ಚೆನ್ನೈ: ಟಾಲಿವುಡ್ ನಟಿ ನಿಧಿ ಅಗರ್ವಾಲ್ ಶೀಘ್ರದಲ್ಲೇ ಮದುವೆಯಾಗಲಿದ್ದಾರೆ. ಜೀವನದ ಹೊಸ ಅಡಿ ಇಡಲು ತುದಿಗಾಲ ಮೇಲೆ ನಿಂತಿರುವ ನಿಧಿ ಅಗರ್ವಾಲ್, ಕಾಲಿವುಡ್ ಸೂಪರ್ ಸ್ಟಾರ್ ಸಿಂಬು ಅವರ ಜೊತೆ ಶೀಘ್ರದಲ್ಲೇ ಹಸೆಮಣೆ ಏರಲಿದ್ದಾರೆ ಎಂದು ಹೇಳಲಾಗುತ್ತಿದೆ.
'ಸವ್ಯಸಾಚಿ' ಚಿತ್ರದ ಮೂಲಕ ಎಂಟ್ರಿಕೊಟ್ಟ ನಿಧಿ ಇದೀಗ ಸೌಥ್ ಸಿನಿಮಾ ಕ್ಷೇತ್ರಕ್ಕೆ ಬೇಡಿಕೆಯ ನಟಿ. ಮುಗ್ಧ ಅಭಿನಯದಿಂದಲೇ ಗಮನ ಸೆಳೆದಿರುವ ಅವರು ಅಪಾರ ಅಭಿಮಾನಿ ಬಳಗವನ್ನು ಹೊಂದಿದ್ದಾರೆ. ವೃತ್ತಿ ಜೀನವದಲ್ಲಿ ಜೊತೆಯಾದ ತಮಿಳು ನಟ ಸಿಂಬು ಅವರನ್ನು ಶೀಘ್ರದಲ್ಲೇ ಮದುವೆ ಆಗಲಿದ್ದಾರಂತೆ.
ಟಾಲಿವುಡ್ನ 'ಇಸ್ಮಾರ್ಟ್ ಶಂಕರ್' ಚಿತ್ರದ ಯಶಸ್ಸಿನ ನಂತರ ಕಾಲಿವುಡ್ನಲ್ಲಿಯೂ ಕಾಲೂರಿರುವ ನಿಧಿ ಅಲ್ಲಿಯೂ ಸಹ ದೊಡ್ಡ ಅಭಿಮಾನಿ ಬಳಗವನ್ನು ಹೊಂದಿದ್ದಾರೆ. ಇತ್ತೀಚೆಗೆ ತೆರೆಕಂಡ ಶಿಂಬು ನಟನೆಯ ತಮಿಳು ‘ಈಶ್ವರನ್’ ಚಿತ್ರದಲ್ಲಿ ನಿಧಿ ನಾಯಕಿಯಾಗಿ ಕಾಣಿಸಿಕೊಂಡಿದ್ದರು. ಫ್ಯಾಮಿಲಿ, ಆ್ಯಕ್ಷನ್ ಮತ್ತು ಎಂಟರ್‌ಟೈನರ್ ಆಗಿದ್ದ ಈ ಚಿತ್ರ ಬಾಕ್ಸ್ ಆಫೀಸ್‌ನಲ್ಲಿ ಉತ್ತಮ ಹಣ ಗಳಿಸುವಲ್ಲಿ ಯಶಸ್ಸು ಕಂಡಿತ್ತು. ಚಿತ್ರದಲ್ಲಿ ಸಿಂಬು ಮತ್ತು ನಿಧಿ ಜೋಡಿ ಪ್ರೇಕ್ಷಕರಿಗೆ ಸಾಕಷ್ಟು ಮನರಂಜನೆ ನೀಡಿದ್ದರು.