ಆದಿ ಲಕ್ಷ್ಮಿ ಪುರಾಣ ಸಿನಿಮಾ ಬಳಿಕ ನಿರೂಪ್ ಭಂಡಾರಿ ಕಿಚ್ಚ ಸುದೀಪ್ ಅಭಿನಯದ ಬಹು ನಿರೀಕ್ಷಿತ ಚಿತ್ರ ವಿಕ್ರಾಂತ್ ರೋಣದಲ್ಲಿ ವಿಶೇಷ ಪಾತ್ರದಲ್ಲಿ ಕಾಣಿಸಿಕೊಂಡಿದ್ದಾರೆ. ಈ ಸಿನಿಮಾದಲ್ಲಿ ಸಂಜೀವ್ ಗಂಭೀರ್ ಎಂಬ ಪಾತ್ರದಲ್ಲಿ ನಿರೂಪ್ ಭಂಡಾರಿ ಬಣ್ಣ ಹಚ್ಚಿದ್ದಾರೆ.
ವಿಕ್ರಾಂತ್ ರೋಣ ಸಿನಿಮಾ ಪಾತ್ರಕ್ಕಾಗಿ ಅಣ್ಣನನ್ನೇ ಬೈದುಕೊಂಡಿದ್ರಂತೆ ನಿರೂಪ್ - ವಿಕ್ರಾಂತ್ ರೋಣ ಸಿನಿಮಾ
ವಿಕ್ರಾಂತ್ ರೋಣ ಸಿನಿಮಾದ ತಮ್ಮ ಪಾತ್ರಕ್ಕಾಗಿ ನಿರ್ದೇಶಕ ಹಾಗೂ ತಮ್ಮ ಅಣ್ಣನಾದ ಅನೂಪ್ ಭಂಡಾರಿಯನ್ನು ನಿರೂಪ್ ಬೈದುಕೊಂಡಿದ್ದರಂತೆ.
ಇತ್ತೀಚೆಗೆ ನಡೆದ ಕಿಚ್ಚ ಸುದೀಪ್ 25ನೇ ವರ್ಷದ ಕಾರ್ಯಕ್ರಮದಲ್ಲಿ ಮಾತನಾಡಿದ ನಿರೂಪ್ ಭಂಡಾರಿ, ಈ ಪಾತ್ರ ಯಾರಿಗೆ ಕೊಡ್ತಾರೆ ಅಂತಾ ಮನಸ್ಸಿಲ್ಲೇ ನಾನು ಅಣ್ಣನನ್ನು ಬೈದು ಕೊಳ್ಳುತ್ತಿದ್ದೆ ಎಂದು ನಿರೂಪ್ ಹೇಳಿದ್ದಾರೆ. ನಂಗೆ ಈ ಪಾತ್ರ ಸಿಗುತ್ತೆ ಎಂದುಕೊಂಡಿರಲಿಲ್ಲ. ಸಿನಿಮಾ ಕತೆ ಬರೆಯಲು ಅನೂಪ್ ಶುರುಮಾಡಿ ದಾಗನಿಂದ ಅವರನ್ನು ಆಗಾಗ ಭೇಟಿ ಮಾಡುತ್ತಿದ್ದೆ. ಆದರೆ ನಂಗೆ ಅದರಲ್ಲಿ ಪಾತ್ರ ಸಿಗುತ್ತೆ ಅಂತ ಗೊತ್ತಿರಲಿಲ್ಲ ಎಂದರು.
ಕೊನೆಗೊಂದು ದಿನ ನಾನು ಅಭಿನಯಿಸಬೇಕಿದ್ದ ಪಾತ್ರಕ್ಕೆ ಬೇರೆ ಬೇರೆ ಆ್ಯಕ್ಟರ್ಗಳನ್ನು ಹುಡುಕುತ್ತಿದ್ದರು. ಅನೇಕ ಸ್ಟಾರ್ ಹೆಸರು ಕೇಳಿಬಂದಿದ್ದವು. ಹಾಗೆಲ್ಲ ಬೇರೆ ಸ್ಟಾರ್ ಹೆಸರು ಕೇಳಿದಾಗೆಲ್ಲ ನಾನು ಮನಸ್ಸಲೇ ಬೈದುಕೊಳ್ಳುತ್ತಿದ್ದೆ ಎಂದು ನಿರೂಪ್ ಹೇಳಿದ್ರು. ಅಲ್ಲದೇ ಸುದೀಪ್ ಸರ್ ಜೊತೆ ನಾನು ಸಿನಿಮಾ ಮಾಡಬೇಕು ಅಂದುಕೊಂಡಿದ್ದು, ಆ ಅವಕಾಶ ಸಿಗುತ್ತಲ್ವಾ ಅಂತ ಈ ಸಿನಿಮಾಕ್ಕಾಗಿ ಪರದಾಡಿದೆ ಎಂದು ಹೇಳಿದ್ದಾರೆ.