ಗಾಯಕಿ ಚಿನ್ಮಯಿ ಕಳೆದ ವರ್ಷ ಗಾಯಕ ರಘು ದೀಕ್ಷಿತ್ ವಿರುದ್ಧ ಮಿಟೂ ದನಿಯೆತ್ತಿದ್ದರು. ತನ್ನ ಸ್ನೇಹಿತೆಯೊಬ್ಬರಿಗೆ ರಘು ಲೈಂಗಿಕ ಕಿರುಕುಳ ನೀಡಿದ್ದರು ಎಂದು ಚಿನ್ಮಯಿ ಆಪಾದಿಸಿದ್ದರು. ಚಿನ್ಮಯಿ ಪತಿ ರಾಹುಲ್ ರವೀಂದ್ರನ್ ನಿರ್ದೇಶನದಲ್ಲಿ ಅಕ್ಕಿನೇನಿ ನಾಗಾರ್ಜುನ ನಟಿಸಿರುವ ತೆಲುಗು ಸಿನಿಮಾ 'ಮನ್ಮಥುಡು-2' ಟೀಸರನ್ನು ಚಿನ್ಮಯಿ ತಮ್ಮ ಸೋಶಿಯಲ್ ಮೀಡಿಯಾದಲ್ಲಿ ಶೇರ್ ಮಾಡಿಕೊಂಡಿದ್ದಾರೆ. ಈ ಟೀಸರ್ನಲ್ಲಿ ನಾಗಾರ್ಜುನ ಯುವತಿಯರೊಂದಿಗೆ ರೊಮ್ಯಾನ್ಸ್ ಮಾಡುವ ದೃಶ್ಯಗಳಿವೆ. ಇದಕ್ಕೆ ಆಕ್ಷೇಪ ವ್ಯಕ್ತಪಡಿಸಿರುವ ನೆಟಿಜನ್ಗಳು ಮಹಿಳೆಯರ ಪರ ಹೋರಾಡುವ ನೀವು ತಮ್ಮ ಸ್ವಾರ್ಥಕ್ಕಾಗಿ ಇಂತಹ ಟೀಸರ್ ಶೇರ್ ಮಾಡಿರುವುದು ತಪ್ಪಲ್ಲವೇ ಎಂದು ಪ್ರಶ್ನಿಸಿದ್ದಾರೆ. ಇದಕ್ಕೆ ಪತ್ನಿ ಪರವಾಗಿ ಉತ್ತರಿಸಿರುವ ರಾಹುಲ್, ಪೂರ್ತಿ ಸಿನಿಮಾ ನೋಡಿ ನಂತರ ಮಾತನಾಡಿ ಎಂದು ರಿಪ್ಲೇ ಮಾಡಿದ್ದಾರೆ.
ಮಿಟೂ ವಿರುದ್ಧ ದನಿಯೆತ್ತುವ ನೀವು ಹೀಗೆ ಮಾಡುವುದು ತಪ್ಪಲ್ಲವೇ: ಗಾಯಕಿಯನ್ನು ಪ್ರಶ್ನಿಸಿದ ನೆಟಿಜನ್ಗಳು - undefined
ಚಿನ್ಮಯಿ ಶ್ರೀಪಾದ ತಮಿಳು, ತೆಲುಗು, ಹಿಂದಿ, ಮಲಯಾಳಂ ಹಾಗೂ ಕನ್ನಡದಲ್ಲಿ ಕೂಡಾ ಸಾಕಷ್ಟು ಹಾಡುಗಳನ್ನು ಹಾಡಿದ್ದಾರೆ. ಪುನೀತ್ ರಾಜ್ಕುಮಾರ್ ಅಭಿನಯದ 'ನಿನ್ನಿಂದಲೇ' ಚಿತ್ರದ 'ನಿಂತೆ ನಿಂತೆ ಕಾಯುತ್ತಾ' ಹಾಡು ನಿಮಗೆ ನೆನಪಿರಬಹುದು. ಈ ಹಾಡು ಕೂಡಾ ಚಿನ್ಮಯಿ ಅವರೇ ಹಾಡಿರುವುದು.
ಇನ್ನು ಚಿನ್ಮಯಿ ಶ್ರೀಪಾದ ತಮ್ಮ ಅಭಿಮಾನಿಯೊಬ್ಬರ ಮೇಲೆ ಮತ್ತೊಂದು ವಿಷಯಕ್ಕೆ ಕೋಪಗೊಂಡಿದ್ದಾರೆ. ಯುವಕನೊಬ್ಬ ಸೋಶಿಯಲ್ ಮೀಡಿಯಾದಲ್ಲಿ ಚಿನ್ಮಯಿಗೆ ಅಸಭ್ಯವಾಗಿ ಮೆಸೇಜ್ ಮಾಡಿದ್ದಾನೆ. ಇದನ್ನು ನೋಡಿದ ಚಿನ್ಮಯಿ ಅದರ ಸ್ಕ್ರೀನ್ ಶಾಟ್ ತೆಗೆದು ತಮ್ಮ ಟ್ವಿಟರ್ನಲ್ಲಿ ಶೇರ್ ಮಾಡಿ ಅಭಿಮಾನಿಯಾದವರು ಎಂದಿಗಾದರೂ ಹೀಗೆ ಮೆಸೇಜ್ ಮಾಡುವರಾ ಎಂದು ಪ್ರಶ್ನಿಸಿದ್ದಾರೆ.
ಇದನ್ನು ನೋಡಿದ ಮತ್ತೊಬ್ಬ ಯುವಕ 'ಒಬ್ಬ ಅಭಿಮಾನಿ ಮೆಸೇಜ್ಗೆ ರಿಪ್ಲೇ ಮಾಡದೆ ಆತನಿಗೆ ಬೇಸರವಾಗುವವರೆಗೂ ಕಾಯಿಸಿ ಈಗ ಆ ಮೇಸೇಜ್ ಸ್ಕ್ರೀನ್ಶಾಟನ್ನು ಹೀಗೆ ಶೇರ್ ಮಾಡಲು ಸಮಯ ಇದೆ. ಆದರೆ ಆತನಿಗೆ ರಿಪ್ಲೇ ಮಾಡಲು ನಿಮಗೆ ಸಮಯ ಇಲ್ಲವಾ...?ಎಂದು ಪ್ರಶ್ನಿಸಿದ್ದಾನೆ. ಇದಕ್ಕೆ ಪ್ರತಿಕ್ರಿಯಿಸಿರುವ ಚಿನ್ಮಯಿ 'ನನಗೆ ಪ್ರತಿದಿನ ಸಾವಿರಾರು ಮೆಸೇಜ್ಗಳು ಬರುತ್ತಿರುತ್ತವೆ, ಇಲ್ಲಿ ಕೂತು ಪ್ರತಿಯೊಬ್ಬರಿಗೂ ರಿಪ್ಲೇ ಕೊಡುವುದು ನನ್ನ ಕೆಲಸ ಅಲ್ಲ' ಎಂದು ಉತ್ತರಿಸಿದ್ದಾರೆ.