ಕರ್ನಾಟಕ

karnataka

ETV Bharat / sitara

ಆಸ್ಪತ್ರೆ ಸೇರಿದ್ರೂ ಮೇಕಪ್​​​ ಬೇಕಿತ್ತಾ? : ಸಂಜನಾಗೆ ನೆಟ್ಟಿಗರ ಪ್ರಶ್ನೆ - sanjana in hospital

ಆಸ್ಪತ್ರೆಯಲ್ಲಿರುವ ಸಂಜನಾ ಫೋಟೋಕ್ಕೆ ಅಭಿಮಾನಿಗಳಿಂದ ತರಹೇವಾರಿ ಕಮೆಂಟ್​ಗಳು ಬರುತ್ತಿದೆ. ಫೋಟೋ ನೋಡಿದ ಅಭಿಮಾನಿಗಳು, ಆಸ್ಪತ್ರೆಯಲ್ಲಿ ಇರಬೇಕಾದ್ರೆ, ಮುಖಕ್ಕೆ ಮೇಕಪ್ ಹಾಗೂ ತುಟಿಗೆ ಲಿಪ್ ಸ್ಟಿಕ್ ಬೇಕಾಗಿತ್ತಾ ಅಂತಾ ಸಾಕಷ್ಟು ಮಂದಿ ಸಂಜನಾಗೆ ಪ್ರಶ್ನೆ ಕೇಳಿದ್ದಾರೆ.

ಆಸ್ಪತ್ರೆ ಸೇರಿದ್ರೂ ಮೇಕಪ್​​​ ಬೇಕಿತ್ತಾ? : ಸಂಜನಾಗೆ ನೆಟ್ಟಿಗರ ಪ್ರಶ್ನೆ
ಆಸ್ಪತ್ರೆ ಸೇರಿದ್ರೂ ಮೇಕಪ್​​​ ಬೇಕಿತ್ತಾ? : ಸಂಜನಾಗೆ ನೆಟ್ಟಿಗರ ಪ್ರಶ್ನೆ

By

Published : Feb 11, 2021, 6:30 PM IST

ಸ್ಯಾಂಡಲ್‌ವುಡ್‌ನಲ್ಲಿ ಡ್ರಗ್ ಪ್ರಕರಣಕ್ಕೆ ಸಂಬಂಧಿಸಿದಂತೆ ಮೂರು ತಿಂಗಳು ಜೈಲುವಾಸ ಅನುಭವಿಸಿ, ಅನಾರೋಗ್ಯದ ಹಿನ್ನೆಲೆ ಹೊರಗಡೆ ಬಂದಿರುವ ಸಂಜನಾ ಗಲ್ರಾನಿ ಇದೀಗ ತಾವು ಆಸ್ಪತ್ರೆಯಲ್ಲಿರುವ ಫೋಟೋವನ್ನು ಇನ್​ಸ್ಟಾಗ್ರಾಮ್​​ನಲ್ಲಿ ಶೇರ್​​ ಮಾಡಿದ್ದಾರೆ.

ನಟಿ ಸಂಜನಾ ಗಲ್ರಾನಿ ಆಸ್ಪತ್ರೆಗೆ ದಾಖಲು

ಈ ಫೋಟೋಕ್ಕೆ ಅಭಿಮಾನಿಗಳಿಂದ ತರಹೇವಾರಿ ಕಮೆಂಟ್​ಗಳು ಬರುತ್ತಿದೆ. ಫೋಟೋ ನೋಡಿದ ಅಭಿಮಾನಿಗಳು, ಆಸ್ಪತ್ರೆಯಲ್ಲಿ ಇರಬೇಕಾದ್ರೆ, ಮುಖಕ್ಕೆ ಮೇಕಪ್ ಹಾಗೂ ತುಟಿಗೆ ಲಿಪ್ ಸ್ಟಿಕ್ ಬೇಕಾಗಿತ್ತಾ ಅಂತಾ ಸಾಕಷ್ಟು ಮಂದಿ ಸಂಜನಾಗೆ ಪ್ರಶ್ನೆ ಕೇಳಿದ್ದಾರೆ.

ಸಂಜನಾಗೆ ನೆಟ್ಟಿಗರ ಪ್ರಶ್ನೆ

ಮತ್ತೊಂದು ಕಡೆ ಸಂಜನಾ ಸಿಸಿಬಿ ಪೊಲೀಸರ ಕಣ್ಣು ತಪ್ಪಿಸಲು ಈ ಫೋಟೋ ಹಾಕಿ ಅನುಕಂಪ ಗಿಟ್ಟಿಸುತ್ತಿದ್ದಾರೆ ಎಂಬ ಮಾತುಗಳು ಕೇಳಿ ಬಂದಿವೆ. ಆದರೆ ಸಂಜನಾ ಆಸ್ಪತ್ರೆಯಲ್ಲಿರೋ ಫೋಟೋ ನೋಡಿದ್ರೆ ಸಂಜನಾಗೆ ಆರೋಗ್ಯ ಕೆಡುವಂತಹದ್ದು ಏನಾಗಿದೆ ಅಂತಾ ಮತ್ತೆ ಕೆಲವರು ಕೇಳಿದ್ದಾರೆ.

ABOUT THE AUTHOR

...view details