ಕರ್ನಾಟಕ

karnataka

ETV Bharat / sitara

ಕೊರೊನಾ ಎಫೆಕ್ಟ್: ಸಿಂಪಲ್ ಆಗಿ ನಡೆಯಲಿದೆ ನಿಖಿಲ್-ರೇವತಿ ವಿವಾಹ - ಸಿಂಪಲ್ ಆಗಿ ನಡೆಯಲಿದೆ ನಿಕಿಲ್-ರೇವತಿ ವಿವಾಹ

ಕೊರೊನಾ ಎಫೆಕ್ಟ್​ ಸ್ಯಾಂಡಲ್​ವುಡ್​ ಯುವರಾಜ ನಿಖಿಲ್ ಕುಮಾರಸ್ವಾಮಿ ವಿವಾಹಕ್ಕೂ ತಟ್ಟಿದೆ. ಈಗಾಗಲೇ ದೇಶಾದ್ಯಂತ ಲಾಕ್​ ಡೌನ್ ಇರುವುದರಿಂದ, ನಿಕಿಲ್-ರೇವತಿ ಮದುವೆ ಸಮಾರಂಭವನ್ನು ಕೇವಲ ಕುಟುಂಬಸ್ಥರು ಮಾತ್ರ ಸೇರಿ ಸಿಂಪಲ್ ಆಗಿ ನಡೆಸಲು ತೀರ್ಮಾನಿಸಿದ್ದಾರೆ.

Nikil-Revathi wedding to be held in simple
ಸಿಂಪಲ್ ಆಗಿ ನಡೆಯಲಿದೆ ನಿಕಿಲ್-ರೇವತಿ ವಿವಾಹ

By

Published : Mar 30, 2020, 7:47 AM IST

Updated : Mar 30, 2020, 10:50 AM IST

ಬೆಂಗಳೂರು: ಕೊರೊನಾ ಎಫೆಕ್ಟ್​ ಹಿನ್ನಲೆ ಸ್ಯಾಂಡಲ್​​ವುಡ್​ ಯುವರಾಜ ನಿಖಿಲ್ ಕುಮಾರಸ್ವಾಮಿ ಅವರ ವಿವಾಹ ಸಮಾರಂಭವನ್ನು ಸಿಂಪಲ್ ಆಗಿ ನೆರವೇರಿಸಲು ತೀರ್ಮಾನಿಸಲಾಗಿದೆ.

ಫೆಬ್ರವರಿ 10 ರಂದು ನಗರದ ತಾಜ್ ವೆಸ್ಟೆಂಡ್ ಹೋಟೆಲ್​ನಲ್ಲಿ ನಿಖಿಲ್-ರೇವತಿ ಎಂಗೇಜ್​ಮೆಂಟ್​ ಅದ್ಧೂರಿಯಾಗಿ ನಡೆದಿತ್ತು. ಮದುವೆಯನ್ನೂ ಅದಕ್ಕಿಂತ ಗ್ರ್ಯಾಂಡ್​ ಮಾಡುವ ಪ್ಲಾನ್​ನಲ್ಲಿ ದೊಡ್ಮನೆಯವರಿದ್ರು. ಆದ್ರೆ, ಕೊರೊನಾ ಭೀತಿ ಅವೆಲ್ಲವನ್ನು ಪಕ್ಕಕ್ಕಿಡುವಂತ ಮಾಡಿದೆ.

ಹೀಗಾಗಿ ಈ ಸಮಯದಲ್ಲಿ ಆಡಂಭರದ ವಿವಾಹ ಬೇಡ ಎಂದು ನಿಖಿಲ್ ಹಾಗೂ ರೇವತಿ ಮನೆಯವರು ತೀರ್ಮಾನಿಸಿದ್ದಾರೆ. ಹೀಗಾಗಿ ಮಂಡ್ಯ ಬಳಿಯ ಜನಪದ ಲೋಕದಲ್ಲಿ ನಡೆಯಬೇಕಿದ್ದ ಅದ್ಧೂರಿ ಮದುವೆಗೆ ಈಗ ಬ್ರೇಕ್ ಹಾಕಲಾಗಿದೆ.

ನಿಕಿಲ್-ರೇವತಿ

ಏಪ್ರಿಲ್ 17 ರಂದು ವಧು ರೇವತಿ ಮನೆಯಲ್ಲಿ ವಿವಾಹ ನಡೆಯಲಿದೆ. ರೇವತಿ ಮನೆಯಿಂದ 20 ಜನ ಹಾಗೂ ನಿಖಿಲ್ ಕುಮಾರಸ್ವಾಮಿ ಮನೆಯಿಂದ 20 ಜನ ಮಾತ್ರ ಮದುವೆಯಲ್ಲಿ ಪಾಲ್ಗೊಳ್ಳಲಿದ್ದಾರೆ. ಯಾವುದೇ ಕಾರಣಕ್ಕೂ ಜನ ಸೇರುವುದು ಬೇಡ ಎಂದು ತಿಳಿಸಲಾಗಿದೆ.

ಮಂಜುನಾಥ್ ಹಾಗೂ ಶ್ರೀದೇವಿ ಅವರ ಪುತ್ರಿ, ಶಾಸಕ ಹಾಗೂ ಮಾಜಿ ಸಚಿವ ಕೃಷ್ಣಪ್ಪ ಅವರ ಹತ್ತಿರದ ಸಂಬಂಧಿ ರೇವತಿ ಜ್ಯುವೆಲ್ಲರಿ ಡಿಸೈನ್​ಲ್ಲಿ ಡಿಪ್ಲೋಮಾ ವ್ಯಾಸಂಗ ಮಾಡಿದ್ದಾರೆ.

Last Updated : Mar 30, 2020, 10:50 AM IST

ABOUT THE AUTHOR

...view details