ನಿಖಿಲ್ ಕುಮಾರ್ಸ್ವಾಮಿ ಈ ವರ್ಷ ಸಾಲು ಸಾಲು ಚಿತ್ರಗಳಲ್ಲಿ ನಟಿಸೋದು ಪಕ್ಕಾ ಆಗಿದೆ. ಈಗಾಗಲೇ ಇನ್ನೂ ಹೆಸರಿಡದ ಚಿತ್ರವೊಂದು ಸೆಟ್ಟೇರಿದ್ದು, ಭರದಿಂದ ಶೂಟಿಂಗ್ ಸಾಗಿದೆ. ಇದರ ಗ್ಯಾಪ್ನಲ್ಲಿ ನಿಖಿಲ್ ಐದನೇ ಚಿತ್ರಕ್ಕೆ ಸಕಲ ಸಿದ್ಧತೆ ನಡೆಯುತ್ತಿದೆ.
ನಿಖಿಲ್ ಸಿನಿಮಾಕ್ಕೆ 30-35 ಕೋಟಿ ಬಜೆಟ್ ಬೇಕಂತೆ! ನಿಖಿಲ್ ಐದನೇ ಚಿತ್ರವನ್ನು ಎ.ಪಿ.ಅರ್ಜುನ್ ನಿರ್ದೇಶನ ಮಾಡಲಿದ್ದು, ಈಗಾಗಲೇ ಚಿತ್ರದ ಪ್ರೀ ಪ್ರೊಡಕ್ಷನ್ ವರ್ಕ್ನಲ್ಲಿ ಬ್ಯುಸಿಯಾಗಿದ್ದಾರಂತೆ. ಈ ಚಿತ್ರ ಜೂನ್ನಲ್ಲಿ ಸೆಟ್ಟೇರಲಿದೆ ಎಂದು ನಿರ್ದೇಶಕ ಅರ್ಜುನ್ ತಿಳಿಸಿದರು.
ಈ ಚಿತ್ರ ಸುಮಾರು 30-35 ಕೋಟಿ ಬಜೆಟ್ನಲ್ಲಿ ಮೂಡಿಬರಲಿದೆ. ತುಂಬಾ ದೊಡ್ಡ ಮಟ್ಟದಲ್ಲಿ ಮಾಡಲು ಪ್ಲಾನ್ ಮಾಡಿರೋದಾಗಿ ಅರ್ಜುನ್ ಹೇಳಿದ್ದಾರೆ. ಅಲ್ಲದೆ ಅರ್ಜುನ್ ಈ ಹಿಂದೆ ನಿರ್ದೇಶನ ಮಾಡಿದ್ದ ಐದು ಚಿತ್ರಗಳಿಗಿಂತ ಈ ಸಿನಿಮಾ ತುಂಬಾ ವಿಭಿನ್ನವಾಗಿದೆಯಂತೆ. ಅದ್ರಲ್ಲೂ ಚಿತ್ರದಲ್ಲಿ ನಿಖಿಲ್ ತುಂಬಾ ಡಿಫರೆಂಟ್ ಆಗಿ ಕಾಣಿಸಲಿದ್ದಾರೆ ಎಂದು ಹೇಳಿದ್ದಾರೆ.
ನಿಖಿಲ್ ಮುಂದಿನ ಸಿನಿಮಾವನ್ನು ದೇಶದ 13 ರಾಜ್ಯಗಳಲ್ಲಿ ಶೂಟಿಂಗ್ ಮಾಡುವ ಪ್ಲಾನ್ ಮಾಡಿಕೊಂಡಿದ್ದೇವೆ. ಅತಿ ಶೀಫ್ರದಲ್ಲೇ ಚಿತ್ರದ ಟೈಟಲ್ ಅನೌನ್ಸ್ ಮಾಡುವುದಾಗಿ ಅರ್ಜುನ್ ತಿಳಿಸಿದರು.