ಕರ್ನಾಟಕ

karnataka

ETV Bharat / sitara

ಲಾಕ್​​​ಡೌನ್​​​​​​​​​​​ನಲ್ಲಿ ಮೊದಲ ಫೋಟೋ ಶೂಟ್:  ಇನ್​​​ಸ್ಟಾದಲ್ಲಿ ಹಂಚಿಕೊಂಡ ನಟಿ ನೀತಾ - ಮೊದಲ ಫೋಟೋ ಶೂಟ್ ಹಂಚಿಕೊಂಡ ‘ನಾ ನಿನ್ನ ಬಿಡಲಾರೆ’ ನೀತಾ

ಆರು ವರ್ಷದ ಹಿಂದಿನ ಪೋಟೋ ವನ್ನು ಹಾಕಿರುವ ನೀತಾ ಅಶೋಕ್ ಮೊದಲ ಬಾರಿ ಕಿರುತೆರೆ ಯಾನ ಆರಂಭಿಸಿದ್ದು ಯಶೋಧೆಯಾಗಿ. ಯಶೋಧೆ ಧಾರಾವಾಹಿಯ ಯಶು ಆಗಿ ಬಣ್ಣದ ಲೋಕಕ್ಕೆ ಬಂದ ಮುದ್ದು ಮುಖದ ಚೆಲುವೆ ಅನಿರೀಕ್ಷಿತವಾಗಿ ನಟನಾ ಪಯಣ ಆರಂಭಿಸಿದವರು.

Neeta Ashok sharing the first photo shoot at Lockdown
ನೀತಾ ಅಶೋಕ್

By

Published : May 5, 2020, 3:23 PM IST

ಕಲರ್ಸ್ ಸೂಪರ್ ವಾಹಿನಿಯಲ್ಲಿ ಪ್ರಸಾರವಾಗುತ್ತಿದ್ದ ನಾ ನಿನ್ನ ಬಿಡಲಾರೆ ಧಾರಾವಾಹಿಯಲ್ಲಿ ನಾಯಕಿ ನಂದಿನಿ ಆಗಿ ನಟಿಸುತ್ತಿದ್ದ ಕೋಟಾದ ಕುವರಿ ನೀತಾ ಅಶೋಕ್ ತಮ್ಮ ಮೊದಲ ಪ್ರಾಜೆಕ್ಟ್ ಫೋಟೋವೊಂದನ್ನು ಇನ್ ಸ್ಟಾಗ್ರಾಂನಲ್ಲಿ ಅಪ್ ಲೋಡ್ ಮಾಡಿದ್ದಾರೆ.

ನೀತಾ ಅಶೋಕ್

ಲಾಕ್ ಡೌನ್ ಸಮಯದಲ್ಲಿ ಮನೆಯಲ್ಲಿ ಕಾಲ ಕಳೆಯುತ್ತಿರುವ ನೀತಾ ಅಶೋಕ್ ಅವರು ಅಪ್ಪನ ಲ್ಯಾಪ್ ಟ್ಯಾಪ್ ನೋಡುತ್ತಿದ್ದಾಗ ದೊರೆತ ತಮ್ಮ ಮೊದಲ ಪ್ರಾಜೆಕ್ಟ್ ನ ಲುಕ್ ಟೆಸ್ಟ್ ಗಾಗಿ ತೆಗೆದ ಫೋಟೋವನ್ನು ಅಪ್ಲೋಡ್​​​ ಮಾಡಿದ್ದಾರೆ.

ನೀತಾ ಅಶೋಕ್

ಆರು ವರುಷದ ಹಿಂದಿನ ಫೋಟೋ ವನ್ನು ಹಾಕಿರುವ ನೀತಾ ಅಶೋಕ್ ಮೊದಲ ಬಾರಿ ಕಿರುತೆರೆ ಯಾನ ಆರಂಭಿಸಿದ್ದು ಯಶೋಧೆಯಾಗಿ. ಯಶೋಧೆ ಧಾರಾವಾಹಿಯ ಯಶು ಆಗಿ ಬಣ್ಣದ ಲೋಕಕ್ಕೆ ಬಂದ ಮುದ್ದು ಮುಖದ ಚೆಲುವೆ ಅನಿರೀಕ್ಷಿತವಾಗಿ ನಟನಾ ಪಯಣ ಆರಂಭಿಸಿದವರು.

ನೀತಾ ಅಶೋಕ್

ಎಂಬಿಎ ಪದವೀಧರೆಯಾಗಿರುಗ ನೀತಾ ಅಶೋಕ್ ಫೇಸ್ ಬುಕ್​​​ನ ಮೂಲಕ ನಟಿಸುವ ಅವಕಾಶ ಗಿಟ್ಟಿಸಿಕೊಂಡರು. ತಮ್ಮ ಧಾರಾವಾಹಿಗೆ ಹೊಸ ಮುಖವನ್ನು ಹುಡುಕುತ್ತಿದ್ದ ನಿರ್ದೇಶಕ ವಿನೋದ್ ದೊಂಡಾಳೆ ಕಣ್ಣಿಗೆ ಆಗ ಬಿದ್ದಿದ್ದೇ ನೀತಾ. ವಿನೋದ್ ದೊಂಡಾಳೆ ಅವರು ಧಾರಾವಾಹಿಯಲ್ಲಿ ನಟಿಸುತ್ತೀರಾ ಎಂದು ಕೇಳಿದಾಗ ಒಲ್ಲೆ ಎನ್ನದ ನೀತಾ ಕ್ರಿಯೇಟಿವ್ ಆಗಿ ತನ್ನನ್ನು ತಾನು ತೊಡಗಿಸಿಕೊಳ್ಳಲು ಇದು ಒಳ್ಳೆಯ ಅವಕಾಶ ಎಂದು ಒಪ್ಪಿಯೇ ಬಿಟ್ಟರು.

ನೀತಾ ಅಶೋಕ್

ಬಾಲ್ಯದಲ್ಲಿ ಸಾಂಸ್ಕೃತಿಕ ಕಾರ್ಯಕ್ರಮಗಳಲ್ಲಿ ವಿಶೇಷ ಒಲವು ಹೊಂದಿದ್ದ ನೀತಾ ಯಶೋಧೆಯ ನಂತರ ನಾ ನಿನ್ನ ಬಿಡಲಾರೆ ಧಾರಾವಾಹಿಯಲ್ಲಿ ನಾಯಕಿ ನಂದಿನಿಯಾಗಿ ನಟಿಸಿದರು. ಧಾರಾವಾಹಿಯ ಜೊತೆಗೆ ಅದೆಷ್ಟೋ ಜಾಹೀರಾತುಗಳಿಗೆ ರೂಪದರ್ಶಿಯಾಗಿ ಕಾಣಿಸಿಕೊಂಡಿರುವ ನೀತಾ ತುಳು ಸಿನಿಮಾ ಜಬರ್ ದಸ್ತ್ ಶಂಕರದಲ್ಲಿಯೂ ಬಣ್ಣ ಹಚ್ಚಿದ್ದಾರೆ. ಸದ್ಯ ಲಾಕ್ ಡೌನ್ ಸಮಯವನ್ನು ಮನೆ ಮಂದಿಯೊಂದಿಗೆ ಕಳೆಯುತ್ತಿದ್ದಾರೆ ನೀತಾ.

ನೀತಾ ಅಶೋಕ್
ನೀತಾ ಅಶೋಕ್

ABOUT THE AUTHOR

...view details