ಸೀತಾರಾಮ ಕಲ್ಯಾಣ ಸಿನಿಮಾ ಬಳಿಕ ರಾಜಕೀಯ, ಮದುವೆ ಅಂತಾ ಬ್ಯುಸಿಯಾಗಿದ್ದ ಜಗ್ವಾರ್ ಸ್ಟಾರ್ ನಿಖಿಲ್ ಕುಮಾರಸ್ವಾಮಿ, ಮೂರನೇ ಚಿತ್ರದ ಪೋಸ್ಟರ್ ಜೊತೆಗೆ ಟೈಟಲ್ ರಿವೀಲ್ ಆಗಿದೆ.
ಕೊರೊನಾ ಆರಂಭಕ್ಕೂ ಮುನ್ನ ಸಿಂಪಲ್ ಆಗಿ ಸೆಟ್ಟೇರಿದ, ಈ ಹೆಸರಿಡದ ಚಿತ್ರದ ಪೋಸ್ಟರ್ ಅನಾವರಣ ಆಗಿದೆ.ಯುವರಾಜನ ಹೊಸ ಚಿತ್ರದ ಹೆಸರು ರೈಡರ್ ಆಗಿದ್ದು, ನಿಖಿಲ್ ಕೂಡ ಔಟ್ ಅಂಡ್ ಔಟ್ ಮಾಸ್ ಅವತಾರದಲ್ಲಿ ಕಾಣಿಸಿಕೊಂಡಿದ್ದಾರೆ.
ಯುವರಾಜನ ಹೊಸ ಚಿತ್ರದ ಟೈಟಲ್ ರಿವೀಲ್ ತೆಲುಗಿನ ನಿರ್ದೇಶಕ ವಿಜಯ್ ಕುಮಾರ್ ಕೊಂಡ ಆಕ್ಷನ್ ಚಿತ್ರಕ್ಕೆ ಆಕ್ಷನ್ ಕಟ್ ಹೇಳುತ್ತಿದ್ದಾರೆ.ಚಿತ್ರಕ್ಕೆ ಅರ್ಜುನ್ ಜನ್ಯ ಸಂಗೀತವಿದ್ದು,ಲಹರಿ ಪ್ರೊಡಕ್ಷನ್ ನಲ್ಲಿ ನಿರ್ಮಾಣ ಆಗುತ್ತಿರುವ ರೈಡರ್ ಚಿತ್ರದ ಮೇಲೆ ಈಗಾಗಲೇ, ಗಾಂಧಿನಗರದಲ್ಲಿ ಕ್ಯೂರ್ಯಾಸಿಟಿ ಹುಟ್ಟಿಸಿದೆ.
ಸದ್ಯಕ್ಕೆ ನಿಖಿಲ್ ಕುಮಾರಸ್ವಾಮಿ ಖಡಕ್ ಲುಕ್ ರಿವೀಲ್ ಆಗಿದ್ದು, ಟೈಟಲ್ ಕೂಡ ಅಷ್ಟೇ ಪವರ್ ಫುಲ್ ಆಗಿದೆ. ರೈಡರ್ ಗೆ ಜೊತೆಯಾಗಿ ಯಾವ ಹೀರೋಯಿನ್ ಜೊತೆಯಾಗುತ್ತಾಳೆ, ಇನ್ನು ಉಳಿದ ಪಾತ್ರ ವರ್ಗಗಳು ಯಾರು ಯಾರು ಅನ್ನೋದು ಆಯ್ಕೆ ಆಗಬೇಕಿದೆ.ಸದ್ಯ ರೈಡರ್ ಪ್ರೊಡಕ್ಷನ್ ಕೆಲಸಗಳು ಶುರುವಾಗಿದ್ದು ಸದ್ಯದಲ್ಲೇ ರೈಡರ್ ಚಿತ್ರದ ಚಿತ್ರೀಕರಣ ಮಾಡಲು ಚಿತ್ರತಂಡ ಪ್ಲಾನ್ ಮಾಡಿದೆ.
ಸದ್ಯಕ್ಕೆ ರೈಡರ್ ಟೈಟಲ್ ಜೊತೆ ಮೋಷನ್ ಪಿಕ್ಚರ್ ಯುವರಾಜನ ಅಭಿಮಾನಿಗಳಿಗೆ ಖುಷಿ ತಂದಿದೆ.