ಶಿವರಾಜ್ಕುಮಾರ್ ಅಭಿನಯದ ‘ಆಯುಷ್ಮಾನ್ ಭವ’ ಚಿತ್ರದ ಮೂಲಕ ನಿಧಿ ಸುಬ್ಬಯ್ಯ ರೀಎಂಟ್ರಿ ಕೊಟ್ಟರೂ, ಅದಾಗಿ ಇನ್ನೊಂದು ಚಿತ್ರವನ್ನು ಒಪ್ಪಿಕೊಳ್ಳುವುದಕ್ಕೆ ಒಂದೂವರೆ ವರ್ಷವೇ ಬೇಕಾಗಿದೆ. ಸೂಕ್ತ ಸ್ಕ್ರಿಪ್ಟ್ನ ಹುಡುಕಾಟದಲ್ಲಿದ್ದ ನಿಧಿಗೆ, ಈಗೊಂದು ಕಥೆ ಒಪ್ಪಿಗೆಯಾಗಿದ್ದು, ಅದರಲ್ಲಿ ನಟಿಸುವುದಕ್ಕೆ ಗ್ರೀನ್ ಸಿಗ್ನಲ್ ನೀಡಿದ್ದಾರೆ.
ಅಂದಹಾಗೆ, ಇದೊಂದು ಹಾರರ್ ಚಿತ್ರವಾಗಿದ್ದು, ಹಾರರ್ ಮತ್ತು ಥ್ರಿಲ್ಲರ್ ಚಿತ್ರಗಳನ್ನು ನಿರ್ದೇಶಿಸುವುದಕ್ಕೆ ಜನಪ್ರಿಯರಾಗಿರುವ 'ಮಮ್ಮಿ' ಖ್ಯಾತಿಯ ಲೋಹಿತ್ ಈ ಚಿತ್ರವನ್ನು ನಿರ್ಮಿಸುತ್ತಿದ್ದಾರೆ. ಹಾಗಂತ ಈ ಚಿತ್ರಕ್ಕೆ ಅವರೇ ನಿರ್ದೇಶಕರಲ್ಲ. ಅವರ ಫ್ರೈಡೇ ಫಿಲಂಸ್ ಜೊತೆಗೆ ಸಿಲ್ವರ್ ಟ್ರೇನ್ ಇಂಟರ್‌ನ್ಯಾಶನಲ್ ಮತ್ತು ಸಿ.ಕೆ. ಸಿನಿ ಕ್ರಿಯೇಷನ್ಸ್ ಸಂಸ್ಥೆಗಳು ಸಹ ನಿರ್ಮಾಣದಲ್ಲಿ ಕೈಜೋಡಿಸಿವೆ. ಇದೊಂದು ನಾಯಕಿ ಪ್ರಧಾನ ಚಿತ್ರವಾಗಿದ್ದು, ಈ ಚಿತ್ರವನ್ನು ಪವನ್ ಮತ್ತು ಪ್ರಸಾದ್ ಜೊತೆಯಾಗಿ ನಿರ್ದೇಶಿಸುತ್ತಿದ್ದಾರೆ.