ಕರ್ನಾಟಕ

karnataka

By

Published : Dec 7, 2019, 3:27 PM IST

ETV Bharat / sitara

ರಚಿತಾ ರಾಮ್ ಸಹೋದರಿ ಮದುವೆಯಲ್ಲಿ ನಿಖಿಲ್ ಕುಮಾರಸ್ವಾಮಿ ಭಾಗಿ

ನಿತ್ಯಾ ರಾಮ್ ಮದುವೆಗೆ ನಿಖಿಲ್ ಕುಮಾರಸ್ವಾಮಿ ಭಾಗವಹಿಸಿದ್ರು. ಸೀತಾರಾಮ ಕಲ್ಯಾಣ ಸಿನಿಮಾದಲ್ಲಿ ನಿಖಿಲ್ ಕುಮಾರಸ್ವಾಮಿ ಜೊತೆ ರಚಿತಾ ರಾಮ್ ಒಟ್ಟಿಗೆ ಸ್ಕ್ರೀನ್ ಹಂಚಿಕೊಂಡಿದ್ರು. ಇನ್ನು ಈ ಹಿಂದೆ ಆದ್ರೆ ಗಾಂಧಿನಗರದಲ್ಲಿ ನಿಖಿಲ್ ಕುಮಾರಸ್ವಾಮಿ ಹಾಗೂ ರಚಿತಾ ರಾಮ್ ಡೇಟಿಂಗ್ ಮಾಡುತ್ತಿದ್ದಾರೆ ಅಂತಾ ಬಿಸಿ ಬಿಸಿ ಚರ್ಚೆ ಕೂಡ ನಡೆದಿತ್ತು.

Nikhil is involved in Nithya Ram's wedding
ರಚಿತಾ ರಾಮ್ ಸಹೋದರಿ ಮದುವೆಯಲ್ಲಿ ನಿಖಿಲ್ ಕುಮಾರಸ್ವಾಮಿ ಭಾಗಿ

ಡಿಂಪಲ್ ಕ್ವೀನ್ ರಚಿತಾ ರಾಮ್ ಸಹೋದರಿ ನಿತ್ಯಾ ರಾಮ್ ಆಸ್ಟ್ರೇಲಿಯಾ ಮೂಲದ ಬ್ಯುಸಿನೆಸ್ ಮ್ಯಾನ್ ಗೌತಮ್​ ಜೊತೆ ಸಪ್ತಪದಿ ತುಳಿದಿದ್ದಾರೆ. ರಚಿತಾ ರಾಮ್ ಅಕ್ಕನ ಮದುವೆಗೆ ಚಿತ್ರರಂಗದ ಸಾಕಷ್ಟು ಸೆಲೆಬ್ರಿಟಿಗಳು ಆಗಮಿಸಿ ಶುಭ ಹಾರೈಯಿಸಿದ್ದಾರೆ.

ನಿತ್ಯಾರಾಮ್​ ಕುಟುಂಬದೊಂದಿಗೆ ನಿಖಿಲ್​​
ರಚಿತಾ ರಾಮ್ ಸಹೋದರಿ ಮದುವೆಯಲ್ಲಿ ನಿಖಿಲ್ ಕುಮಾರಸ್ವಾಮಿ ಭಾಗಿ

ಇದೀಗ ನಿತ್ಯಾ ರಾಮ್ ಮದುವೆಗೆ ನಿಖಿಲ್ ಕುಮಾರಸ್ವಾಮಿ ಕೂಡ ಭಾಗವಹಿಸಿದ್ರು. ಸೀತಾರಾಮ ಕಲ್ಯಾಣ ಸಿನಿಮಾದಲ್ಲಿ ನಿಖಿಲ್ ಕುಮಾರಸ್ವಾಮಿ ಜೊತೆ ರಚಿತಾ ರಾಮ್ ಒಟ್ಟಿಗೆ ಸ್ಕ್ರೀನ್ ಹಂಚಿಕೊಂಡಿದ್ರು.

ಇವರಿಬ್ಬರ ಕೆಮಿಸ್ಟ್ರಿ ಪ್ರೇಕ್ಷಕರಿಗೆ ಇಷ್ಟ ಆಗಿತ್ತು. ಆದ್ರೆ ಗಾಂಧಿನಗರದಲ್ಲಿ ನಿಖಿಲ್ ಕುಮಾರಸ್ವಾಮಿ ಹಾಗೂ ರಚಿತಾ ರಾಮ್ ಡೇಟಿಂಗ್ ಮಾಡುತ್ತಿದ್ದಾರೆ ಅಂತಾ ಬಿಸಿ ಬಿಸಿ ಚರ್ಚೆ ಕೂಡ ನಡೆದಿತ್ತು. ಈ ಮಾತಿಗೆ ಪೂರಕವಾಗಿ ರಚಿತಾ ರಾಮ್ ನಾನು ಮದುವೆ ಆದ್ರೆ ಗೌಡರ ಕುಟುಂಬದಲ್ಲಿ ಮದುವೆ ಆಗ್ತೀನಿ ಅಂತಾ ಹೇಳಿದ್ರು. ಈಗ ರಚಿತಾ ರಾಮ್ ಅಕ್ಕನ ಮದುವೆಗೆ ನಿಖಿಲ್ ಕುಮಾರಸ್ವಾಮಿ ಬಂದಿರೋದು ಈ ಮಾತಿಗೆ ರೆಕ್ಕೆ ಪುಕ್ಕ ಬಂದಂತಾಗಿದೆ.


ABOUT THE AUTHOR

...view details