೆ. ನವೀನ್ ಸಜ್ಜು, ಪಿಂಕಿ ಮೈದಾನಿ, ಭಾರ್ಗವಿ ಪಿಳ್ಳೈ ಹಾಡಿರುವ ಹಾಡಿಗೆ ಭರ್ಜರಿ ರೆಸ್ಪಾನ್ಸ್ ಸಿಕ್ಕಿದೆ.

ಸಿನಿ ರಸಿಕರ ಮನ ಗೆದ್ದಿರುವ ಈ ಹಾಡಿನಲ್ಲಿ ನೀನಾಸಂ‌ ಸತೀಶ್ ಹಾಗೂ ಅದಿತಿ ಪ್ರಭುದೇವ ಸಖತ್ತಾಗಿ ಸ್ಟೆಪ್ ಹಾಕಿದ್ದಾರೆ. ಇವರಿಬ್ಬರ ಕೆಮಿಸ್ಟ್ರಿ ಚಿತ್ರ ರಸಿಕರ ಮನಸೋಲುವಂತಿದೆ. ಸಖತ್ ಫಿಟ್ ಆಗಿ ಕಾಣುವ ಸತೀಶ್​, ಚಿತ್ರಕ್ಕಾಗಿಯೇ ಎರಡು ತಿಂಗಳು ಡಯಟ್ ಮಾಡಿ ಜಿಮ್​​ನಲ್ಲಿ ವರ್ಕ್ ಔಟ್ ಮಾಡಿದ್ದರಂತೆ.

ನನ್ನ ಪರ್ಸನಲ್ ಕೋಚ್ ಶ್ಯಾಮ್ ಅವರ ಗೈಡೆನ್ಸ್​​​ನಲ್ಲಿ ಎರಡು ತಿಂಗಳು ವರ್ಕ್ ಔಟ್ ಮಾಡಿದೆ. ನಾನು ವರ್ಕ್ ಔಟ್ ಮಾಡಿರೋದು ಸ್ಕ್ರೀನ್ ಮೇಲೆ ಕಾಣಿಸುತ್ತೆ ಎಂದು ನೀನಾಸಂ ಸತೀಶ್​ ತಿಳಿಸಿದರು.

ಫಿಟ್ನೆಸ್​​ ಸೀಕ್ರೆಟ್​ ಬಿಚ್ಚಿಟ್ಟ ನೀನಾಸಂ ಸತೀಶ್

ಬ್ರಹ್ಮಚಾರಿ ಚಿತ್ರದಲ್ಲಿ ನೀನಾಸಂ ಸತೀಶ್​ ರಾಮು ಪಾತ್ರದಲ್ಲಿ ಕಾಣಿಸಲಿದ್ದು, ಅದಿತಿ ಪ್ರಭುದೇವ ಸುನಿತಾ ಕೃಷ್ಣಮೂರ್ತಿಯಾಗಿ ಮಿಂಚಲಿದ್ದಾರೆ. ಹಿರಿಯ ನಟ ದತ್ತಣ್ಣ, ಶಿವರಾಜ ಕೆ.ಆರ್.​ ಪೇಟೆ, ಅಶೋಕ್​ ಶರ್ಮಾ ಸೇರಿದಂತೆ ಬಹು ತಾರಾಗಣವಿದೆ.

ಬ್ರಹ್ಮಚಾರಿ ಚಂದ್ರ ಮೋಹನ್ ಆಕ್ಷನ್​ ಕಟ್​ ಹೇಳಿರುವ ರೋಮ್ಯಾಂಟಿಕ್ ಎಂಟರ್​​ಟೈನ್​ಮೆಂಟ್​​ ಚಿತ್ರವಾಗಿದ್ದು, ಉದಯ್ ಕೆ. ಮೆಹ್ತಾ ಚಿತ್ರ ನಿರ್ಮಿಸಿದ್ದಾರೆ. ಧರ್ಮ ವಿಶ್ ಸಂಗೀತ ನೀಡಿದ್ದಾರೆ. ನವೆಂಬರ್​ 15ಕ್ಕೆ ಚಿತ್ರ ತೆರೆಗೆ ಅಪ್ಪಳಿಸಲಿದೆ.

ABOUT THE AUTHOR

...view details