ಸ್ಯಾಂಡಲ್ವುಡ್ ಖ್ಯಾತ ಚಿತ್ರ ನಿರ್ಮಾಣ ಸಂಸ್ಥೆ ವಿಜಯ್ ಕಿರಗಂದೂರು ಅವರ ಹೊಂಬಾಳೆ ಫಿಲ್ಮ್ಸ್ ಇದೀಗ ಮತ್ತೊಂದು ಸಾಹಸಕ್ಕೆ ಮುಂದಾಗಿದೆ. ಕೇವಲ ಏಳು ವರ್ಷದ ಅವಧಿಯಲ್ಲಿ ಇತರ ಚಿತ್ರರಂಗವೇ ತಿರುಗಿ ನೋಡುವಂಥ ಸಿನಿಮಾಗಳನ್ನು ನೀಡಿರುವ ಈ ಸಂಸ್ಥೆ ಇದೀಗ ಏಕಕಾಲದಲ್ಲಿ ಹಲವಾರು ಭಾಷೆಗಳಲ್ಲಿ ಪ್ಯಾನ್ ಇಂಡಿಯಾ ಸಿನಿಮಾ ನಿರ್ಮಾಣ ಮಾಡಲು ದಾಪುಗಾಲಿಟ್ಟಿದೆ.
ಮತ್ತೊಂದು ದೊಡ್ಡ ಸಾಹಸಕ್ಕೆ ಕೈ ಹಾಕಿದ ಹೊಂಬಾಳೆ ಫಿಲ್ಮ್ಸ್...ಡಿಸೆಂಬರ್ 2 ರಂದು ಘೋಷಣೆ - Big announcement from Hombale films
ಕೆಜಿಎಫ್ನಂತ ಹಿಟ್ ಸಿನಿಮಾವನ್ನು ಕನ್ನಡ ಚಿತ್ರರಂಗಕ್ಕೆ ನೀಡಿರುವ ಹೊಂಬಾಳೆ ಫಿಲ್ಮ್ಸ್ ಬ್ಯಾನರ್, ಇದೀಗ ದೊಡ್ಡ ಸಾಹಸಕ್ಕೆ ಕೈ ಹಾಕಿದೆ. ಮತ್ತೊಂದು ಪ್ಯಾನ್ ಇಂಡಿಯಾ ಸಿನಿಮಾವನ್ನು ಹೊಂಬಾಳೆ ಫಿಲ್ಮ್ಸ್ ಮಾಡುತ್ತಿದ್ದು ಡಿಸೆಂಬರ್ 2 ರಂದು ಈ ಚಿತ್ರದ ಬಗ್ಗೆ ಘೋಷಿಸಲಿದೆ.
ಡಿಸೆಂಬರ್ 2ರ ಮಧ್ಯಾಹ್ನ 2.09ಕ್ಕೆ ನಿರ್ಮಾಪಕ ವಿಜಯ್ ಕಿರಂಗದೂರ್ ತಮ್ಮ ಹೊಸ ಚಿತ್ರದ ಬಗ್ಗೆ ದೊಡ್ಡ ಅನೌನ್ಸ್ಮೆಂಟ್ ಮಾಡಲಿದ್ದಾರೆ. 2014ರಲ್ಲಿ ಪುನೀತ್ ರಾಜ್‍ಕುಮಾರ್ ಅಭಿನಯದ 'ನಿನ್ನಿಂದಲೇ' ಸಿನಿಮಾ ಮೂಲಕ ಆರಂಭವಾದ ಹೊಂಬಾಳೆ ಫಿಲ್ಮ್ಡ್ ಸಿನಿಮಾ ನಿರ್ಮಾಣ ಪಯಣ ಮಾಸ್ಟರ್ ಪೀಸ್, ರಾಜಕುಮಾರ, ಕೆಜಿಎಫ್, ಕೆಜಿಎಫ್ 2, ಯುವರತ್ನ ವರೆಗೂ ಸಾಗಿ ಬಂದಿದೆ. ಒಟ್ಟು 7 ವರ್ಷಗಳಲ್ಲಿ ಏಳು ಸಿನಿಮಾಗಳನ್ನು ಈ ಸಂಸ್ಥೆ ನೀಡಿದೆ. ಅವುಗಳಲ್ಲಿ ಮೂರು ಸಿನಿಮಾಗಳು ಪ್ಯಾನ್ ಇಂಡಿಯಾ ಚಿತ್ರಗಳಾಗಿವೆ. ಇದೀಗ ಈ ಎಲ್ಲಾ ಸಿನಿಮಾಗಳಿಗಿಂತಲೂ ಮತ್ತೊಂದು ಮಹೋನ್ನತ ಪ್ರಾಜೆಕ್ಟ್ ಘೋಷಣೆಗೆ ಸಂಸ್ಥೆ ಸನ್ನದ್ಧವಾಗಿದ್ದು, ಏಕಕಾಲದಲ್ಲಿ ಹಲವಾರು ಭಾಷೆಗಳಲ್ಲಿ ಪ್ಯಾನ್ ಇಂಡಿಯಾ ಚಿತ್ರವನ್ನು ಘೋಷಣೆ ಮಾಡಲಿದೆ.
ಈ ವಿಶೇಷ ಪ್ರಾಜೆಕ್ಟ್ ಬಗ್ಗೆ ಡಿಸೆಂಬರ್ 2 ರಂದು ಮಧ್ಯಾಹ್ನ 2.09ಕ್ಕೆ ಹೊಂಬಾಳೆ ಫಿಲ್ಮ್ಸ್ ಅಧಿಕೃತ ಟ್ವಿಟರ್ನಲ್ಲಿ ಘೋಷಿಸಲಾಗುತ್ತದೆ. ಇದು ಯಾವ ಸಿನಿಮಾ, ನಿರ್ದೇಶಕರು ಯಾರು, ಪಾತ್ರವರ್ಗದ ಮಾಹಿತಿಯನ್ನೂ ಈ ಸಂಸ್ಥೆ ನೀಡಲಿದೆ. ಪ್ಯಾನ್ ಇಂಡಿಯಾ ಕಾನ್ಸೆಪ್ಟ್ ಸಾಕಷ್ಟು ಬೆಳವಣಿಗೆ ಹೊಂದಿದ್ದು, ಕನ್ನಡದ ಕೆಜಿಎಫ್ ಸಿನಿಮಾ ಈಗಾಗಲೇ ದೊಡ್ಡ ಮೈಲಿಗಲ್ಲನ್ನು ಸೃಷ್ಟಿಸಿದೆ. ಅದರ 10 ಪಟ್ಟು ನಿರೀಕ್ಷೆ ಕೆಜಿಎಫ್ ಚಾಪ್ಟರ್ 2 ಮೇಲೆ ಇದ್ದು, ಭಾರತ ಚಿತ್ರರಂಗವೇ ಈ ಸಿನಿಮಾಗಾಗಿ ಕಾಯುತ್ತಿದೆ. ಅದೇ ರೀತಿ ಪವರ್ಸ್ಟಾರ್ ಪುನೀತ್ ರಾಜ್‍ಕುಮಾರ್ ನಟನೆಯ ಯುವರತ್ನ ಚಿತ್ರವೂ ಕನ್ನಡದೊಂದಿಗೆ ತೆಲುಗಿನಲ್ಲಿ ಕೂಡಾ ಬಿಡುಗಡೆ ಆಗುತ್ತಿದೆ. ಇದೀಗ ಈ ಸಂಸ್ಥೆಯ ಹೊಸ ಸಿನಿಮಾವನ್ನು ಅನೌನ್ಸ್ ಮಾಡಿದ್ದು ಅದು ಯಾವ ಸಿನಿಮಾ ಎಂದು ತಿಳಿಯಲು ಇನ್ನೂ 2 ದಿನಗಳು ಕಾಯಬೇಕಿದೆ.