ವಾಷಿಂಗ್ಟನ್ (ಅಮೆರಿಕ):ಆನ್ಲೈನ್ ಸ್ಟ್ರೀಮಿಂಗ್ ಸಂಸ್ಥೆಯಾಗಿರುವ ನೆಟ್ಫ್ಲಿಕ್ಸ್ ಇದೀಗ ಗಾಲ್ ಗ್ಯಾಡೊಟ್ ಲೀಡ್ ರೋಲ್ನಲ್ಲಿ ನಟಿಸಿರುವ ಕ್ರೈಮ್ ಥ್ರಿಲ್ಲರ್ ‘ಹಾರ್ಟ್ ಆಓ್ ಸ್ಟೋನ್’ ಬಿಡುಗಡೆಯ ಹಕ್ಕು ತನ್ನದಾಗಿಸಿಕೊಂಡಿದೆ. ಈ ಸಿನಿಮಾವನ್ನು ಸ್ಕೈಡ್ಯಾನ್ಸ್ ಮೀಡಿಯಾ ನಿರ್ಮಿಸಿದ್ದು, ನಿರೀಕ್ಷೆ ಹುಟ್ಟುಹಾಕಿದೆ.
ಈ ವಾರದಲ್ಲಿ ಬಿಡುಗಡೆಯಾಗುತ್ತಿರುವ ಸ್ಕೈಡ್ಯಾನ್ಸ್ ನಿರ್ಮಾಣದ ಎರಡನೇ ಚಿತ್ರ ಇದಾಗಿದೆ. ಇದೇ ಮಂಗಳವಾರ ಸ್ಕೈಡ್ಯಾನ್ಸ್ ನಿರ್ಮಾಣದ ದಿ ಟುಮಾರೋ ವಾರ್ ಚಿತ್ರವನ್ನು ಅಮೆಜಾನ್ ಸ್ಟುಡಿಯೋಸ್ ರಿಲೀಸ್ ಮಾಡಿತ್ತು.