ಕರ್ನಾಟಕ

karnataka

ETV Bharat / sitara

'ನಾವಿಬ್ಬರೂ ಭೇಟಿಯಾಗಿ ಯುಗಗಳೇ ಕಳೆದಂತೆ ಭಾಸವಾಗುತ್ತಿದೆ' ಅಂದ್ರು ಜಾಗ್ವಾರ್ ಸ್ಟಾರ್!

ನಟ ನಿಖಿಲ್ ಕುಮಾರಸ್ವಾಮಿ ಪತ್ನಿ ರೇವತಿಯೊಂದಿಗಿನ ಫೋಟೋಗೆ 'ನಾವಿಬ್ಬರೂ ಭೇಟಿಯಾಗಿ ಯುಗಗಳೇ ಕಳೆದಂತೆ ಭಾಸವಾಗುತ್ತಿದೆ' ಎಂಬ ಕ್ಯಾಪ್ಷನ್ ಹಾಕಿ ಶೇರ್ ಮಾಡಿದ್ದಾರೆ.

nikhil-kumar-swamy-shared-a-photo with his wife in instagram
ನಿಖಿಲ್ ಕುಮಾರಸ್ವಾಮಿ

By

Published : Jul 17, 2020, 11:56 PM IST

Updated : Jul 18, 2020, 12:50 AM IST

ಜಾಗ್ವಾರ್ ಹಾಗೂ ಸೀತಾರಾಮ ಕಲ್ಯಾಣ ಸಿನಿಮಾಗಳ ಮೂಲಕ ಚಿತ್ರರಂಗದಲ್ಲಿ ಭರವಸೆ ಹುಟ್ಟಿಸಿರುವ ನಟ ನಿಖಿಲ್ ಕುಮಾರಸ್ವಾಮಿ‌ ಸದ್ಯ ಪತ್ನಿಯೊಂದಿಗಿನ ಫೋಟೋಗೆ 'ನಾವಿಬ್ಬರೂ ಭೇಟಿಯಾಗಿ ಯುಗಗಳೇ ಕಳೆದಂತೆ ಭಾಸವಾಗುತ್ತಿದೆ' ಎಂಬ ಕ್ಯಾಪ್ಷನ್ ಹಾಕಿ ಶೇರ್ ಮಾಡಿದ್ದಾರೆ.

ಸಿನಿಮಾ ಜೊತೆಗೆ ರಾಜಕೀಯದಲ್ಲಿ ತೊಡಗಿಕೊಂಡಿರುವ ನಿಖಿಲ್ ಕುಮಾರಸ್ವಾಮಿ, ಸೋಷಿಯಲ್ ಮೀಡಿಯಾದಲ್ಲಿ ಸದಾ ಆ್ಯಕ್ಟಿವ್. ಲಾಕ್​​ಡೌನ್ ವೇಳೆ ರೇವತಿ ಜೊತೆ ಹಸೆಮಣೆ ಏರುವ ಮೂಲಕ ಹೊಸ ಜೀವನಕ್ಕೆ ಕಾಲಿಟ್ಟಿದ್ರು. ಆಗಾಗ ಪತ್ನಿ ಜೊತೆ ಇರುವ ಫೋಟೋಗಳನ್ನು ಶೇರ್ ಮಾಡಿ ಗಮನ ಸೆಳೆಯುತ್ತಾರೆ ಜಾಗ್ವಾರ್ ಸ್ಟಾರ್.

ನಿಖಿಲ್-ರೇವತಿ

ಇದೀಗ ನಿಖಿಲ್ ಕುಮಾರಸ್ವಾಮಿ, ಪತ್ನಿ ಬಗ್ಗೆ ತಮ್ಮದೇ ಪದಗಳಲ್ಲಿ ವರ್ಣಿಸಿದ್ದಾರೆ. ಪತ್ನಿ ರೇವತಿ ಜೊತೆ ಇರುವ ಕ್ಯೂಟ್ ಪೋಟೊವೊಂದನ್ನು ಸೋಷಿಯಲ್ ಮೀಡಿಯಾದಲ್ಲಿ ಶೇರ್ ಮಾಡಿರುವ ಜಾಗ್ವಾರ್ ಸ್ಟಾರ್, ನಾವು ಭೇಟಿಯಾಗಿ ಇಂದಿಗೆ 6 ತಿಂಗಳಾಗಿವೆ. ಜೊತೆಗೆ ನಾವಿಬ್ಬರು ಪತಿ-ಪತ್ನಿಯಾಗಿ ಮೂರು ತಿಂಗಳು ಆಗುತ್ತಿದೆ. ಆದ್ರೆ ನಾವಿಬ್ಬರು ಭೇಟಿಯಾಗಿ ಯುಗಗಳೇ ಕಳೆದಂತೆ ಭಾಸವಾಗುತ್ತಿದೆ ಅಂತಾ ನಿಖಿಲ್ ಕುಮಾರಸ್ವಾಮಿ ಪ್ರೀತಿಯ ಕವಿಯಾಗಿ ತಮ್ಮದೇ ಪದಗಳಲ್ಲಿ ಗುಣಗಾನ ಮಾಡಿದ್ದಾರೆ.

ಸ್ಯಾಂಡಲ್​​ವುಡ್​​ನಲ್ಲಿ ಕ್ಯೂಟ್ ಕಪಲ್ಸ್ ಸಾಲಿನಲ್ಲಿ ನಿಖಿಲ್ ಕುಮಾರಸ್ವಾಮಿ ಮತ್ತು ರೇವತಿ ಜೋಡಿ‌ ಹೊಸದಾಗಿ ಸೇರ್ಪಡೆಗೊಂಡಿದೆ‌. ಸದ್ಯ ನಿಖಿಲ್ ಕುಮಾರಸ್ವಾಮಿ ಪತ್ನಿ ಜೊತೆಗಿರುವ ಫೋಟೋಗೆ ಸಾಕಷ್ಟು ಲೈಕ್ಸ್, ಕ್ಯೂಟ್ ಕಪಲ್ಸ್ ಅಂತಾ ಸಾಕಷ್ಟು ಕಮೆಂಟ್​​ಗಳು ಹರಿದುಬರುತ್ತಿದೆ.

Last Updated : Jul 18, 2020, 12:50 AM IST

ABOUT THE AUTHOR

...view details