ದರ್ಶನ್ ಅಭಿನಯಿಸುತ್ತಿರುವ ರಾಜ ವೀರ ಮದಕರಿ ಸಿನಿಮಾ ದಿನದಿಂದ ದಿನಕ್ಕೆ ಕುತೂಹಲ ಹೆಚ್ಚಿಸುತ್ತಿದೆ. ಈಗಾಗಲೇ ಸಿನಿಮಾದ ಶೂಟಿಂಗ್ ಪ್ರಾರಂಭವಾಗಿದ್ದು, ಮೊದಲ ಹಂತದ ಚಿತ್ರೀಕರಣವನ್ನು ಹೈದರಾಬಾದ್ನಲ್ಲಿ ಮಾಡಲಾಗಿದೆ.
'ರಾಜ ವೀರ ಮದಕರಿ'ಗೆ ಜೋಡಿಯಾಗ್ತಾರಾ 'ಸೂಪರ್' ನಟಿ - ರಾಜವೀರ ಮದಕರಿ
ರಾಜ ವೀರ ಮದಕರಿ ಚಿತ್ರದ ನಾಯಕನಿಗೆ ನಾಯಕಿಯಾಗಿ ಬಹುಭಾಷಾ ನಟಿ ನಯನತಾರಾ ನಟಿಸಲಿದ್ದಾರೆ ಎಂಬ ಸುದ್ದಿ ಗಾಂಧಿ ನಗರದಲ್ಲಿ ಹರಿದಾಡುತ್ತಿದೆ. ಆದ್ರೆ ಈ ಬಗ್ಗೆ ನಿರ್ದೇಶಕ ರಾಜೇಂದ್ರಸಿಂಗ್ ಅವರಾಗಲಿ, ನಿರ್ಮಾಪಕರಾಗಲಿ ಗುಟ್ಟು ಬಿಟ್ಟುಕೊಟ್ಟಿಲ್ಲ.
'ರಾಜವೀರಮದಕರಿ'ಗೆ ಜೋಡಿಯಾಗ್ತಾರಾ 'ಸೂಪರ್'ನಟಿ
ಆದ್ರೆ ಚಿತ್ರದ ನಾಯಕಿ ಯಾರೆಂಬುದರ ಬಗ್ಗೆ ಇನ್ನೂ ಖಚಿತ ಮಾಹಿತಿ ಇಲ್ಲ. ಇನ್ನು ರಾಜ ವೀರ ಮದಕರಿ ನಾಯಕನಿಗೆ ನಾಯಕಿಯಾಗಿ ಬಹುಭಾಷಾ ನಟಿ ನಯನತಾರಾ ನಟಿಸಲಿದ್ದಾರೆ ಎಂಬ ಸುದ್ದಿ ಗಾಂಧಿ ನಗರದಲ್ಲಿ ಹರಿದಾಡುತ್ತಿದೆ. ಆದ್ರೆ ಈ ಬಗ್ಗೆ ನಿರ್ದೇಶಕ ರಾಜೇಂದ್ರಸಿಂಗ್ ಅವರಾಗಲಿ, ನಿರ್ಮಾಪಕರಾಗಲಿ ಗುಟ್ಟು ಬಿಟ್ಟುಕೊಟ್ಟಿಲ್ಲ.
ಈ ಹಿಂದೆ ಉಪೇಂದ್ರ ಅಭಿನಯದ ಸೂಪರ್ ಚಿತ್ರದಲ್ಲಿ ನಯನ ತಾರ ಅಭಿನಯಿಸಿದ್ರು. ಇದೀಗ ಮತ್ತೆ ಸ್ಯಾಂಡಲ್ವುಡ್ ಕಡೆ ಪಾದ ಬೆಳೆಸುತ್ತಾರಾ ಎಂಬುದು ಕುತೂಹಲ ಮೂಡಿಸಿದೆ.