ಅಭಿನಯ ಚತುರ, ಸತೀಶ್ ನೀನಾಸಂ ಇಂದು ಹುಟ್ಟುಹಬ್ಬದ ಸಂಭ್ರಮದಲ್ಲಿದ್ದಾರೆ. ಕೊರೊನಾ ಲಾಕ್ಡೌನ್ ಕಾರಣದಿಂದ ಸತೀಶ್, ಬೆಂಗಳೂರಿನ ರಾಜರಾಜೇಶ್ವರಿ ನಗರದ ತಮ್ಮ ನಿವಾಸದಲ್ಲಿ ಈ ಬಾರಿ ಸರಳವಾಗಿ ಹುಟ್ಟುಹಬ್ಬ ಆಚರಿಸಿಕೊಂಡಿದ್ದಾರೆ.
ಬರ್ತ್ಡೇ ಖುಷಿಯಲ್ಲಿ ಹೊಸ ಚಿತ್ರಗಳನ್ನು ಘೋಷಿಸಿದ ಸತೀಶ್ ನೀನಾಸಂ - Satish celebrate simple birthday
ಇಂದು ಸತೀಶ್ ನೀನಾಸಂ ಹುಟ್ಟುಹಬ್ಬ ಆಚರಿಸಿಕೊಳ್ಳುತ್ತಿದ್ದು ಈ ವಿಶೇಷ ದಿನದ ಅಂಗವಾಗಿ ತಮ್ಮ ಹೊಸ ಸಿನಿಮಾಗಳನ್ನು ಅನೌನ್ಸ್ ಮಾಡಿದ್ದಾರೆ. ಈ ಬಾರಿ ಸತೀಶ್ ಬೆಂಗಳೂರಿನ ನಿವಾಸದಲ್ಲಿ ಕುಟುಂಬದವರೊಂದಿಗೆ ಸರಳವಾಗಿ ಹುಟ್ಟುಹಬ್ಬ ಆಚರಿಸಿಕೊಂಡಿದ್ದಾರೆ.
![ಬರ್ತ್ಡೇ ಖುಷಿಯಲ್ಲಿ ಹೊಸ ಚಿತ್ರಗಳನ್ನು ಘೋಷಿಸಿದ ಸತೀಶ್ ನೀನಾಸಂ Neenasam Satish](https://etvbharatimages.akamaized.net/etvbharat/prod-images/768-512-7696174-177-7696174-1592653197945.jpg)
ಅಭಿಮಾನಿಗಳು ಸತೀಶ್ ಹುಟ್ಟುಹಬ್ಬದಲ್ಲಿ ಪಾಲ್ಗೊಳ್ಳಲು ಸಾಧ್ಯವಾಗದೇ ಇದ್ದರೂ ಸತೀಶ್ ಮಾತ್ರ ಅಭಿಮಾನಿಗಳಿಗೆ ನಿರಾಸೆ ಮಾಡದೆ ಖುಷಿ ಸುದ್ದಿಯೊಂದನ್ನು ನೀಡಿದ್ದಾರೆ. ಹುಟ್ಟುಹಬ್ಬದಂದು ತಮ್ಮ ಹೊಸ ಸಿನಿಮಾಗಳನ್ನು ಸತೀಶ್ ಘೋಷಿಸಿದ್ದಾರೆ. ಈ ಮೂಲಕ ತಮ್ಮ ಬರ್ತಡೇಯಂದು ತಾವೇ ಅಭಿಮಾನಿಗಳಿಗೆ ಗಿಫ್ಟ್ ನೀಡಿದ್ದಾರೆ. ಶರ್ಮಿಳಾ ಮಾಂಡ್ರೆ ನಿರ್ಮಾಣದಲ್ಲಿ ಸತೀಶ್ ತಾವು ಅಭಿನಯಿಸುತ್ತಿರುವ 'ದಸರಾ' ಚಿತ್ರದ ಟೈಟಲ್ ಹಾಗೂ ಫಸ್ಟ್ಲುಕ್ ರಿವೀಲ್ ಮಾಡಿದ್ದಾರೆ.
ಶ್ರೀ ಸಾಯಿ ಪ್ರೊಡಕ್ಷನ್ಸ್ ಬ್ಯಾನರ್ ಅಡಿಯಲ್ಲಿ ತಯಾರಾಗುತ್ತಿರುವ ಸಿನಿಮಾವನ್ನು ಸ್ವಾಮಿಗೌಡ ನಿರ್ಮಿಸುತ್ತಿದ್ದಾರೆ. ಆದರೆ ಈ ಸಿನಿಮಾಗೆ ಇನ್ನೂ ಟೈಟಲ್ ಫಿಕ್ಸ್ ಆಗಿಲ್ಲ.ಇದರ ಜೊತೆಗೆ ನಿರ್ಮಾಪಕಿ ವಿನುತಾ ಮಂಜುನಾಥ್ ನಿರ್ಮಾಣದಲ್ಲಿ ಸತೀಶ್ ನಟಿಸುತ್ತಿದ್ದು ಈ ಸಿನಿಮಾಗೆ ಕೂಡಾ ಟೈಟಲ್ ಫೈನಲ್ ಮಾಡಿಲ್ಲ. ಈಗಾಗಲೇ ಬಿಡುಗಡೆಗೆ ಸಿದ್ಧವಿರುವ 'ಗೋದ್ರಾ ' ಚಿತ್ರತಂಡ ಸತೀಶ್ ಹುಟ್ಟುಹಬ್ಬಕ್ಕಾಗಿ ಸ್ಪೆಷಲ್ ಟೀಸರ್ ಲಾಂಚ್ ಮಾಡಿ ಅಭಿನಯ ಚತುರನ ಹುಟ್ಟುಹಬ್ಬಕ್ಕೆ ಶುಭ ಕೋರಿದೆ.