ಕರ್ನಾಟಕ

karnataka

ETV Bharat / sitara

ವಿಡಿಯೋ: ಮೈಸೂರು ಸುತ್ತಾಡಿ ಎಂಜಾಯ್​ ಮಾಡಿದ 'ಕ್ವಾಟ್ಲೆ ಸತೀಸ'

ಕ್ವಾಟ್ಲೆ ಸತೀಸ​​ ಸಾಮಾನ್ಯರಂತೆ ಮೈಸೂರು ಸುತ್ತಾಡಿ, ಅರಮನೆ ನಗರಿಯ ಅದ್ಭುತ ಕ್ಷಣಗಳನ್ನು ತಮ್ಮ ಟ್ವಿಟ್ಟರ್​​ನಲ್ಲಿ ಪೋಸ್ಟ್​​ ಮಾಡಿದ್ದಾರೆ.

neenasam sateesh mysuru rounds
ವಿಡಿಯೋ : ಮೈಸೂರು ಸುತ್ತಾಡಿ ಎಂಜಾಯ್​ ಮಾಡಿದ 'ಕ್ವಾಟ್ಲೆ ಸತೀಸ'

By

Published : Oct 27, 2020, 12:47 PM IST

ಪೆಟ್ರೋಮ್ಯಾಕ್ಸ್​​​ ಸಿನಿಮಾ ಚಿತ್ರೀಕರಣದಲ್ಲಿ ಸಖತ್​ ಬ್ಯುಸಿ ಇರುವ ನಟ ನೀನಾಸಂ ಸತೀಶ್​ ಕೊಂಚ ಬಿಡುವು ಮಾಡಿಕೊಂಡು ಮೈಸೂರು ಸುತ್ತಾಡಿದ್ದಾರೆ. ದಸರಾ ಹಿನ್ನೆಲೆಯಲ್ಲಿ ಮೈಸೂರು ರೌಂಡ್ಸ್​ ಹಾಕಿರುವ ಕ್ವಾಟ್ಲೆ ಸತೀಶ, ಆ ವಿಡಿಯೋವನ್ನು ತಮ್ಮ ಟ್ವಿಟ್ಟರ್​​ನಲ್ಲಿ ಪೋಸ್ಟ್​ ಮಾಡಿ ವಿಜಯದಶಮಿಯ ಶುಭಾಶಯಗಳು ಎಂದು ಬರೆದುಕೊಂಡಿದ್ದಾರೆ.

ಮುಖಕ್ಕೆ ಮಾಸ್ಕ್,​ ತಲೆಗೆ ಟೋಪಿ ಧರಿಸಿ ಮೈಸೂರು ಅರಮನೆ ಸೇರಿದಂತೆ ಸಾಂಸ್ಕೃತಿಕ ನಗರದ ವೈಭವವನ್ನು ಸೆರೆಹಿಡಿದಿದ್ದಾರೆ. ಈ ಅದ್ಭುತ ಕ್ಷಣಗಳನ್ನು ತಮ್ಮ ಅಭಿಮಾನಿಗಳಿಗೂ ಶೇರ್​ ಮಾಡಿದ್ದಾರೆ.

ಪೆಟ್ರೋಮ್ಯಾಕ್ಸ್​​ ಚಿತ್ರಕ್ಕೆ ವಿಜಯ್ ಪ್ರಸಾದ್ ನಿರ್ದೇಶನ ಮಾಡುತ್ತಿದ್ದು, ಸತೀಶ್​​ ಜೊತೆ ನೀರ್​​ ದೋಸೆ ಬೆಡಗಿ ಹರಿಪ್ರಿಯಾ ಬಣ್ಣ ಹಚ್ಚಿದ್ದಾರೆ.

ABOUT THE AUTHOR

...view details