ಕರ್ನಾಟಕ

karnataka

ETV Bharat / sitara

ಅಲ್ಲು ಅರ್ಜುನ್ ಪುತ್ರಿ ಅರ್ಹಾ ಡೈಲಾಗ್​​​ಗೆ ನೆಟಿಜನ್ಸ್ ಫಿದಾ - Allu Arjun daughter Arha

ಅಲ್ಲು ಅರ್ಜುನ್ ಇತ್ತೀಚೆಗೆ ತಮ್ಮ ಸೋಷಿಯಲ್ ಮೀಡಿಯಾದಲ್ಲಿ ಹಂಚಿಕೊಂಡಿರುವ ಮಗಳು ಅರ್ಹಾ ವಿಡಿಯೋವೊಂದು ನೆಟಿಜನ್ಸ್ ಮನಗೆದ್ದಿದೆ. ಮುದ್ದು ಮುದ್ದಾಗಿ ಅರ್ಹಾ ತೆಲುಗಿನಲ್ಲಿ ಮಾತನಾಡಿರುವ ವಿಡಿಯೋ ವೈರಲ್ ಆಗುತ್ತಿದೆ.

Allu arjun daughter
ಅಲ್ಲು ಅರ್ಜುನ್ ಪುತ್ರಿ ಅರ್ಹಾ

By

Published : Feb 1, 2021, 5:52 PM IST

ಸ್ಟೈಲಿಷ್ ಸ್ಟಾರ್ ಅಲ್ಲು ಅರ್ಜುನ್, ಸಿನಿಮಾದಲ್ಲಿ ಎಷ್ಟು ಬ್ಯುಸಿ ಇದ್ದರೂ ತಮ್ಮ ಕುಟುಂಬಕ್ಕೆ ಮೊದಲ ಆದ್ಯತೆ ನೀಡುತ್ತಾರೆ. ಎಷ್ಟೇ ಕೆಲಸ ಇದ್ದರೂ ಭಾನುವಾರ ಮಾತ್ರ ಮಕ್ಕಳೊಂದಿಗೆ ಆಟ ಆಡಿಕೊಂಡು ಕಾಲ ಕಳೆಯುವ ಅಲ್ಲು ಅರ್ಜುನ್, ಆಗ್ಗಾಗ್ಗೆ ತಮ್ಮ ಕುಟುಂಬದ ಫೋಟೋ, ವಿಡಿಯೋಗಳನ್ನು ಸೋಷಿಯಲ್ ಮೀಡಿಯಾದಲ್ಲಿ ಅಪ್​​ಲೋಡ್ ಮಾಡುತ್ತಿರುತ್ತಾರೆ.

ಇದನ್ನೂ ಓದಿ:ಡಾಲಿಯ 'ರತ್ನನ್ ಪ್ರಪಂಚ' ನೋಡಲು ಮುಗಿಬಿದ್ದ ಲಕ್ಕುಂಡಿ ಜನ.. ಅಭಿಮಾನಿಗಳಿಗೆ ಕೈಬೀಸಿದ ಅಲ್ಲಮ..

ಅಲ್ಲು ಸೋಷಿಯಲ್ ಮೀಡಿಯಾದಲ್ಲಿ ಮಗ ಅಯಾನ್ ಹಾಗೂ ಮುದ್ದು ಮಗಳು ಅರ್ಹಾ ವಿಡಿಯೋಗಳು ಕೂಡಾ ಹೆಚ್ಚಾಗಿ ಕಾಣಸಿಗುತ್ತವೆ. ಇತ್ತೀಚೆಗೆ ಮಗಳ ಹುಟ್ಟುಹಬ್ಬದಂದು 'ಅಂಜಲಿ' ಸಿನಿಮಾ ಹಾಡನ್ನು ರೀಕ್ರಿಯೇಟ್ ಮಾಡಿರುವ ವಿಡಿಯೋವೊಂದನ್ನು ಅಲ್ಲು ಅರ್ಜುನ್ ತಮ್ಮ ಸೋಷಿಯಲ್ ಮೀಡಿಯಾದಲ್ಲಿ ಹಂಚಿಕೊಂಡಿದ್ದರು. ಈ ವಿಡಿಯೋ ಬಹಳ ವೈರಲ್ ಆಗಿತ್ತು. ಈಗ ಅರ್ಹಾಳ ಮತ್ತೊಂದು ವಿಡಿಯೋವನ್ನು ಅಲ್ಲು ಅರ್ಜುನ್ ಹಂಚಿಕೊಂಡಿದ್ದಾರೆ. ಈ ವಿಡಿಯೋದಲ್ಲಿ ಅರ್ಹಾ ತೊದಲು ಮಾತುಗಳಿಂದ ಅಪ್ಪನ ಕಡೆ ನೋಡುತ್ತಾ "ಬೆಂಡೆ​​​​ಕಾಯ್,ದೊಂಡೆ​ಕಾಯ್ ನುವ್ವು ನಾ ಗುಂಡೆ​ಕಾಯ್ (ಹೃದಯ)" ಎಂದು ಮುದ್ದು ಮುದ್ದಾಗಿ ಹೇಳುವುದನ್ನು ನೋಡಬಹುದು. ಈ ವಿಡಿಯೋವನ್ನು ನೆಟಿಜನ್ಸ್​​​​​​​ ಮತ್ತೆ ಮತ್ತೆ ಪ್ಲೇ ಮಾಡಿ ನೋಡುತ್ತಿದ್ದಾರೆ. ಅಲ್ಲು ಅರ್ಜುನ್ ಕೂಡಾ ಮಗಳ ಈ ಡೈಲಾಗ್ ಕೇಳಿ ಜೋರಾಗಿ ನಗುತ್ತಿದ್ದಾರೆ. "ನಿನ್ನನ್ನು ಬಹಳ ಮಿಸ್ ಮಾಡಿಕೊಳ್ಳುತ್ತಿದ್ದೇನೆ ಅರ್ಹಾ, ನೀನು ನನ್ನ ಮುದ್ದು ಕಂದ, ನಿನ್ನ ನೋಡಿದರೆ ನನ್ನ ಒತ್ತಡವೆಲ್ಲಾ ಕಡಿಮೆಯಾಗುತ್ತದೆ" ಎಂದು ಬರೆದುಕೊಂಡಿದ್ದಾರೆ.

ABOUT THE AUTHOR

...view details