ಕರ್ನಾಟಕ

karnataka

ETV Bharat / sitara

ಯುವರಾಜನ 'ರೈಡರ್' ಸಿನಿಮಾದ ಡವ್ವ ಡವ್ವ ಹಾಡಿನ ಮೇಕಿಂಗ್ ಝಲಕ್! - rider cenema davva davva song making video

ಯುವರಾಜ ನಿಖಿಲ್​​ ಕುಮಾರಸ್ವಾಮಿ ಅಭಿನಯದ ರೈಡರ್ ಸಿನಿಮಾದ 'ಡವ್ವ ಡವ್ವ' ಹಾಡಿನ ಮೇಕಿಂಗ್ ವಿಡಿಯೋವನ್ನ ಚಿತ್ರತಂಡ ಅನಾವರಣ ಮಾಡಿದೆ.

making
'ರೈಡರ್' ಸಿನಿಮಾ ಸಾಂಗ್​ ಮೇಕಿಂಗ್​

By

Published : Oct 25, 2021, 7:29 PM IST

'ಜಾಗ್ವಾರ್' ಹಾಗೂ 'ಸೀತಾರಾಮ ಕಲ್ಯಾಣ' ಚಿತ್ರದ ಮೂಲಕ, ಸ್ಯಾಂಡಲ್​​ವುಡ್​ನಲ್ಲಿ ಬೇಡಿಕೆ ಹೊಂದಿರುವ ನಟ ನಿಖಿಲ್ ಕುಮಾರಸ್ವಾಮಿ. ಟೀಸರ್ ಹಾಗೂ ಹಾಡುಗಳಿಂದ ಕನ್ನಡ ಹಾಗು ತೆಲುಗು ಸಿನಿಮಾ ಇಂಡಸ್ಟ್ರಿಯಲ್ಲಿ ಟಾಕ್ ಆಗುತ್ತಿರುವ ರೈಡರ್ ಸಿನಿಮಾದ ಜಪ ಮಾಡ್ತಾ ಇರೋ ಯುವರಾಜ, ಈಗ ಸೋಷಿಯಲ್ ಮೀಡಿಯಾದಲ್ಲಿ ಸಖತ್ ಟ್ರೆಂಡಿಂಗ್ ನಲ್ಲಿದ್ದಾರೆ.

'ರೈಡರ್' ಸಿನಿಮಾ ಸಾಂಗ್​ ಮೇಕಿಂಗ್​

ಕೆಲ ದಿನಗಳ ಹಿಂದೆ ರೈಡರ್ ಸಿನಿಮಾದ ಡವ್ವ ಡವ್ವ ಎಂಬ ರೊಮ್ಯಾಂಟಿಕ್ ಹಾಡನ್ನ ಚಿತ್ರತಂಡ ಬಿಡುಗಡೆ ಮಾಡಿತ್ತು. ಮ್ಯಾಜಿಕಲ್ ಕಂಪೋಸರ್ ಅರ್ಜುನ್ ಜನ್ಯ ಸಂಯೋಜಿಸಿರುವ ಈ ಹಾಡಿನಲ್ಲಿ ನಿಖಿಲ್ ಸ್ಟೈಲಿಶ್​ ಲುಕ್​ನಲ್ಲಿ ನಟಿ ಕಾಶ್ಮೀರಿ ಪರ್ದೇಸಿ ಜೊತೆ ಬೊಂಬಾಟ್ ಸ್ಟೆಪ್ಸ್‌ ಹಾಕಿದ್ದಾರೆ.

ಕೊರಿಯೋಗ್ರಾಫರ್ ಭೂಷಣ್ ಈ ಹಾಡಿಗೆ ನೃತ್ಯ ಸಂಯೋಜನೆ ಮಾಡಿದ್ದಾರೆ. ಈ ಹಾಡಿನ ಮೇಕಿಂಗ್ ವಿಡಿಯೋವನ್ನ ಚಿತ್ರತಂಡ ಅನಾವರಣ ಮಾಡಿದೆ. ಡವ್ವ ಡವ್ವ ರೊಮ್ಯಾಂಟಿಕ್ ಹಾಡನ್ನ, ಗೀತರಚನೆಕಾರ ಚೇತನ್ ಕುಮಾರ್ ಬರೆದಿದ್ದು, ಗಾಯಕ ಅರ್ಮಾನ್ ಮಲಿಕ್ ಕಂಠಸಿರಿಯಲ್ಲಿ ಹಾಡು ಮೂಡಿ ಬಂದಿದೆ.

ಈ ಚಿತ್ರದಲ್ಲಿ ನಿಖಿಲ್ ಕುಮಾರಸ್ವಾಮಿ ಬಾಸ್ಕೆಟ್ ಬಾಲ್ ಪ್ಲೇಯರ್ ಪಾತ್ರದಲ್ಲಿ ಕಾಣಿಸಿಕೊಂಡಿದ್ದಾರೆ. ನಿಖಿಲ್‌ಗೆ ನಾಯಕಿಯಾಗಿ ಯುವ ನಟಿ ಕಾಶ್ಮೀರ ಪರ್ದೇಸಿ ನಟಿಸಿದ್ದು, ಮತ್ತೊಬ್ಬ ನಾಯಕಿಯಾಗಿ ಅನುಷಾ ರೈ ಅಭಿನಯಿಸಿದ್ದಾರೆ.

ಟಾಲಿವುಡ್ ನಿರ್ದೇಶಕ ವಿಜಯ್ ಕುಮಾರ್ ಕೊಂಡ ಈ ಚಿತ್ರವನ್ನ ನಿರ್ದೇಶನ ಮಾಡಿದ್ದಾರೆ. ಇನ್ನು ದತ್ತಣ್ಣ, ಚಿಕ್ಕಣ್ಣ, ಶೋಭರಾಜ್, ರಾಜೇಶ್ ನಟರಂಗ, ಶಿವರಾಜ್.ಕೆ.ಆರ್.ಪೇಟೆ, ಬಿಗ್​ ಬಾಸ್​ ವಿನ್ನರ್​ ಮಂಜು ಪಾವಗಡ, ಸಂಪದ ಹುಲಿವಾನ, ನಿಹಾರಿಕ ಸೇರಿದಂತೆ ದೊಡ್ಡ ತಾರಬಳಗ ಚಿತ್ರದಲ್ಲಿದೆ.

ಕೆ.ಎಮ್.ಪ್ರಕಾಶ್ ಸಂಕಲನ, ಶರತ್ ಚಕ್ರವರ್ತಿ ಸಂಭಾಷಣೆ, ಭೂಷಣ್ ಕೋರಿಯೊಗ್ರಾಫಿ, ಡಾ.ರವಿವರ್ಮ ಸಾಹಸ ಚಿತ್ರಕ್ಕಿದೆ. ಈ ಚಿತ್ರಕ್ಕೆ ಅರ್ಜುನ್ ಜನ್ಯ ಸಂಗೀತವಿದ್ದು, ಶ್ರೀಶ ಕುಡುವಳ್ಳಿ ಛಾಯಾಗ್ರಹಣ ಚಿತ್ರಕ್ಕಿದೆ. ಚಂದ್ರ ಮನೋಹರನ್ ಹಾಗೂ ಸುನೀಲ್ ಗೌಡ ಜಂಟಿಯಾಗಿ ಈ ಸಿನಿಮಾವನ್ನ ಅದ್ಧೂರಿಯಾಗಿ ನಿರ್ಮಾಣ ಮಾಡಿದ್ದಾರೆ.ಸದ್ಯ ಆಡಿಯೋ ಬಿಡುಗಡೆ ಆಗಿದ್ದು, ರೈಡರ್ ಸಿನಿಮಾ ಸದ್ಯದಲ್ಲೇ ತೆರೆಗೆ ಬರಲಿದೆ.

ABOUT THE AUTHOR

...view details