ಕನ್ನಡ ಚಿತ್ರರಂಗದ ಕ್ಯೂಟ್ ಕಪಲ್ ಎನಿಸಿಕೊಂಡ ರಾಕಿಂಗ್ ಸ್ಟಾರ್ ಯಶ್ ಹಾಗೂ ಸ್ಯಾಂಡಲ್ವುಡ್ ಪ್ರಿನ್ಸ್ ರಾಧಿಕಾ ಪಂಡಿತ್ ತಮ್ಮ ಮುದ್ದು ಮಕ್ಕಳ ಫೋಟೋ, ವಿಡಿಯೋಗಳನ್ನು ಆಗ್ಗಾಗ್ಗೆ ತಮ್ಮ ಸೋಷಿಯಲ್ ಮೀಡಿಯಾದಲ್ಲಿ ಹಂಚಿಕೊಳ್ಳುತ್ತಿರುತ್ತಾರೆ. ಕಳೆದ ಬಾರಿ ಮಾಲ್ಡೀವ್ಸ್ ಟ್ರಿಪ್ ತೆರಳಿ ಆ ಫೋಟೋಗಳನ್ನು ಸೋಷಿಯಲ್ ಮೀಡಿಯಾದಲ್ಲಿ ಹಂಚಿಕೊಂಡಿದ್ದರು. ಇದೀಗ ಯಶ್, ತಮ್ಮ ಪುತ್ರನೊಂದಿಗೆ ಕಾಲ ಕಳೆಯುತ್ತಿರುವ ಮುದ್ದು ವಿಡಿಯೋವೊಂದನ್ನು ಸೋಷಿಯಲ್ ಮೀಡಿಯಾದಲ್ಲಿ ಹಂಚಿಕೊಂಡಿದ್ದಾರೆ.
ಪುತ್ರನ ವಿಡಿಯೋ ಹಂಚಿಕೊಂಡ ಯಶ್...ಅಥರ್ವನ ತೊದಲು ಮಾತಿಗೆ ನೆಟಿಜನ್ಸ್ ಫಿದಾ
ತಮ್ಮ ಪುತ್ರ ಯಥರ್ವನ ಜೊತೆ ಮಾತನಾಡುತ್ತಿರುವ ಮುದ್ದು ವಿಡಿಯೋವೊಂದನ್ನು ರಾಕಿಂಗ್ ಸ್ಟಾರ್ ಯಶ್ ತಮ್ಮ ಸೋಷಿಯಲ್ ಮೀಡಿಯಾದಲ್ಲಿ ಹಂಚಿಕೊಂಡಿದ್ದಾರೆ. ಯಥರ್ವನ ತೊದಲು ಮಾತಿಗೆ ನೆಟಿಜನ್ಸ್ ಕೂಡಾ ಮೆಚ್ಚುಗೆ ವ್ಯಕ್ತಪಡಿಸಿದ್ದಾರೆ.
ಇದನ್ನೂ ಓದಿ:ಕೊಲ್ಲಾಪುರದ ಅಂಬಾಬಾಯಿ ತಾಯಿಯ ಆಶೀರ್ವಾದ ಪಡೆದ ಪವರ್ ಸ್ಟಾರ್
ಯಶ್ ಹಂಚಿಕೊಂಡಿರುವ ವಿಡಿಯೋದಲ್ಲಿ ಪುತ್ರ ಯಥರ್ವ್ ಅಪ್ಪನ ಕೆನ್ನೆಗೆ ಹೊಡೆಯುತ್ತಾ ಖುಷಿಯಿಂದ ನಗುತ್ತಿದ್ದಾನೆ. ಅಷ್ಟೇ ಅಲ್ಲ, ತನ್ನ ತೊದಲು ಮಾತಿನಿಂದ ಅಪ್ಪನಿಗೆ ಏನೋ ಹೇಳಲು ಪ್ರಯತ್ನಿಸುತ್ತಿದ್ದಾನೆ. ಪದೇ ಪದೇ ಅಪಾಪಿನ್....ಅಪಾಪಿನ್ ಎಂದು ಯಥರ್ವ ಹೇಳಿದ ಮಾತು ಯಶ್ಗೆ ಅರ್ಥವಾಗದೆ ಹಾಗೆಂದರೇನು ಮಗನೇ ಎಂದು ಕೇಳುತ್ತಾರೆ. ಆಗ ಯಥರ್ವ್ ಸನ್ನೆ ಮಾಡುತ್ತಾನೆ. ಆಗಲೇ ಯಶ್ಗೆ ಅಪಾಪಿನ್ ಎಂದರೆ ಯಥರ್ವನ ಭಾಷೆಯಲ್ಲಿ ಏರೊಪ್ಲೇನ್ ಎಂದು ಅರ್ಥವಾಗುತ್ತದೆ. ಈ ಅಪ್ಪ-ಮಗನ ಮುದ್ದಾದ ವಿಡಿಯೋಗೆ ಅಭಿಮಾನಿಗಳು ಮೆಚ್ಚುಗೆ ವ್ಯಕ್ತಪಡಿಸುತ್ತಿದ್ದಾರೆ. ಯಥರ್ವನ ಮುದ್ದು ಮಾತಿಗೆ ನೆಟಿಜನ್ಸ್ ಫಿದಾ ಆಗಿದ್ದಾರೆ. ಇನ್ನು ಈ ವಿಡಿಯೋ ಹಿನ್ನೆಲೆಯಲ್ಲಿ ಯಶ್ ಪುತ್ರಿ ಐರಾ ಯಾರೊಂದಿಗೋ ನಗುತ್ತಾ ಮಾತನಾಡುತ್ತಿರುವ ಧ್ವನಿಯನ್ನು ಕೂಡಾ ನೀವು ಕೇಳಬಹುದು. ಇನ್ಸ್ಟಾಗ್ರಾಮ್ನಲ್ಲಿ ಇದನ್ನು ಅಪ್ಲೋಡ್ ಮಾಡಿದ ಕೆಲವೇ ಗಂಟೆಗಳಲ್ಲಿ 14 ಲಕ್ಷಕ್ಕೂ ಅಧಿಕ ಮಂದಿ ಈ ವಿಡಿಯೋ ನೋಡಿದ್ದಾರೆ.