ಕರ್ನಾಟಕ

karnataka

ETV Bharat / sitara

'ಸೂಪರ್ ಹೀರೋಯಿನ್' ಆದ ಗ್ಲ್ಯಾಮರ್ ಬ್ಯೂಟಿ ಅದಿತಿ ಪ್ರಭುದೇವ - ಸೂಪರ್ ಹೀರೋಯಿನ್ ಆದ ಆಧಿತಿ ಪ್ರಭುದೇವ

ಕನ್ನಡದ ಬ್ಯೂಟಿ ಗರ್ಲ್ ಅದಿತಿ ಪ್ರಭುದೇವ ಹೊಸಬರ ಚಿತ್ರವೊಂದರಲ್ಲಿ ಸೂಪರ್ ಹೀರೋಯಿನ್ ಆಗಿ ಕಾಣಿಸಿಕೊಳ್ಳುತ್ತಿದ್ದಾರೆ‌. ಟೈಟಲ್ ಇಡದ ಈ ಚಿತ್ರದಲ್ಲಿ, ಅದಿತಿ ಲುಕ್ ಹೇಗಿರುತ್ತೆ? ಚಿತ್ರದ ಶೀರ್ಷಿಕೆ ಏನಿರಬಹುದು ಎಂಬ ಕುತೂಹಲ ಹುಟ್ಟಿಸಿದೆ‌.

Unique Concept film's in Sandlwood
ಸೂಪರ್ ಹೀರೋಯಿನ್ ಆದ ಆಧಿತಿ ಪ್ರಭುದೇವ

By

Published : Oct 12, 2020, 8:42 PM IST

ಸ್ಯಾಂಡಲ್ ವುಡ್ ಸಿನಿಮಾರಂಗ ಬದಲಾವಣೆಯ ಪರ್ವದತ್ತ ಸಾಗುತ್ತಿದೆ. ಹೊಸಬರ ನವ ನವೀನ ಪ್ರಯತ್ನಗಳಿಗೆ ಸಾಕಷ್ಟು ಮೆಚ್ಚುಗೆ ವ್ಯಕ್ತವಾಗುತ್ತಿದೆ. ಇದೀಗ ಯುವ ನಿರ್ದೇಶಕ ಮನೋಜ್ ಪಿ. ನಡಲುಮನೆ ಹೊಸ ಕಾನ್ಸೆಪ್ಟ್​​ನೊಂದಿಗೆ ಗಾಂಧಿನಗರಕ್ಕೆ ಎಂಟ್ರಿ ಕೊಡ್ತಾ ಇದ್ದಾರೆ‌.

ಕನ್ನಡದ ಬ್ಯೂಟಿ ಗರ್ಲ್ ಅದಿತಿ ಪ್ರಭುದೇವ ಈ ಚಿತ್ರದಲ್ಲಿ ಸೂಪರ್ ಹೀರೋಯಿನ್ ಆಗಿ ಕಾಣಿಸಿಕೊಳ್ಳುತ್ತಿದ್ದಾರೆ‌. ಟೈಟಲ್ ಇಡದ ಈ ಚಿತ್ರದಲ್ಲಿ, ಅದಿತಿ ಪ್ರಭುದೇವ ಲುಕ್ ಹೇಗಿರುತ್ತೆ? ಚಿತ್ರದ ಶೀರ್ಷಿಕೆ ಏನಿರಬಹುದು ಎಂಬ ಕುತೂಹಲ ಹುಟ್ಟಿಸಿದೆ‌. ನಿರ್ದೇಶಕ ಮನೋಜ್ ಹೇಳುವ ಪ್ರಕಾರ, ಕನ್ನಡದಲ್ಲಿ ಯಾರೂ ಮಾಡದ ಹೊಸ ಶೈಲಿಯ ಸಿನಿಮಾ ಇದು. ಭಾರತದಲ್ಲಿ ಫೀಮೇಲ್ ಸೂಪರ್ ಹೀರೋ ಚಿತ್ರಗಳು ಬಂದಿಲ್ಲ. ಆ ಪ್ರಯತ್ನವನ್ನು ಕನ್ನಡದಲ್ಲಿ ನಾವು ಮಾಡಿದ್ದೇವೆ. ಅಂತಾರಾಷ್ಟ್ರೀಯ ಮಟ್ಟದ ತಾಂತ್ರಿಕತೆ ಒಂದೆಡೆ ಕಾಣಿಸಿದರೆ, ಹಾಲಿವುಡ್ ಸಿನಿಮಾ ಶೈಲಿಯಲ್ಲಿಯೇ ಇಡೀ ಸಿನಿಮಾ ಸಿದ್ಧವಾಗಿದೆ. ಸಿಜೆ ಕೆಲಸ, ಕಲರ್ ಪ್ಯಾಟರ್ನ್, ವಿಎಫ್ಎಕ್ಸ್ ತುಂಬಾ ವಿಶೇಷವಾಗಿರಲಿದೆ.

ವಿಶಿಷ್ಟ ಪ್ರಯತ್ನಕ್ಕೆ ಅಣಿಯಾದ ಹೊಸಬರ ತಂಡ

ಇನ್ನೊಂದು ವಿಶೇಷ ಏನೆಂದರೆ, ಲಾಕ್​ಡೌನ್​ಲ್ಲಿಯೇ ಸೃಷ್ಟಿಯಾದ ಈ ಕಥೆಯನ್ನು, ಕೇವಲ 30 ದಿನಗಳಲ್ಲಿ ಬೆಂಗಳೂರು, ತಾವರೆಕೆರೆ, ಯಲಹಂಕ ಸುತ್ತಮುತ್ತ ಚಿತ್ರೀಕರಣ ಮಾಡಲಾಗಿದೆ. ಸದ್ಯ 15 ದಿನಗಳ ಕ್ಲೈಮ್ಯಾಕ್ಸ್ ಚಿತ್ರೀಕರಣ ಮಾಡಿಕೊಳ್ಳುವ ಕೆಲಸ ಮಾತ್ರ ಬಾಕಿ ಉಳಿದಿದ್ದು, ಅದರ ಸಲುವಾಗಿ ಸೆಟ್ ನಿರ್ಮಾಣ ಕಾರ್ಯವೂ ಭರದಿಂದ ಸಾಗಿದೆ. ತಾಂತ್ರಿಕ ವರ್ಗವೇ ಇಡೀ ಚಿತ್ರದ ಜೀವಾಳ ಎನ್ನುವ ನಿರ್ದೇಶಕ ಮನೋಜ್, ಕನ್ನಡದಲ್ಲಿ ಈ ಸೂಪರ್ ಹೀರೋ ಪರಿಕಲ್ಪನೆಯ ಸಿನಿಮಾ ಹೊಸ ಬಗೆಯ ಕ್ರಾಂತಿಗೆ ನಾಂದಿ ಹಾಡಲಿದೆ ಎಂಬ ಭರವಸೆ ನೀಡಿದ್ದಾರೆ.

'ಸಂಕಷ್ಟಕರ ಗಣಪತಿ' ಸಿನಿಮಾ ಖ್ಯಾತಿಯ ಸಂಕಲನಕಾರ ವಿಜೇತ್ ಚಂದ್ರ, ಛಾಯಾಗ್ರಾಹಕ ಉದಯ್ ಲೀಲಾ, ಮತ್ತು ಸಂಗೀತ ನಿರ್ದೇಶಕ ರಿತ್ವಿಕ್ ಮುರಳೀಧರ್ ಈ ಮೂವರ ಕಾಂಬಿನೇಷನ್ ಈ ಸಿನಿಮಾದಲ್ಲಿಯೂ ಮುಂದುವರಿದಿದೆ. ಈ ಸಾಹಸಕ್ಕೆ ಯೂ ಕೆ ಪ್ರೊಡಕ್ಷನ್ಸ್ ಬ್ಯಾನರ್ ಅಡಿಯಲ್ಲಿ ಶ್ರೀಮತಿ ಪೂಜಾ ವಸಂತ್ ಕುಮಾರ್ ಬಂಡವಾಳ ಹೂಡಿದ್ದಾರೆ. ಸದ್ಯ ಚಿತ್ರದಲ್ಲಿ ಅಧಿತಿ ಪ್ರಭುದೇವ ಅವತರಾರ ಗಮನ ಸೆಳೆಯುತ್ತಿದೆ.

ABOUT THE AUTHOR

...view details