ಬಾಲಿವುಡ್ನ ಮೋಸ್ಟ್ ಬ್ಯೂಟಿ ಕಪಲ್ಗಳ ಪೈಕಿ ನಿಕ್ ಜೋನಸ್ ಮತ್ತು ಪ್ರಿಯಾಂಕ ಚೋಪ್ರಾ ಜೋಡಿ ಕೂಡಾ ಒಂದು. ಇದೀಗ ಪ್ರಿಯಾಂಕ ಪತಿ ನಿಕ್ ಜೋನಸ್ 14 ವರ್ಷದ ಹಿಂದೆ ತನಗೆ ಬಂದಿದ್ದ ರೋಗದ ಬಗ್ಗೆ ಇನ್ಸ್ಟಾಗ್ರಾಂನಲ್ಲಿ ಬರೆದುಕೊಂಡಿದ್ದಾರೆ.
ಪ್ರಿಯಾಂಕ ಚೋಪ್ರಾ ಮತ್ತು ನಿಕ್ ಜೋನಸ್ ಈ ಹಿಂದೆ ತನ್ನ ಪತಿ ಅಸ್ತಮಾದಿಂದ ಬಳಲುತ್ತಿದ್ರು ಎಂದು ಪ್ರಿಯಾಂಕ ಹೇಳಿದ್ರು. ಇದೀಗ ನಿಕ್ ಜೋನಸ್ ತನ್ನ ಹಳೆಯ ರೋಗದ ಬಗ್ಗೆ ಮಾಹಿತಿ ಹಂಚಿಕೊಂಡಿದ್ದು, 14 ವರ್ಷಗಳ ಹಿಂದೆ ನನಗೆ ಟೈಪ್-1 ಡಯಾಬಿಟಿಸ್ ಕಾಯಿಲೆ ಬಂದಿತ್ತು ಎಂದಿದ್ದಾರೆ.
ಪ್ರಿಯಾಂಕ ಚೋಪ್ರಾ ಮತ್ತು ನಿಕ್ ಜೋನಸ್ ಈ ಬಗ್ಗೆ ಹೇಳಿಕೊಂಡಿರುವ ಗಾಯಕ ನಿಕ್, ನನಗೆ 14 ವರ್ಷಗಳ ಹಿಂದೆ ಟೈಪ್-1 ಡಯಾಬಿಟಿಸ್ ಕಾಯಿಲೆ ಇರುವುದು ಗೊತ್ತಾಯಿತು. ಅಂದಿನಿಂದ ಧ್ಯಾನ, ವರ್ಕೌಟ್, ಒಳ್ಳೆಯ ಆಹಾರ ಸೇವೆನೆ ಪದ್ಧತಿ ಅಳವಡಿಸಿಕೊಂಡಿದ್ದೇನೆ. ಅಲ್ಲದೆ ಶುಗರ್ ಮತ್ತು ಇನ್ಸುಲಿನ್ ತೆಗೆದುಕೊಳ್ಳುವುದರ ಬಗ್ಗೆ ಕಾಳಜಿ ವಹಿಸಿದ್ದೇನೆ. ಈ ಕಾಯಿಲೆ ಹೊರಗಿನಿಂದ ಕಾಣದಿದ್ದರೂ ನಮ್ಮನ್ನು ಒಂಟಿತನದಲ್ಲಿ ಇರಿಸುತ್ತದೆ ಎಂದು ಜೋನಸ್ ಹೇಳಿದ್ದಾರೆ.
ಪ್ರಿಯಾಂಕ ಚೋಪ್ರಾ ಮತ್ತು ನಿಕ್ ಜೋನಸ್ ಇದಕ್ಕಾಗಿಯೇ ನಾನು 2015ರಲ್ಲಿ @BeyondType1 ಅಭಿಯಾನವನ್ನು ಆರಂಭಿಸಿದೆ. ಈ ಮೂಲಕ ಡಯಾಬಿಟಿಸ್ ಕಾಯಿಲೆಯಿಂದ ನರಳುವವರಿಗೆ ಧೈರ್ಯ ಕೊಡುವ ಕೆಲಸ ಮಾಡುತ್ತಿದ್ದೇನೆ. ಅಲ್ಲದೆ ನವೆಂಬರ್ ತಿಂಗಳನ್ನು ಡಯಾಬಿಟಿಸ್ ಜಾಗೃತಿ ಮೂಡಿಸುವ ತಿಂಗಳಾಗಿ ಆಚರಿಸಲಾಗುತ್ತದೆ. ಆದ್ರಿಂದ ನಿಮಗಿರುವ ನೋವುಗಳನ್ನು ನಮ್ಮೊಂದಿಗೆ ಹಂಚಿಕೊಳ್ಳಿ ಎಂದು ಇನ್ಸ್ಟಾಗ್ರಾಂನಲ್ಲಿ ಬರೆದುಕೊಂಡಿದ್ದಾರೆ.