ಪುನೀತ್ ರಾಜ್ಕುಮಾರ್ ಅಭಿನಯದ 'ಯಾರೇ ಕೂಗಾಡಲಿ' ಚಿತ್ರದ 'ಹಲೋ 123 ಮೈಕ್ ಟೆಸ್ಟಿಂಗ್' ಹಾಡಿನಲ್ಲಿ ಹೆಜ್ಜೆ ಹಾಕಿದ ತೆಲುಗು ನಟಿ ಚಾರ್ಮಿ ಕೌರ್ ನಿಮ್ಮೆಲ್ಲರಿಗೂ ಗೊತ್ತು. 'ಇಸ್ಮಾರ್ಟ್ ಶಂಕರ್' ಚಿತ್ರವನ್ನು ನಿರ್ಮಿಸಿ ಚಾರ್ಮಿ ನಿರ್ಮಾಪಕಿಯಾಗಿ ಕೂಡಾ ಗುರುತಿಸಿಕೊಂಡಿದ್ದಾರೆ.
ಕೊರೋನ ಬಗ್ಗೆ ಕಾಮಿಡಿ ಟಿಕ್ಟಾಕ್ ಮಾಡಿ ಛೀಮಾರಿ ಹಾಕಿಸಿಕೊಂಡ ಚಾರ್ಮಿ ಕೌರ್ - ಚಾರ್ಮಿ ಕೌರ್ ಮೇಲೆ ಕೆಂಡ ಕಾರಿದ ನೆಟಿಜನ್ಸ್
ದೇಶಕ್ಕೆ ದೇಶವೇ ಕೊರೋನ ವೈರಸ್ನಿಂದ ಭಯ ಪಡುತ್ತಿದೆ. ಸೋಮವಾರವಷ್ಟೇ ಮೊದಲ ಕೊರೋನ ವೈರಸ್ ಕೇಸ್ ತೆಲಂಗಾಣದಲ್ಲಿ ವರದಿಯಾಗಿತ್ತು. ಚಾರ್ಮಿ ಕೌರ್ ಈ ವಿಷಯದ ಬಗ್ಗೆ ತಮಾಷೆಯಾಗಿ ಟಿಕ್ ಟಾಕ್ ಮಾಡಿ ಜನರ ಕೋಪಕ್ಕೆ ಕಾರಣರಾಗಿದ್ದಾರೆ.
ಇನ್ನು ದೇಶಕ್ಕೆ ದೇಶವೇ ಕೊರೋನ ವೈರಸ್ನಿಂದ ಭಯ ಪಡುತ್ತಿದೆ. ಸೋಮವಾರವಷ್ಟೇ ಮೊದಲ ಕೊರೋನ ವೈರಸ್ ಕೇಸ್ ತೆಲಂಗಾಣದಲ್ಲಿ ವರದಿಯಾಗಿತ್ತು. ಚಾರ್ಮಿ ಕೌರ್ ಈ ವಿಷಯದ ಬಗ್ಗೆ ತಮಾಷೆಯಾಗಿ ಟಿಕ್ ಟಾಕ್ ಮಾಡಿ ಜನರ ಕೋಪಕ್ಕೆ ಕಾರಣರಾಗಿದ್ದಾರೆ. 'ಆಲ್ ದಿ ಬೆಸ್ಟ್ ಗಾಯ್ಸ್..ಏಕೆಂದರೆ ಕೊರೋನ ವೈರಸ್ ದೆಹಲಿ ಹಾಗೂ ತೆಲಂಗಾಣಕ್ಕೆ ಕೂಡಾ ಕಾಲಿಟ್ಟಿದೆಯಂತೆ. ಈಗ ತಾನೇ ನಾನು ಈ ಸುದ್ದಿಯನ್ನು ಕೇಳಿದೆ. ಅದಕ್ಕಾಗಿ ನಿಮ್ಮೆಲ್ಲರಿಗೂ ಆಲ್ ದಿ ಬೆಸ್ಟ್ ...ಕರೋನ ವೈರಸ್ ಬಂತು, ಎಂದು ನಗುತ್ತಾ ಟಿಕ್ ಟಾಕ್ ಮಾಡಿದ್ದಾರೆ. ಆದರೆ ಈ ವಿಡಿಯೋ ವೈರಲ್ ಆಗುತ್ತಿದ್ದಂತೆ ಚಾರ್ಮಿಗೆ ಕಮೆಂಟ್ಗಳ ಮೂಲಕ ನೆಟಿಜನ್ಸ್ ಬೈಗುಳಗಳ ಸುರಿಮಳೆ ಸುರಿಸಿದ್ದಾರೆ.
ಕೊರೋನ ವೈರಸ್ನಿಂದ ಎಷ್ಟೋ ಮಂದಿ ಪ್ರಾಣ ಕಳೆದುಕೊಂಡಿದ್ದಾರೆ. ಆದರೆ ನೀನು ಈ ವಿಷಯವನ್ನು ತಮಾಷೆ ಅಂದುಕೊಂಡಿದ್ದೀಯ..?, ಇಂತ ಗಲೀಜು ವಿಡಿಯೋವನ್ನು ಷೇರ್ ಮಾಡಿದ್ದೀಯ, ಕೊರೋನ ಎಂದರೆ ಐಸ್ಕ್ರೀಮ್ ಹೆಸರು ಎಂದುಕೊಂಡಿದ್ದೀಯ...? ಎಂದೆಲ್ಲಾ ನೆಟಿಜನ್ಸ್ ಚಾರ್ಮಿಯನ್ನು ತರಾಟೆಗೆ ತೆಗೆದುಕೊಂಡಿದ್ದಾರೆ. ಈ ಕಮೆಂಟ್ಗಳನ್ನು ನೋಡುತ್ತಲೇ ಚಾರ್ಮಿ ವಿಡಿಯೋವನ್ನು ಡಿಲೀಟ್ ಮಾಡಿ ಕ್ಷಮೆ ಕೇಳಿದ್ದಾರೆ. 'ಸರಿಯಾಗಿ ಯೋಚಿಸದೆ ವಿಡಿಯೋವನ್ನು ಷೇರ್ ಮಾಡಿಬಿಟ್ಟೆ, ಇನ್ಮುಂದೆ ಯೋಚಿಸದೆ ಇಂತಹ ವಿಡಿಯೋಗಳನ್ನು ಷೇರ್ ಮಾಡುವುದಿಲ್ಲ' ಎಂದು ಕ್ಷಮೆ ಕೇಳಿದ್ದಾರೆ. ಮಂಗಳವಾರ ಸಿಕಿಂದ್ರಾಬಾದ್ ಗಾಂಧಿ ಆಸ್ಪತ್ರೆಯಲ್ಲಿ ಮೂವರಿಗೆ ಕೊರೋನ ತಗುಲಿರುವ ಶಂಕೆ ವ್ಯಕ್ತವಾಗಿದ್ದು ಮೂವರನ್ನೂ ರಕ್ತಪರೀಕ್ಷೆಗೆ ಒಳಪಡಿಸಲಾಗಿದೆ.