ಕರ್ನಾಟಕ

karnataka

ETV Bharat / sitara

ತಮಿಳು ನಟಿ ನಜರಿಯಾ ಇನ್​ಸ್ಟಾಗ್ರಾಮ್​ ಹ್ಯಾಕ್​​​! - Nazriya Nazim news

ನಜರಿಯಾ ಇನ್​ಸ್ಟಾ ಖಾತೆ ಕಳೆದ ಸೋಮವಾರ(18 ರಂದು) ಹ್ಯಾಕ್​ ಆಗಿದೆ. ತಮಿಳು ನಟಿಯ ಖಾತೆಯಿಂದ ಯಾರೋ ವಿದೇಶಿಗರು ಲೈವ್ ಬಂದಿದ್ದು, ಆ ಸಮಯದಲ್ಲಿ ರಸ್ತೆಯಲ್ಲಿ ಓಡಾಡಿರುವ ದೃಶ್ಯಗಳು ಕಂಡುಬಂದಿವೆ.

ತಮಿಳು ನಟಿ ನಜರಿಯಾ
ತಮಿಳು ನಟಿ ನಜರಿಯಾತಮಿಳು ನಟಿ ನಜರಿಯಾ

By

Published : Jan 19, 2021, 4:28 PM IST

ತಮಿಳಿನ ಖ್ಯಾತ ನಟಿ ನಜರಿಯಾ ನಜೀಮ್ ಇನ್​ಸ್ಟಾಗ್ರಾಮ್​ ಖಾತೆ ಹ್ಯಾಕ್​ ಆಗಿದೆ. ಈ ಬಗ್ಗೆ ಸ್ವತಃ ನಟಿಯೇ ಮಾಹಿತಿ ನೀಡಿದ್ದು, 'ನನ್ನ ಇನ್‌ಸ್ಟಾಗ್ರಾಂ ಖಾತೆಯನ್ನು ಕೆಲ ಜೋಕರ್‌ಗಳು ಹ್ಯಾಕ್ ಮಾಡಿದ್ದಾರೆ. ನನ್ನ ಖಾತೆಯಿಂದ ಯಾರಿಗಾದರೂ ಏನಾದರೂ ಸಂದೇಶಗಳು ಬಂದರೆ ಅದನ್ನು ನಿರ್ಲಕ್ಷಿಸಿ' ಎಂದು ನಾಜರಿಯಾ ಅಭಿಮಾನಿಗಳಲ್ಲಿ ಕೇಳಿಕೊಂಡಿದ್ದಾರೆ.

ತಮಿಳು ನಟಿ ನಜರಿಯಾ ಸ್ಟೋರಿ

ನಜರಿಯಾ ಇನ್​ಸ್ಟಾ ಖಾತೆ ಕಳೆದ ಸೋಮವಾರ(18 ರಂದು) ಹ್ಯಾಕ್​ ಆಗಿದೆ. ನಜರಿಯಾ ಖಾತೆಯಿಂದ ಯಾರೋ ವಿದೇಶಿಗರು ಲೈವ್ ಬಂದಿದ್ದು, ಆ ಸಮಯದಲ್ಲಿ ರಸ್ತೆಯಲ್ಲಿ ಓಡಾಡಿರುವ ದೃಶ್ಯಗಳು ವೈರಲ್​ ಆಗಿವೆ.

ತಮಿಳು ನಟಿ ನಜರಿಯಾ

ಇತ್ತೀಚೆಗೆ ಸೆಲೆಬ್ರಿಟಿಗಳ ಆಕೌಂಟ್​​ಗಳು ಹ್ಯಾಕ್​​ ಆಗುವ ಪ್ರಕರಣಗಳು ಹೆಚ್ಚಿದ್ದು, ನಟಿ ಟಬು ಇನ್‌ಸ್ಟಾಗ್ರಾಂ ಕೂಡ ಖಾತೆ ಹ್ಯಾಕ್ ಆಗಿತ್ತು. ಇದಕ್ಕೂ ಮುಂಚೆ ನಟಿ, ರಾಜಕಾರಣಿ ಊರ್ಮಿಳಾ ಮಾತೋಂಡ್ಕರ್ ಇನ್‌ಸ್ಟಾಗ್ರಾಂ ಖಾತೆ ಕೂಡ ಹ್ಯಾಕ್ ಆಗಿತ್ತು. ಇಷ್ಟೇ ಅಲ್ಲದೆ ಱಪ್​ ಸಿಂಗರ್​ ಚಂದನ್ ಶೆಟ್ಟಿ ಖಾತೆಯೂ ಹ್ಯಾಕ್ ಆಗಿತ್ತು.

ತಮಿಳು ನಟಿ ನಜರಿಯಾ

ABOUT THE AUTHOR

...view details