ಟಿ.ಎಸ್.ನಾಗಾಭರಣ ನಿರ್ದೇಶನದ ನೀಲಾ ಚಿತ್ರದ ಮೂಲಕ ಕನ್ನಡ ಚಿತ್ರರಂಗಕ್ಕೆ ನಟಿ ಗಾಯತ್ರಿ ಜಯರಾಮನ್ ಎಂಟ್ರಿ ನೀಡಿದ್ದರು. ಈ ಚಿತ್ರದ ಬಳಿಕ ಸ್ವಾಮಿ ಸಿನಿಮಾದಲ್ಲಿ ದರ್ಶನ್ ಜೊತೆ ರೋಮ್ಯಾನ್ಸ್ ಮಾಡಿದ್ದ ಗಾಯತ್ರಿ, ಇದೀಗ ಮತ್ತೆ ಚಿತ್ರರಂಗಕ್ಕೆ ರೀ ಎಂಟ್ರಿ ಕೊಟ್ಟಿದ್ದಾರೆ.
ಲೂಸ್ ಮಾದ ಯೋಗಿ ಅಭಿನಯದ ಲಂಕೆ ಚಿತ್ರದಲ್ಲಿ ಬೋಲ್ಡ್ ಆಗಿ ಆ್ಯಕ್ಟ್ ಮಾಡಿದ್ದಾರೆ. ತಮ್ಮ ಸಿನಿ ಜರ್ನಿಯ ಬಗ್ಗೆ ಗಾಯತ್ರಿ ಜಯರಾಮನ್ ಅವರು 'ಈಟಿವಿ ಭಾರತ'ದೊಂದಿಗೆ ಕೆಲವು ವಿಚಾರಗಳನ್ನು ಹಂಚಿಕೊಂಡಿದ್ದಾರೆ.
ಅಭಿನಯದ ಬಗ್ಗೆ ತಿಳಿಯದೆ ನಟಿ ಗಾಯತ್ರಿ ಜಯರಾಮನ್ ಸಿನಿಮಾರಂಗಕ್ಕೆ ಕಾಲಿಟ್ಟರು. ಇವರು ಕನ್ನಡ, ತಮಿಳು, ತೆಲುಗು, ಮಲಯಾಳಂ, ಹಿಂದಿ ಸಿನಿಮಾಗಳಲ್ಲಿ ನಟಿಸಿದ್ದಾರೆ. ಇವರಿಗೆ ತಮಿಳಿನ ಖ್ಯಾತ ನಿರ್ದೇಶಕ ಕೆ.ಬಾಲಚಂದರ್ ಮೊದಲ ಬಾರಿಗೆ ಸೀರಿಸ್ನಲ್ಲಿ ನಟಿಸಲು ಆಫರ್ ನೀಡಿದ್ರಂತೆ. ಆದರೆ ನನಗೆ ನಟನೆ ಬರುವುದಿಲ್ಲ ಎಂದು ರಿಜೆಕ್ಟ್ ಮಾಡಿದ್ದರು. ಆಗ ನನ್ನ ತಾಯಿ ಬೈದು ನಟಿಸುವಂತೆ ಹೇಳಿದ್ದರು. ಹೀಗೆ ಗಾಯತ್ರಿಯವರು ಚಿತ್ರರಂಗವನ್ನು ಪ್ರವೇಶಿಸಿದರು.
ಬಳಿಕ ನಿರ್ದೇಶಕ ಬಾಲಚಂದರ್ ಅವರು ಸ್ನೇಹಿತರಾಗಿದ್ದ ಟಿ.ಎಸ್. ನಾಗಾಭರಣ ಅವರು ಗಾಯತ್ರಿ ಅವರನ್ನು ನೋಡಿ ನೀಲಾ ಸಿನಿಮಾಗೆ ಆಯ್ಕೆ ಮಾಡಿದ್ದರು. ಅಭಿನಯ ಹೇಳಿ ಕೊಟ್ಟು ಸಿನಿಮಾದಲ್ಲಿ ನಟಿಸಲು ಪ್ರೇರೇಪಿಸಿದರಂತೆ.
ನೀಲಾ ಸಿನಿಮಾ ರಿಲೀಸ್ ಆಗಿ 21 ವರ್ಷವಾದರೂ ಇವತ್ತಿಗೂ ಜನ ನನ್ನನ್ನು ಗುರುತಿಸುತ್ತಾರೆ. ಇನ್ನು ನಟಿ ಖೂಷ್ಬೂ, ಮೀನಾ ಅವರ ರೀತಿ 20 ವರ್ಷಗಳ ಕಾಲ ಹೀರೋಯಿನ್ ಆಗಿ ನಟಿಸಲು ಆಗೋಲ್ಲ. ಇವತ್ತು ಒಂದು ಸಿನಿಮಾ ಆದಮೇಲೆ ಆ ನಟಿಯ ಬಗ್ಗೆ ಸುದ್ದಿನೇ ಇರೋಲ್ಲ. ಇವತ್ತು ನಟಿಯಾಗಿದ್ದೇನೆ ಅಂದರೆ ಇದರ ಸಂಪೂರ್ಣ ಕ್ರೆಡಿಟ್ ನಾಗಾಭರಣ ಸರ್ಗೆ ಸಲ್ಲುತ್ತದೆ. ನೀಲಾ ಸಿನಿಮಾದಲ್ಲಿ ಅನಂತ್ ನಾಗ್ ಸಾರ್ ಸ್ಕ್ರೀನ್ ಹಂಚಿಕೊಂಡಿದ್ದು ಮರೆಯೋದಿಕ್ಕೆ ಆಗೋಲ್ಲ. ನಾನು ಅಭಿನಯಿಸಿರುವ 21 ಸಿನಿಮಾಗಳಲ್ಲಿ ನೀಲಾ ದಿ ಬೆಸ್ಟ್ ಸಿನಿಮಾ ಅಂತಾರೆ ನಟಿ ಗಾಯತ್ರಿ.