ಧಾರಾವಾಹಿಯ ಪ್ರೋಮೊ ನೋಡಿದರೆ ನಾಯಕ ಆರ್ಯವರ್ಧನ್ ಕಾಣಿಸುತ್ತಿಲ್ಲವೆಂದು ಆತನ ಸ್ನೇಹಿತ ಜೇಂಡೆ ಟೆನ್ಷನ್ ಮಾಡಿಕೊಂಡಿದ್ದಾರೆ. ಇತ್ತ ಕಡೆ ಪೊಲೀಸ್ ಧಾರಾವಾಹಿಯ ನಾಯಕಿ ಅನು ಸಿರಿಮನೆ ಸ್ನೇಹಿತೆ ರಮ್ಯಾಗೆ ಎರಡು ಫೋಟೋ ತೋರಿಸಿ ‘ಈ ಫೋಟೋದಲ್ಲಿ ಇರುವವರು ಯಾರು?’ ಎಂದು ಪ್ರಶ್ನಿಸುತ್ತಿದ್ದಾರೆ. ಅದಕ್ಕೆ ರಮ್ಯಾ ಫೋಟೋ ನೋಡಿ ‘ನನ್ನ ಸ್ನೇಹಿತೆ ಅನು’ ಎನ್ನುತ್ತಾಳೆ. ಹಾಗೆಯೇ ಇನ್ನೊಂದು ಫೋಟೋ ನೋಡಿ, ‘ಇವರು ಇಡೀ ಕರ್ನಾಟಕಕ್ಕೆ ಗೊತ್ತು’ ಎನ್ನುತ್ತಾಳೆ. ಇದೀಗ ವೀಕ್ಷಕರಿಗೆ ಆ ಫೋಟೋದಲ್ಲಿರುವವರು ಯಾರು? ಎಂಬ ಕುತೂಹಲ ಮೂಡಿಸಿದೆ.
ಜೊತೆ ಜೊತೆಯಲಿ ಧಾರಾವಾಹಿಗೆ ಮತ್ತೆ ಹೊಸ ಪಾತ್ರ ಎಂಟ್ರಿ.. ಬೈಕ್ ಏರಿಬಂದ ಆ ನಟ ಯಾರು? - ಜೊತೆಜೊತೆಯಲಿ ಧಾರಾವಾಹಿ,
ರಾಜ್ಯದಲ್ಲಿ ಲಾಕ್ಡೌನ್ ಆದ ಮೇಲೆ ಧಾರಾವಾಹಿಗಳ ಚಿತ್ರೀಕರಣ ಸ್ಥಗಿತಗೊಂಡಿದೆ. ಈಗಾಗಲೇ ಚಿತ್ರೀಕರಣಗೊಂಡಿರುವ ಸಂಚಿಕೆಗಳನ್ನು ಸದ್ಯ ಪ್ರಸಾರ ಮಾಡಲಾಗುತ್ತಿದೆ. ಇದೀಗ ಜೀ ಕನ್ನಡ ವಾಹಿನಿಯಲ್ಲಿ ಮೂಡಿ ಬರುತ್ತಿರುವ ಜೊತೆಯಲಿ ಧಾರಾವಾಹಿಯ ಇತ್ತೀಚಿನ ಸಂಚಿಕೆಗಳು ಸಖತ್ ಇಂಟ್ರೆಸ್ಟಿಂಗ್ ಆಗಿ ಮೂಡಿಬರುತ್ತಿದ್ದು, ಧಾರಾವಾಹಿಯ ಅಭಿಮಾನಿಗಳು ರಾತ್ರಿ 8:30 ಆಗುವುದನ್ನೇ ಎದುರು ನೋಡುತ್ತಿದ್ದಾರೆ. ಇದಕ್ಕೆ ಸಾಕ್ಷಿ ಧಾರಾವಾಹಿಯ ಇತ್ತೀಚಿನ ಪ್ರೋಮೊಗಳು.
ಇದೆಲ್ಲದರ ಮಧ್ಯೆ ವ್ಯಕ್ತಿಯೊಬ್ಬರು ಬೈಕ್ ಏರಿ ಬರುವುದನ್ನು ಅಸ್ಪಷ್ಟವಾಗಿ ತೋರಿಸಲಾಗಿದ್ದು, ಆ ವ್ಯಕ್ತಿ ಯಾರಿರಬಹುದು ಎಂಬುದು ವೀಕ್ಷಕರ ವಲಯದಲ್ಲಿ ಚರ್ಚೆಯಾಗುತ್ತಿದೆ. ಬಹುತೇಕರು ಅವರು “ಜೋಡಿ ಹಕ್ಕಿ ರಾಮಣ್ಣ” ಎಂಬ ಅಭಿಪ್ರಾಯ ವ್ಯಕ್ತಪಡಿಸಿದ್ದಾರೆ. ಇನ್ನು ಕೆಲವರು ಬಿಗ್ ಬಾಸ್ ಮಾಜಿ ಸ್ಪರ್ಧಿ ಶೈನ್ ಶೆಟ್ಟಿ ಇರಬಹುದು ಎನ್ನುತ್ತಿದ್ದಾರೆ. ಮತ್ತೊಂದೆಡೆ ಆ ಪೊಲೀಸ್ ಆರ್ಯವರ್ಧನ್ ಕಚೇರಿಗೂ ಕಾಲಿಟ್ಟಿರುವುದು, ಆರ್ಯವರ್ಧನ್ ಪಿಎ ಮೀರಾ ಗಾಬರಿಯಾಗಿರುವುದು ಮತ್ತಷ್ಟು ಕುತೂಹಲ ಮೂಡಿಸಿದೆ.
ಹೀಗೆ ಧಾರಾವಾಹಿಯಲ್ಲಿ ಟ್ವಿಸ್ಟ್ ಮೇಲೆ ಟ್ವಿಸ್ಟ್ ಎದುರಾಗುತ್ತಿದ್ದು, ನಿಜಕ್ಕೂ ಧಾರಾವಾಹಿಗೆ ಹೊಸ ನಟನ ಎಂಟ್ರಿ ಆಗುತ್ತಿದೆಯಾ ಎಂಬುದನ್ನು ತಿಳಿಯಲು ಧಾರಾವಾಹಿಯ ಮುಂಬರುವ ಸಂಚಿಕೆಗಳನ್ನು ನೋಡಿದರೆ ತಿಳಿಯುತ್ತದೆ.