ಕರ್ನಾಟಕ

karnataka

ETV Bharat / sitara

ಸ್ಯಾಂಡಲ್​ವುಡ್​​ನಲ್ಲಿ ಸುದೀಪ್ ಬಳಿಕ ಹೊಸ ದಾಖಲೆ ಬರೆದ ರಿಯಲ್​ಸ್ಟಾರ್ ಉಪೇಂದ್ರ - ಉಪೇಂದ್ರ ಟ್ವಿಟರ್

ಕನ್ನಡ ಚಿತ್ರರಂಗಲ್ಲಿ, ಟ್ವಿಟರ್ ಖಾತೆಯಲ್ಲಿ ಸದಾ ಆ್ಯಕ್ಟೀವ್ ಆಗಿದ್ದು, ಮಿಲಿಯನ್ ಫಾಲೋವರ್ಸ್ ಹೊಂದಿರುವ ಸ್ಟಾರ್ ಗಳಲ್ಲಿ ಕಿಚ್ಚ ಸುದೀಪ್ ಮೊದಲ ಸ್ಥಾನದಲ್ಲಿದ್ದಾರೆ. ಸ್ಯಾಂಡಲ್ ವುಡ್ ನಲ್ಲಿ ಪ್ರತಿಯೊಬ್ಬ ಅಭಿಮಾನಿ ಪ್ರಶ್ನೆಗೆ ಉತ್ತರಿಸುವ ಮೂಲಕ ಟ್ವಿಟರ್ ಖಾತೆಯಲ್ಲಿ ಕಿಚ್ಚ 2 ಮಿಲಿಯನ್ ಫಾಲೋ ಯಿಂಗ್ ಹೊಂದಿರುವ ಮೊದಲ ನಟನಾಗಿದ್ದಾರೆ‌.

new-record-in-real-star-upendra-twitter-account
ಹೊಸ ದಾಖಲೆ ಬರೆದ ರಿಯಲ್​ಸ್ಟಾರ್

By

Published : May 25, 2021, 9:58 PM IST

ಬೆಂಗಳೂರು:ಸಿನಿಮಾ ಸೆಲೆಬ್ರಿಟಿಗಳು ತಮ್ಮ ಚಿತ್ರಗಳು ಅಲ್ಲದೇ, ಕೋಟ್ಯಂತರ ಅಭಿಮಾನಿಗಳ ಪ್ರೀತಿ ವಿಶ್ವಾಸಗಳಿಸುವ ಏಕೈಕ ತಾಣ ಅಂದರೆ ಇನ್​ಸ್ಟಾಗ್ರಾಂ ಹಾಗೂ ಟ್ವಿಟರ್‌ ಮಾತ್ರ. ಸದ್ಯ ಕನ್ನಡ ಚಿತ್ರರಂಗದಲ್ಲಿ ಸಾಕಷ್ಟು ನಟರು, ತಮ್ಮ ಟ್ವಿಟರ್‌ ನಲ್ಲಿ ಅಭಿಮಾನಿಗಳ ಪ್ರಶ್ನೆಗಳಿಗೆ ಉತ್ತರಿಸುವ ಮೂಲಕ ಮತ್ತಷ್ಟು ಪ್ರೀತಿಯನ್ನ ಗಳಿಸಿದ್ದಾರೆ. ಇದೀಗ ರಿಯಲ್ ಸ್ಟಾರ್ ಉಪೇಂದ್ರ ಟ್ವಿಟರ್‌ ಖಾತೆಯಲ್ಲಿ ಹೊಸ ದಾಖಲೆ ಬರೆದಿದ್ದಾರೆ.

ಹೊಸ ದಾಖಲೆ ಬರೆದ ರಿಯಲ್​ಸ್ಟಾರ್

ಓದಿ: ವೋಗ್​ ಆಸ್ಟ್ರೇಲಿಯಾ ನಿಯತಕಾಲಿಕೆ ಮುಖಪುಟದಲ್ಲಿ ಪ್ರಿಯಾಂಕಾ ಚೋಪ್ರಾ ಮಿಂಚಿಂಗ್!

ಉಪೇಂದ್ರ ಇದೀಗ ಟ್ವಿಟರ್‌ನಲ್ಲಿ 1 ಮಿಲಿಯನ್ ಫಾಲೋವರ್ಸ್ ಹೊಂದುವ ಮೂಲಕ ಉಪ್ಪಿ ಮೈಲಿಗಲ್ಲು ಸಾಧಿಸಿದ್ದಾರೆ. ಕೊರೊನಾ ಕಷ್ಟದಲ್ಲಿ ಉಪೇಂದ್ರ ಕಳೆದ ಎರಡು ವಾರಗಳಿಂದ, ಸಿನಿಮಾ ಕಾರ್ಮಿಕರಿಗೆ, ತಂತ್ರಜ್ಞಾನರಿಗೆ, ಪೋಷಕ ಕಲಾವಿದರು ಸೇರಿದಂತೆ ತಮ್ಮ ಕೈಲಾದ ಸಹಾಯ ಮಾಡುತ್ತಿದ್ದಾರೆ.

ಅಷ್ಟೇ ಅಲ್ಲಾ ಉಪೇಂದ್ರ ಸಂಕಷ್ಟದಲ್ಲಿರುವ ರೈತರಿಂದ ಕೃಷಿ ಉತ್ಪನ್ನಗಳನ್ನು ಖರೀದಿಸಿ ಸಂತ್ರಸ್ತರಾಗಿರುವ ಹಲವರಿಗೆ ಉಚಿತವಾಗಿ ಹಂಚುವ ಕೆಲಸವನ್ನೂ ಮಾಡುತ್ತಿದ್ದಾರೆ. ಇವರ ಈ ಸಮಾಜಸೇವೆಗೆ ಹಲವರು ಕೈಜೋಡಿಸಿದ್ದಲ್ಲದೇ, ಇದು ಸೋಷಿಯಲ್ ಮೀಡಿಯಾದಲ್ಲಿ ಸಾಕಷ್ಟು ಗಮನ ಸೆಳೆದು, ಅವರ ಅಭಿಮಾನಿಗಳ ಸಂಖ್ಯೆ ಕೂಡ ಹೆಚ್ಚಾಗಿದೆ ಅನ್ನೋದಿಕ್ಕೆ ಸದ್ಯ ಉಪೇಂದ್ರ ಟ್ವಿಟರ್ ಖಾತೆಯಲ್ಲಿ 1 ಮಿಲಿಯನ್ ಫಾಲೋವರ್ಸ್ ಹೊಂದಿದ್ದಾರೆ.

ಹೊಸ ದಾಖಲೆ ಬರೆದ ರಿಯಲ್​ಸ್ಟಾರ್

ಇನ್ನು ಕನ್ನಡ ಚಿತ್ರರಂಗಲ್ಲಿ, ಟ್ವಿಟರ್ ಖಾತೆಯಲ್ಲಿ ಸದಾ ಆ್ಯಕ್ಟೀವ್ ಆಗಿದ್ದು, ಮಿಲಿಯನ್ ಫಾಲೋವರ್ಸ್ ಹೊಂದಿರುವ ಸ್ಟಾರ್ ಗಳಲ್ಲಿ ಕಿಚ್ಚ ಸುದೀಪ್ ಮೊದಲ ಸ್ಥಾನದಲ್ಲಿದ್ದಾರೆ. ಸ್ಯಾಂಡಲ್ ವುಡ್ ನಲ್ಲಿ ಪ್ರತಿಯೊಬ್ಬ ಅಭಿಮಾನಿ ಪ್ರಶ್ನೆಗೆ ಉತ್ತರಿಸುವ ಮೂಲಕ ಟ್ವಿಟರ್ ಖಾತೆಯಲ್ಲಿ ಕಿಚ್ಚ 2 ಮಿಲಿಯನ್ ಫಾಲೋ ಯಿಂಗ್ ಹೊಂದಿರುವ ಮೊದಲ ನಟನಾಗಿದ್ದಾರೆ‌.

ಇನ್ನು ಟ್ವಿಟರ್‌ನಲ್ಲಿ ಅತ್ಯಧಿಕ ಫಾಲೋವರ್ಸ್ ಹೊಂದಿರುವ ನಟರಲ್ಲಿ ದರ್ಶನ್ 8.7 ಲಕ್ಷಕ್ಕೂ ಅಧಿಕ ಫಾಲೋಯಿಂಗ್ ಹೊಂದುವ ಮೂಲಕ ಮೂರನೇ ಸ್ಥಾನದಲ್ಲಿದ್ದಾರೆ‌. ನಾಲ್ಕನೇ ಸ್ಥಾನದಲ್ಲಿ ರಾಕಿಂಗ್ ಸ್ಟಾರ್ ಯಶ್ 7.1 ಲಕ್ಷಕ್ಕೂ ಅಧಿಕ ಫಾಲೋವರ್ಸ್ ಹೊಂದಿದ್ದಾರೆ‌. ಐದನೇ ಸ್ಥಾನದಲ್ಲಿ ನವರಸನಾಯಕ ಜಗ್ಗೇಶ್ 6.8 ಲಕ್ಷಕ್ಕೂ ಅಧಿಕ ಫಾಲೋವರ್ಸ್ ಹೊಂದಿದ್ದಾರೆ. ಆರನೇ ಪ್ಲೇಸ್ ನಲ್ಲಿ ರಕ್ಷಿತ್ ಶೆಟ್ಟಿ 5.2 ಲಕ್ಷಕ್ಕೂ ಜನ ಫಾಲೋಯಿಂಗ್ ಇದ್ದಾರೆ. ಏಳನೇ ಸ್ಥಾನದಲ್ಲಿ ಪುನೀತ್ ರಾಜಕುಮಾರ್ 2.7 ಲಕ್ಷಕ್ಕೂ ಹೆಚ್ಚ ಜನ ಫಾಲೋವರ್ಸ್ ಹೊಂದಿದ್ದಾರೆ. ಟ್ವಿಟರ್‌ನಲ್ಲಿ ಅತ್ಯಧಿಕ ಫಾಲೋವರ್ಸ್ ಹೊಂದಿರುವ ಕನ್ನಡ ನಟ ಎಂಬ ಖ್ಯಾತಿಯನ್ನು ಕಿಚ್ಚ ಸುದೀಪ್ ಹೊಂದಿದ್ದು, ಎರಡನೇ ಸ್ಥಾನದಲ್ಲಿ ಉಪೇಂದ್ರ ಇರೋದು ಅವರ ಅಭಿಮಾನಿಗಳಿಗೆ ಖುಷಿ ತಂದಿದೆ.

ABOUT THE AUTHOR

...view details