ಮುಂಬೈ:ಬಾಲಿವುಡ್ ಮೆಗಾಸ್ಟಾರ್ ಅಮಿತಾಬ್ ಬಚ್ಚನ್ ಮತ್ತು ದಕ್ಷಿಣ ನಟ ರಶ್ಮಿಕಾ ಮಂದಣ್ಣ ಅಭಿನಯದ ಗುಡ್ಬೈ ಸಿನಿಮಾಗೆ ಹಿರಿಯ ನಟಿ ನೀನಾ ಗುಪ್ತಾ ಸೇರ್ಪಡೆಯಾಗಿದ್ದು, ಅಮಿತಾಬ್ ಬಚ್ಚನ್ ಅವರ ಪತ್ನಿಯ ಪಾತ್ರವನ್ನು ಸಿನಿಮಾದಲ್ಲಿ ನಿರ್ವಹಿಸಲಿದ್ದಾರೆ.
ಈ ಸಿನಿಮಾವನ್ನು ವಿಕಾಸ್ ಬಹ್ಲ್ ನಿರ್ದೇಶನ ಮಾಡುತ್ತಿದ್ದು, ಬಾಲಾಜಿ ಟೆಲಿಫಿಲ್ಮ್ಸ್ ಮತ್ತು ರಿಲಯನ್ಸ್ ಎಂಟರ್‌ಟೈನ್‌ಮೆಂಟ್ ಬ್ಯಾನರ್ನಲ್ಲಿ ಈ ಸಿನಿಮಾ ಮೂಡಿಬರಲಿದೆ. ಬಿಗ್ ಬಿ ಮತ್ತು ನೀನಾ ಗುಪ್ತಾ ಕಾಂಬಿನೇಷನ್ನಲ್ಲಿ ಸಿನಿಮಾ ಮೂಡಿಬರಲಿದೆ.
ಇದನ್ನೂ ಓದಿ:ಬಾಲಿವುಡ್ಗೆ ಬೇತಾಳನಂತೆ ಬೆನ್ನು ಬಿದ್ದ ಕೊರೊನಾ.. ನಟಿ ಕತ್ರಿನಾ ಕೈಫ್ಗೂ ಸೋಂಕು!
'ವಿಕಾಸ್ ಈ ಚಿತ್ರದ ಕಥೆಯನ್ನು ಹೇಳಿದಾಗ ನನಗೆ ತುಂಬಾ ಸಂತೋಷವಾಯಿತು. ರೋಮಾಂಚನಕಾರಿ ಮತ್ತು ಅದ್ಭುತ ಸ್ಕ್ರಿಪ್ಟ್ ಇರುವಾಗ ನಾನು ಯಾವುದರ ಬಗ್ಗೆಯೂ ಯೋಚನೆ ಮಾಡುವುದಿಲ್ಲ' ಎಂದು ನೀನಾ ಗುಪ್ತಾ ಹೇಳಿದ್ದಾರೆ.
ನನ್ನ ಪಾತ್ರವನ್ನು ತುಂಬಾ ಸುಂದರವಾಗಿ ಕಟ್ಟಿಕೊಡಲಾಗಿದೆ. ಅಮಿತಾಬ್ ಬಚ್ಚನ್ ಅವರೊಂದಿಗೆ ಸ್ಕ್ರೀನ್ ಶೇರ್ ಮಾಡಿಕೊಳ್ಳಲು ನಾನು ತುಂಬಾ ಉತ್ಸುಕಳಾಗಿದ್ದೇನೆ. ಅವರ ಜೊತೆಗೆ ಅಭಿನಯಿಸುವುದೂ ನನಗೆ ಒಂದು ಕನಸಾಗಿತ್ತು ಎಂದು ನೀನಾ ಗುಪ್ತಾ ಸಂತೋಷ ವ್ಯಕ್ತಪಡಿಸಿದ್ದಾರೆ.
ಏಕ್ತಾ ಕಪೂರ್ ಈ ಸಿನಿಮಾವನ್ನು ನಿರ್ದೇಶನ ಮಾಡುತ್ತಿದ್ದು, ಮನರಂಜನೆ ಮತ್ತು ಭಾವನೆಗಳನ್ನು ಒಟ್ಟು ಮಾಡಿದ ವಿಶೇಷ ಸಿನಿಮಾ ಇದಾಗಲಿದೆ ಎಂದು ಭರವಸೆ ವ್ಯಕ್ತಪಡಿಸಿದ್ದಾರೆ.