ಬೆಂಗಳೂರು: ಕೊರೊನಾ ಎಂಬ ಮಾಹಾಮಾರಿ ವಕ್ಕರಿಸಿದಾಗಿಂದ ಎಷ್ಟೊ ಉದ್ಯಮಗಳು ನಷ್ಟದಲ್ಲಿವೆ. ಮಾರಾಟ ಮಳಿಗೆಗಳು, ಹೋಟೆಲ್ ಉದ್ಯಮ, ಪ್ರವಾಸೋದ್ಯಮ ಸೇರಿದಂತೆ ಚಿತ್ರರಂಗವೂ ಕೂಡ ಭಾರಿ ನಷ್ಟ ಎದುರಿಸುತ್ತಿದೆ. ಅದ್ರಲ್ಲೂ ತೆರೆ ಹಿಂದೆ ಕೆಲಸ ಮಾಡುವ ಮತ್ತು ಸಣ್ಣ ಪುಟ್ಟ ಪಾತ್ರಗಳನ್ನು ನಿರ್ವಹಿಸುತ್ತಿದ್ದ ಕಲಾವಿದರು ಬೀದಿಗೆ ಬಂದಿದ್ದಾರೆ.
ಇನ್ನು ಚಿತ್ರಗಳ ಚಿತ್ರೀಕರಣ ಕೂಡ ಬಹುತೇಕ ನಿಂತಿದ್ದು, ಎಷ್ಟೊ ಕೆಲಸಗಾರರ ಹೊಟ್ಟೆ ಮೇಲೆ ತಣ್ಣೀರ ಬಟ್ಟೆ ಇಟ್ಟಂತಾಗಿದೆ. ಹೀಗಾಗಿ ಕೋವಿಡ್ ನಿಯಂತ್ರಿಸಲು ಸರ್ಕಾರ ಶೇ 50 ರಷ್ಟು ಜನ ಚಿತ್ರಮಂದಿರಗಳಿಗೆ ಹೋಗಲು ಅನುಮತಿ ನೀಡಲಾಗಿತ್ತು. ಇದೀಗ ತಮಿಳುನಾಡು ಸರ್ಕಾರ ಚಿತ್ರರಂಗ ಒಳಿತಿಗಾಗಿ ಶೇ 100 ಜನ ಚಿತ್ರಮಂದಿರಗಳಿಗೆ ಬಂದು ಚಿತ್ರ ವೀಕ್ಷಿಸಲು ಅನುಮತಿ ನೀಡಿದೆ.