ಕರ್ನಾಟಕ

karnataka

ETV Bharat / sitara

ಡಬ್ಬಿಂಗ್​ನಲ್ಲಿ ಪೂರ್ಣಗೊಳಿಸಿದ 'ರೈಡರ್​ ಟೀಂ': ಶೀಘ್ರವೇ ತೆರೆಗೆ ಬರಲಿದೆ ಯುವರಾಜನ 4ನೇ ಸಿನಿಮಾ! - Nikhil Kumaraswamy movie Raider completes dubbing

ಒಂದೆಡೆ ಸಿನಿಮಾ, ಇನ್ನೊಂದೆಡೆ ರಾಜಕಾರಣ. ಈ ಎರಡೂ ಕ್ಷೇತ್ರದಲ್ಲಿ ಬ್ಯುಸಿ ಇರುವ ನಿಖಿಲ್‌ ಅವರು ಈವರೆಗೂ ಮಾಡಿದ ಸಿನಿಮಾಗಳ ಸಂಖ್ಯೆ ಕಡಿಮೆ. ಸೀತಾರಾಮ ಕಲ್ಯಾಣ ಸಿನಿಮಾ ಬಳಿಕ ಅವರ ಬೇರಾವುದೇ ಸಿನಿಮಾ ತೆರೆ ಕಂಡಿಲ್ಲ. ಆದರೆ, ಅವರಿಗೆ ಕೈತುಂಬ ಆಫರ್‌ಗಳಿವೆ. ನಿಖಿಲ್‌ ನಟಿಸುತ್ತಿರುವ ನಾಲ್ಕನೇ ಚಿತ್ರ ರೈಡರ್ ಬಗ್ಗೆ ಅಭಿಮಾನಿಗಳಲ್ಲಿ ಕುತೂಹಲ ಹೆಚ್ಚಿಸಿದೆ.

raider
'ರೈಡರ್​ ಟೀಂ'

By

Published : Sep 24, 2021, 12:33 PM IST

ಕನ್ನಡ ಚಿತ್ರರಂಗ ಅಲ್ಲದೇ ತೆಲುಗು ಸಿನಿಮಾ ಇಂಡಸ್ಟ್ರಿಯಲ್ಲಿ ಅದ್ದೂರಿ ಮೇಕಿಂಗ್ ಹಾಗೂ ಟೈಟಲ್​ನಿಂದಲೇ ಹವಾ ಕ್ರಿಯೇಟ್ ಮಾಡಿರುವ ಚಿತ್ರ ರೈಡರ್. ಸೀತಾರಾಮ ಕಲ್ಯಾಣ ಚಿತ್ರದ ನಂತರ ನಿಖಿಲ್ ಕುಮಾರಸ್ವಾಮಿ ಎರಡು ಶೇಡ್​ನಲ್ಲಿ ಕಾಣಿಸಿಕೊಳ್ಳುತ್ತಿರುವ ಚಿತ್ರ ಇದಾಗಿದೆ. ಬಹುತೇಕ ಚಿತ್ರೀಕರಣ ಮುಗಿಸಿರೋ ರೈಡರ್ ಚಿತ್ರತಂಡ ಇಂದು ಡಬ್ಬಿಂಗ್​ ಪೂರ್ಣಗೊಳಿಸಿದೆ.

ಯುವರಾಜ ನಿಖಿಲ್ ಜೊತೆಗೆ ನಟ ಅಚ್ಯುತ್ ಕುಮಾರ್, ಹಿರಿಯ ನಟ ದತ್ತಣ್ಣ, ಶೋಭರಾಜ್, ರಾಜೇಶ್ ನಟರಂಗ, ಚಿಕ್ಕಣ್ಣ, ನಾಯಕಿ ಅನುಷಾ ರೈ, ನಾಯಕಿ ಕಾಶ್ಮೀರಾ ಪರದೇಶಿ ಸೇರಿ ಅನೇಕರು ಬಣ್ಣಹಚ್ಚಿದ್ದಾರೆ.

ರೈಡರ್ ಚಿತ್ರದಲ್ಲಿ, ಯಾರೆಲ್ಲಾ ಡಬ್ಬಿಂಗ್ ಮಾಡಿದ್ದಾರೆ ಅವರ ಪುಟ್ಟ ವಿಡಿಯೋವನ್ನ ಚಿತ್ರತಂಡ ಬಿಡುಗಡೆ ಮಾಡಿದೆ‌. ಈ ಚಿತ್ರದಲ್ಲಿ ದೊಡ್ಡ ತಾರಾ ಬಳಗವಿದೆ ಅನ್ನೋದಕ್ಕೆ ಈ ವಿಡಿಯೋ ಸಾಕ್ಷಿ. ಇನ್ನು ಶೋಭರಾಜ್ ಅವರು 'ಸಿನಿಮಾ ಬೈಕ್ ರೀತಿಯಲ್ಲಿ ವೇಗವಾಗಿ ಸಾಗುತ್ತದೆ' ಎಂದು ಹೊಗಳಿದ್ದಾರೆ.

ಚಿತ್ರತಂಡ ಬಿಡುಗಡೆ ಮಾಡಿದ ವಿಡಿಯೋ

ಹಿರಿಯ ನಟ ದತ್ತಣ್ಣ ಮಾತನಾಡಿ, ಚಿತ್ರದಲ್ಲಿ ಕೆಲಸ ಮಾಡಿರುವ ಎಲ್ಲರಿಗೂ ಶುಭವಾಗಲಿ'' ಎಂದು ಹಾರೈಸಿದ್ದಾರೆ. ಇದರ ಜೊತೆಗೆ ಡಬ್ಬಿಂಗ್ ಮುಗಿಸಿರುವ ನಟ ನಿಖಿಲ್, 'ನಮ್ಮ ರೈಡರ್' ಸಿನಿಮಾದ ಡಬ್ಬಿಂಗ್​ ಇಂದು ಮುಗಿದಿದೆ. ರೈಡರ್ ಸಿನಿಮಾ ಸದ್ಯದಲ್ಲೇ ನಿಮ್ಮೆಲ್ಲರ ಮುಂದೆ ಬರಲಿದೆ. ದಯವಿಟ್ಟು ನೀವೆಲ್ಲರೂ ಪ್ರೋತ್ಸಾಹ ಮಾಡಬೇಕೆಂದು ಮನವಿ ಮಾಡಿಕೊಂಡಿದ್ದಾರೆ.

ಈ ಚಿತ್ರದಲ್ಲಿ ನಿಖಿಲ್ ಕುಮಾರಸ್ವಾಮಿ, ಕಾಲೇಜು ಯುವಕನ ಪಾತ್ರ ಮಾಡಿದ್ದಾರೆ. ಈ ಚಿತ್ರಕ್ಕೆ ಶೀಷಾ ಕುದುವಳ್ಳಿ ಕ್ಯಾಮರಾ ವರ್ಕ್ ಇದ್ದು, ರವಿವರ್ಮ ಸಾಹಸ ಸಂಯೋಜನೆ ಮಾಡಿದ್ದಾರೆ. ರೈಡರ್‌ ಚಿತ್ರಕ್ಕೆ ಟಾಲಿವುಡ್‌ ನಿರ್ದೇಶಕ ವಿಜಯ್‌ ಕುಮಾರ್‌ ಕೊಂಡ ಆ್ಯಕ್ಷನ್‌ - ಕಟ್ ಹೇಳುತ್ತಿದ್ದಾರೆ.
ಇನ್ನು ಈ ಚಿತ್ರಕ್ಕೆ ಅರ್ಜುನ್ ಜನ್ಯ ಸಂಗೀತ ನೀಡಿದ್ದಾರೆ. ನಂದ್ಯಾಲ ರವಿ ಚಿತ್ರಕತೆ ಬರೆದಿದ್ದಾರೆ. ಲಹರಿ ಸಂಸ್ಥೆಯು ಈ ಚಿತ್ರಕ್ಕೆ ಬಂಡವಾಳ ಹೂಡುತ್ತಿದೆ. ಕನ್ನಡ ಮಾತ್ರವಲ್ಲದೇ ತೆಲುಗಿನಲ್ಲಿಯೂ ರೈಡರ್‌ ಸಿನಿಮಾ ನಿರ್ಮಾಣ ಆಗುತ್ತಿದೆ.

ಒಂದೆಡೆ ಸಿನಿಮಾ, ಇನ್ನೊಂದೆಡೆ ರಾಜಕಾರಣ. ಈ ಎರಡೂ ಕ್ಷೇತ್ರದಲ್ಲಿ ಬ್ಯುಸಿ ಇರುವ ನಿಖಿಲ್‌ ಅವರು ಈವರೆಗೂ ಮಾಡಿದ ಸಿನಿಮಾಗಳ ಸಂಖ್ಯೆ ಕಡಿಮೆ. ಸೀತಾರಾಮ ಕಲ್ಯಾಣ ಸಿನಿಮಾ ಬಳಿಕ ಅವರ ಬೇರಾವುದೇ ಸಿನಿಮಾ ತೆರೆಕಂಡಿಲ್ಲ.

ಆದರೆ, ಅವರಿಗೆ ಕೈತುಂಬ ಆಫರ್‌ಗಳಿವೆ. ನಿಖಿಲ್‌ ನಟಿಸುತ್ತಿರುವ ನಾಲ್ಕನೇ ಚಿತ್ರ ರೈಡರ್ ಬಗ್ಗೆ ಅಭಿಮಾನಿಗಳಲ್ಲಿ ಕುತೂಹಲ ಹೆಚ್ಚಿಸಿದೆ. ಡಬ್ಬಿಂಗ್ ಮುಗಿದ ಬಳಿಕ ಡಿಟಿಎಸ್ ಮಿಕ್ಸಿಂಗ್ ಇನ್ನಿತರ ಕೆಲಸಗಳನ್ನು ಮುಗಿಸಿ ಚಿತ್ರಮಂದಿರಕ್ಕೆ ಲಗ್ಗೆ ಇಡಲಿದೆ.

ABOUT THE AUTHOR

...view details