ಪುನೀತ್ ರಾಜ್‍ಕುಮಾರ್ ಪಿಆರ್ಕೆ ಪ್ರೊಡಕ್ಷನ್ಸ್ ಸದಭಿರುಚಿಯ ಸಿನಿಮಾಗಳ ಮೂಲಕ ಕನ್ನಡ ಚಿತ್ರರಂಗದಲ್ಲಿ ಹೊಸ ಪ್ರತಿಭೆಗಳಿಗೆ ಅವಕಾಶ ನೀಡುತ್ತಿರುವ ಚಿತ್ರ ನಿರ್ಮಾಣ ಸಂಸ್ಥೆ. ಇದೀಗ ಅವರ ಪ್ರೊಡಕ್ಷನ್ ಅಡಿ ಮತ್ತೊಂದು ಹೊಸ ಚಿತ್ರ ಬರುತ್ತಿದೆ.
ಪವರ್ ಸ್ಟಾರ್ ಬ್ಯಾನರ್ನಿಂದ ಬರ್ತಿದೆ ಮತ್ತೊಂದು ಹೊಸ ಸಿನಿಮಾ - Latest news about PRK Productions
ಪಿಆರ್ಕೆ ಪ್ರೊಡಕ್ಷನ್ಸ್ ಬ್ಯಾನರ್ ಅಡಿ ಅಶ್ವಿನಿ ಪುನೀತ್ ರಾಜ್‍ಕುಮಾರ್ 'ಫ್ಯಾಮಿಲಿ ಪ್ಯಾಕ್' ಎಂಬ ಸಿನಿಮಾವನ್ನು ನಿರ್ಮಿಸುತ್ತಿದ್ದಾರೆ. ಚಿತ್ರದ ಮೋಷನ್ ಪೋಸ್ಟರ್ ಈಗಾಗಲೇ ಬಿಡುಗಡೆಯಾಗಿದ್ದು ಗಮನ ಸೆಳೆಯುತ್ತಿದೆ.
'ಮಾಯಾ ಬಜಾರ್' ಸಿನಿಮಾ ಬಳಿಕ ಮತ್ತೊಂದು ವಿಭಿನ್ನ ಕಥೆ ಆಧರಿಸಿರುವ ಫ್ಯಾಮಿಲಿ ಪ್ಯಾಕ್ ಸಿನಿಮಾವನ್ನು ನಿರ್ಮಾಣ ಮಾಡಲಾಗುತ್ತಿದೆ. 'ಫ್ಯಾಮಿಲಿ ಪ್ಯಾಕ್' ಎಂಬ ಕ್ಯಾಚಿ ಟೈಟಲ್ ಹೊಂದಿರುವ ಸಿನಿಮಾದ ಮೋಷನ್ ಪೋಸ್ಟರ್ ಈಗಾಗಲೇ ಬಿಡುಗಡೆ ಆಗಿದೆ. 'ಸಂಕಷ್ಟಕರ ಗಣಪತಿ' ಸಿನಿಮಾ ನಂತರ ಲಿಖಿತ್ ಶೆಟ್ಟಿ ಹಾಗೂ ಅಮೃತಾ ಅಯ್ಯಂಗಾರ್ ಜೊತೆಯಾಗಿದ್ದಾರೆ.
ರಂಗಾಯಣ ರಘು, ಅಚ್ಯುತ್ ಕುಮಾರ್, ದತ್ತಣ್ಣ, ತಿಲಕ್, ನಾಗಭೂಷಣ್ ಅನೇಕ ಕಲಾವಿದರ ದಂಡು ಈ ಚಿತ್ರದಲ್ಲಿದೆ. ಇದೊಂದು ಲವ್, ಕಾಮಿಡಿ ಸಿನಿಮಾ. 'ಸಂಕಷ್ಟಕರ ಗಣಪತಿ' ಚಿತ್ರವನ್ನು ನಿರ್ದೇಶನ ಮಾಡಿದ್ದ ಅರ್ಜುನ್ ಕುಮಾರ್. ಎಸ್ ಈ ಚಿತ್ರವನ್ನು ನಿರ್ದೇಶಿಸಿದ್ದಾರೆ. ಚಿತ್ರಕ್ಕೆ ಗುರು ಕಿರಣ್ ಸಂಗೀತವಿದ್ದು, ಮಾಸ್ತಿ ಸಂಭಾಷಣೆ ಹಾಗೂ ಉದಯ್ ಲೀಲಾ ಛಾಯಾಗ್ರಹಣವಿದೆ. ಅಶ್ವಿನಿ ಪುನೀತ್ ರಾಜ್‍ಕುಮಾರ್ ಜೊತೆಗೂಡಿ ಲಿಖಿತ್ ಶೆಟ್ಟಿ ಈ ಸಿನಿಮಾ ನಿರ್ಮಾಣ ಮಾಡುತ್ತಿದ್ದಾರೆ.