ಕರ್ನಾಟಕ

karnataka

ETV Bharat / sitara

ದೊಡ್ಮನೆಗೆ ಹೋಗ್ತರಾ ಕಾಮಿಡಿ ಕಿಲಾಡಿಗಳು ಖ್ಯಾತಿಯ ನಯನಾ? - ಬಿಗ್​ ಬಾಸ್​​ನಲ್ಲಿ ನಯನಾ

ಕಾಮಿಡಿ ಕಿಲಾಡಿಗಳು ಚಾಂಪಿಯನ್​ಶಿಪ್ ಸೀಸನ್ 2ರಲ್ಲಿ ಸಕ್ರಿಯರಾಗಿರುವ ನಯನಾ ಬಿಗ್ ಬಾಸ್ ಮನೆಯನ್ನು ಪ್ರವೇಶಿಸಲಿದ್ದಾರೆ ಎಂಬ ಸುದ್ದಿ ಹರಿದಾಡುತ್ತಿದೆ.

ನಯನಾ
ನಯನಾ

By

Published : Feb 11, 2021, 6:51 PM IST

ಕಾಮಿಡಿ ಕಿಲಾಡಿಗಳು ರಿಯಾಲಿಟಿ ಶೋ ಮೂಲಕ ಕನ್ನಡ ಕಿರುತೆರೆಗೆ ಕಾಲಿಟ್ಟ ನಯನಾ ಕನ್ನಡಿಗರಿಗೇನು ಹೊಸಬರಲ್ಲ. ಕಾಮಿಡಿ ಕಿಲಾಡಿಗಳು ಸೀಸನ್ 1ರ ರನ್ನರ್ ಅಪ್ ಆಗಿರುವ ನಯನಾ ಮುಂದೆ ಕಾಮಿಡಿ ಕಿಲಾಡಿಗಳು ಚಾಂಪಿಯನ್​ಶಿಪ್​​ನಲ್ಲಿ ಭಾಗವಹಿಸಿದ್ದರು. ಇದೀಗ ಕಾಮಿಡಿ ಕಿಲಾಡಿಗಳು ಚಾಂಪಿಯನ್​​ಶಿಪ್ ಸೀಸನ್ 2ರಲ್ಲಿ ಸಕ್ರಿಯರಾಗಿರುವ ನಯನಾ ಬಿಗ್ ಬಾಸ್ ಮನೆ ಪ್ರವೇಶಿಸಲಿದ್ದಾರೆ ಎಂಬ ಸುದ್ದಿ ಹರಿದಾಡುತ್ತಿದೆ.

ನಯನಾ

ಕಾಮಿಡಿ ಕಿಲಾಡಿಗಳು ಶೋನಲ್ಲಿ ರನ್ನರ್ ಅಪ್ ಸ್ಥಾನ ಪಡೆದುಕೊಂಡ ನಯನಾ ನಂತರ ಕನ್ನಡ ಸಿನಿಮಾಗಳಲ್ಲಿ ಆಫರ್​​ಗಳನ್ನು ಪಡೆದರು. ಸೀತಾರಾಮ ಕಲ್ಯಾಣ, ಅನಂತು ವರ್ಸಸ್ ನುಸ್ರತ್ ಸೇರಿದಂತೆ ಹಲವು ಸಿನಿಮಾಗಳಲ್ಲಿ ನಟಿಸಿರುವ ನಯನಾ, ತನ್ನ ಹಾಸ್ಯ ಕೌಶಲ್ಯದಿಂದ ವೀಕ್ಷಕರ ಮನ ಗೆದ್ದಿದ್ದಾರೆ.

ನಯನಾ

ಸ್ಟಾರ್ ಸುವರ್ಣ ವಾಹಿನಿಯಲ್ಲಿ ಪ್ರಸಾರವಾಗುತ್ತಿರುವ ಭಕ್ತಿ ಪ್ರಧಾನ ಧಾರಾವಾಹಿ ಯಡಿಯೂರು ಶ್ರೀ ಸಿದ್ದಲಿಂಗೇಶ್ವರ ಧಾರಾವಾಹಿಯಲ್ಲಿ ನಟಿಸುವ ಮೂಲಕ ಕಿರುತೆರೆಯಲ್ಲಿ ಮೋಡಿ ಮಾಡುತ್ತಿರುವ ನಯನಾ, ಕಾಮಿಡಿ ಕಿಲಾಡಿಗಳು ಚಾಂಪಿಯನ್​​ಶಿಪ್ ಶೋನಲ್ಲಿ ಮೆಂಟರ್ ಆಗಿದ್ದಾರೆ. ಸೋಶಿಯಲ್ ಮೀಡಿಯಾದಲ್ಲಿ ಆ್ಯಕ್ಟೀವ್​ ಆಗಿರುವ ನಯನಾ, ತಮ್ಮ ಕುರಿತು ಎದ್ದಿರುವ ಗಾಸಿಪ್​​ಗಳಿಗೆ ಉತ್ತರಿಸಿಲ್ಲ. ಇನ್ನು ಇದರ ಹೊರತಾಗಿ ಸುನಿಲ್ ರಾವ್, ಗೀತಾಭಾರತಿ ಭಟ್, ಅನುಷಾ ರಂಗನಾಥ್, ರವಿಶಂಕರ್, ಸುಕೃತಾ ನಾಗ್ ಮುಂತಾದವರ ಹೆಸರು ಕೇಳಿ ಬಂದಿದೆ.

ನಯನಾ

ಈಗಾಗಲೇ ಹೊಸ ಸೀಸನ್​​ನ ಪ್ರೋಮೋ ರಿಲೀಸ್ ಆಗಿದ್ದು, ತನ್ನ ಫಸ್ಟ್ ಪ್ರೋಮೋ ಮೂಲಕ ಬಿಗ್ ಬಾಸ್ ಕುತೂಹಲ ಕೆರಳಿಸಿದೆ. ಇನ್ನೋವೇಟಿವ್ ಫಿಲ್ಮ್ ಸಿಟಿಯಲ್ಲಿ ಈಗಾಗಲೇ ತಯಾರಿ ಕಾರ್ಯಗಳು ನಡೆಯುತ್ತಿವೆ.

ನಯನಾ

ABOUT THE AUTHOR

...view details