ಕಳೆದ 2 ತಿಂಗಳಿಂದ ಕೊರೊನಾ ಎಂಬ ಮಹಾಮಾರಿ ಇಡೀ ವಿಶ್ವವನ್ನೇ ಕಾಡುತ್ತಿದೆ. ಈ ಕೊರೊನಾ ಬಗ್ಗೆ ಸಿನಿಮಾ ತಾರೆಯರು ಒಂದೊಂದು ರೀತಿಯಲ್ಲಿ ಜಾಗೃತಿ ಮೂಡಿಸುವ ಕೆಲಸ ಮಾಡುತ್ತಲೇ ಇದ್ದಾರೆ. ಕೆಲವು ದಿನಗಳ ಹಿಂದೆ, ಶಿವರಾಜ್ಕುಮಾರ್, ಅಮಿತಾಬ್ ಬಚ್ಚನ್, ಮೆಗಾಸ್ಟಾರ್ ಚಿರಂಜೀವಿ, ತಲೈವಾ ರಜನೀಕಾಂತ್ ಸೇರಿದಂತೆ, ಭಾರತೀಯ ಚಿತ್ರರಂಗದ ಲೆಜೆಂಡ್ ಸ್ಟಾರ್ಗಳು ಕೊರೊನಾ ಬಗ್ಗೆ ಜಾಗೃತಿ ಮೂಡಿಸಲು ಒಂದು 'ಫ್ಯಾಮಿಲಿ' ಎಂಬ ಸಾಮಾಜಿಕ ಕಿರುಚಿತ್ರದಲ್ಲಿ ಕಾಣಿಸಿಕೊಂಡಿದ್ದರು.
ಕೊರೊನಾ ಕುರಿತು ತಮ್ಮ ಚಿತ್ರಕ್ಕೆ ಹೊಸ ಕ್ಲೈಮ್ಯಾಕ್ಸ್ ಬರೆದ ಪವನ್ ಒಡೆಯರ್ - New climax to Pawan Wadeyar Raymo movie
ಪವನ್ ಒಡೆಯರ್ 'ರೇಮೊ' ಚಿತ್ರದ ಕ್ಲೈಮಾಕ್ಸ್ ಮಾತ್ರ ಬಾಕಿ ಇದ್ದು ತಮ್ಮ ಚಿತ್ರಕ್ಕೆ ಪವನ್ ಹೊಸ ಕ್ಲೈಮ್ಯಾಕ್ಸ್ ರೆಡಿ ಮಾಡಿದ್ಧಾರೆ. ಕೊರೊನಾದಿಂದಾಗಿ ಸಿನಿಮಾ ಶೂಟಿಂಗ್ ನಿಂತಿರುವುದು, ಕೊರೊನಾ ಬಗ್ಗೆ ಎಲ್ಲರೂ ಜಾಗೃತರಾಗಿ ಎಂಬ ವಿಷಯವನ್ನು ಜನರಲ್ಲಿ ಹೇಳುವ ಪ್ರಯತ್ನ ಮಾಡಿದ್ದಾರೆ.
ಹಂಸಲೇಖ, ಚಂದನ್ ಶೆಟ್ಟಿ ಕೂಡಾ ಹಾಡಿನ ಮೂಲಕ ತಮ್ಮದೇ ಆದ ರೀತಿಯಲ್ಲಿ ಜನರಿಗೆ ಜಾಗೃತಿ ಮೂಡಿಸುತ್ತಿದ್ಧಾರೆ. ಇದೀಗ ನಿರ್ದೇಶಕ ಪವನ್ ಒಡೆಯರ್ ಈ 'ಫ್ಯಾಮಿಲಿ' ಚಿತ್ರವನ್ನು ಸ್ಫೂರ್ತಿಯಾಗಿ ಇಟ್ಟುಕೊಂಡು, ನಟ ಅಚ್ಯುತ್ ಕುಮಾರ್, ರಾಜೇಶ್ ನಟರಂಗ, ನಟ ಇಶಾನ್, ನಟಿ ಆಶಿಕಾ ರಂಗನಾಥ್ ಅವರೊಂದಿಗೆ 'ರೇಮೊ' ಚಿತ್ರದ ಬಗ್ಗೆ ಹೊಸ ಕ್ಲೈಮಾಕ್ಸ್ ಕಾನ್ಸೆಪ್ಟ್ ರೆಡಿ ಮಾಡಿದ್ದಾರೆ. ಬಹುತೇಕ ಶೂಟಿಂಗ್ ಮುಗಿಸಿ, ಸದ್ಯಕ್ಕೆ ಪೋಸ್ಟ್ ಪ್ರೊಡಕ್ಷನ್ ಹಂತದಲ್ಲಿರುವ, 'ರೇಮೊ' ಚಿತ್ರದ ಕ್ಲೈಮಾಕ್ಸ್ ಮಾತ್ರ ಬಾಕಿ ಇದೆ. ಹೀಗಾಗಿ ನಿರ್ದೇಶಕ ಪವನ್ ಒಡೆಯರ್ 'ರೇಮೊ' ಚಿತ್ರದ ಹೊಸ ಕ್ಲೈಮ್ಯಾಕ್ಸ್ ರೆಡಿ ಮಾಡಿದ್ಧಾರೆ. ಕೊರೊನಾದಿಂದಾಗಿ ಸಿನಿಮಾ ಶೂಟಿಂಗ್ ನಿಂತಿರುವುದು, ಕೊರೊನಾ ಬಗ್ಗೆ ಎಲ್ಲರೂ ಜಾಗೃತರಾಗಿ ಎಂಬ ವಿಷಯವನ್ನು ಜನರಲ್ಲಿ ಹೇಳುವ ಪ್ರಯತ್ನ ಮಾಡಿದ್ದಾರೆ.