ಕರ್ನಾಟಕ

karnataka

ETV Bharat / sitara

ಹಳೆ ಹೆಸರಿನ ಹೊಸ ಕಥೆ 'ಜೊತೆ ಜೊತೆಯಲಿ' ಯಲ್ಲಿ ಅನಿರುದ್ಧ್ ಜತ್ಕರ್ - jote jotheyali, zee kannada

ಜೀ ಕನ್ನಡ ವಾಹಿನಿಯಲ್ಲಿ ಆರೂರು ಜಗದೀಶ್ ನಿರ್ದೇಶನದಲ್ಲಿ 'ಜೊತೆ ಜೊತೆಯಲಿ' ಎಂಬ ಧಾರಾವಾಹಿ ಮೂಡಿ ಬರುತ್ತಿದೆ. ಈ ಧಾರಾವಾಹಿಯಲ್ಲಿ ಅನಿರುದ್ಧ್ ಜತ್ಕರ್ ನಾಯಕ ನಟನಾಗಿ ಪಾತ್ರಕ್ಕೆ ಜೀವ ತುಂಬಲು ರೆಡಿಯಾಗಿದ್ದಾರೆ.

new jote jotheyali serial in zee kannada

By

Published : Jul 30, 2019, 2:27 AM IST

ಇತ್ತೀಚಿನ ದಿನಗಳಲ್ಲಿ ಹಿರಿತೆರೆ ನಟ-ನಟಿಯರಿಗೆ ಕಿರುತೆರೆಯಲ್ಲಿ ಅತಿಥಿಗಳಾಗಿ ನಟಿಸುವುದು ಕಾಮನ್ ಆಗಿದೆ. ಆದ್ರೆ ಇದೇ ಮೊದಲ ಬಾರಿಗೆ ಸ್ಯಾಂಡಲ್​ವುಡ್​ನ ನಟ ಕಿರುತೆರೆಯಲ್ಲಿ ಮುಖ್ಯ ಭೂಮಿಕೆಯ ಪಾತ್ರದಲ್ಲಿ ನಟಿಸಲು ಮುಂದಾಗಿದ್ದಾರೆ.

ಹೌದು, ಸಿನಿಮಾಗಳಿಂದ ದೂರವಿದ್ದ ಸಾಹಸಸಿಂಹ, ದಿ. ವಿಷ್ಣುವರ್ಧನ್ ಅವರ ಅಳಿಯ ಅನಿರುದ್ಧ್ ಜತ್ಕರ್ ಈಗ ಕಿರುತೆರೆ ಮೂಲಕ ಮತ್ತೊಮ್ಮೆ ಪ್ರೇಕ್ಷಕರ ಮುಂದೆ ಬರಲಿದ್ದಾರೆ.

ಜೀ ಕನ್ನಡ ವಾಹಿನಿಯಲ್ಲಿ ಆರೂರು ಜಗದೀಶ್ ನಿರ್ದೇಶನದಲ್ಲಿ 'ಜೊತೆ ಜೊತೆಯಲಿ' ಎಂಬ ಧಾರಾವಾಹಿ ಮೂಡಿ ಬರುತ್ತಿದೆ. ಈ ಧಾರವಾಹಿಯಲ್ಲಿ ಅನಿರುದ್ಧ್ ನಾಯಕ ನಟನಾಗಿ ಪಾತ್ರಕ್ಕೆ ಜೀವ ತುಂಬಲು ರೆಡಿಯಾಗಿದ್ದಾರೆ.

ಸಾಹಸಸಿಂಹ ವಿಷ್ಣುವರ್ಧನ್ ಅಳಿಯ ಅನಿರುದ್ಧ್ ಜತ್ಕರ್

ಜೀ ಕನ್ನಡ ವಾಹಿನಿಯೂ 2014ರಲ್ಲಿ ಹೊಸ ರೀತಿಯ ಆಲೋಚನೆಗೆ ದಾರಿ ಮಾಡಿಕೊಡಲು, ಗಾಂಧೀಜಿಗೆ ಕಸ್ತೂರ ಬಾ, ಸಚಿನ್​ಗೆ ಅಂಜಲಿ, ಅಭಿಷೇಕ್​ಗೆ ಐಶ್ವರ್ಯಾ ಜೊತೆಯಾಗುವುದಾದರೆ 26 ವರ್ಷದ ಅಭಯ್​ಗೆ 31 ವರ್ಷದ ಶಾಲಿನಿ ಯಾಕೆ ಜೊತೆಯಾಗಬಾರದು ಎಂಬ ಕಥೆಯೊಂದಿಗೆ 'ಜೊತೆ ಜೊತೆಯಲಿ' ಎಂಬ ಧಾರವಾಹಿಯನ್ನ ನಿರೂಪಿಸಿತ್ತು. ಇದೀಗ ಹೆಚ್ಚು ಟಿಆರ್​ಪಿ ಗಳಿಸಿದ್ದ ಧಾರಾವಾಹಿಯ ಹೆಸರನ್ನೇ ಇಟ್ಟುಕೊಂಡು ಹೊಸ ಪಾತ್ರವರ್ಗದೊಂದಿಗೆ ಮತ್ತೆ ಸೀರಿಯಲ್ ಪ್ರೇಕ್ಷಕರಿಗೆ ಜೀ ಕನ್ನಡ ವಾಹಿನಿ ಕಮಾಲ್ ಮಾಡಲು ಹೊರಟಿದೆ ಎನ್ನಬಹುದು.

ಹಳೆ ಹೆಸರಿನ ಹೊಸ ಧಾರಾವಾಹಿಯಲ್ಲಿ ನಾಯಕ ಆರ್ಯವರ್ಧನ್​ಗೆ 45 ವರ್ಷ ಮತ್ತು ನಾಯಕಿ ಅನುಗೆ 20 ವರ್ಷ. ಇಬ್ಬರದೂ ಬೇರೆ ಬೇರೆ ಮನಸ್ಥಿತಿ. ನಾಯಕಿ ಅನು ಮನೆಯಲ್ಲಿ ಅವಳಿಗೆ ಮದುವೆ ಮಾಡಲು ತಾಯಿ ಒತ್ತಾಯಿಸುತ್ತಿರುತ್ತಾರೆ. ಮತ್ತೊಂದೆಡೆ ನಾಯಕ ಆರ್ಯವರ್ಧನ್​ಗೂ ವಯಸ್ಸಾಯಿತು ಎಂಬ ಚಿಂತೆ. ಮಾನಸಿಕವಾಗಿ ಬೇರೆ ಬೇರೆ ಜಗತ್ತು ಮತ್ತು ಜನರೇಷನ್ ಗ್ಯಾಪ್ ಇರುವ ಎರಡು ಜೀವಗಳನ್ನು ಹೊಂದಿರುವ ಕಥೆ 'ಜೊತೆ ಜೊತೆಯಲಿ' ಧಾರವಾಹಿಯಾಗಿದೆ.

ಒಟ್ಟಿನಲ್ಲಿ, ಇಷ್ಟು ಕಾಲ ಸಿನಿಮಾಗಳಲ್ಲಿ ನೋಡಿದ್ದ ಅನಿರುದ್ಧ ಜತ್ಕರ್ ಅವರನ್ನು ಇನ್ಮುಂದೆ ಸೀರಿಯಲ್ ಮೂಲಕ ಮನೆಮನೆಗಳಲ್ಲಿ ನೋಡಬಹುದು.

ಸೀರಿಯಲ್ ಪ್ರೇಕ್ಷಕರು ಹೊಸ 'ಜೊತೆ ಜೊತೆಯಲಿ'ಯಲ್ಲಿ ಅನು ಮತ್ತು ಆರ್ಯವರ್ಧನ್​ರಿಬ್ಬರೂ ಮದುವೆಯಾಗ್ತಾರಾ? ಜನರೇಶನ್ ಗ್ಯಾಪ್ ಬರುತ್ತಾ? ಅನ್ನೋದನ್ನ ಕಾದು ನೋಡಬೇಕಿದೆ.

ABOUT THE AUTHOR

...view details