ಸಿಲಿಕಾನ್ ಸಿಟಿಯಲ್ಲಿ ಚಿತ್ರಮಂದಿರಗಳು ಒಂದೊಂದಾಗಿ ಕಾಣೆಯಾಗುತ್ತಿವೆ. ಮಲ್ಟಿಪ್ಲೆಕ್ಸ್ ಅಬ್ಬರಕ್ಕೆ ತತ್ತರಿಸಿ ಹೋಗಿರುವ ಕೆಜಿ ರಸ್ತೆಯ ಪ್ರಮುಖ ಚಿತ್ರಮಂದಿರಗಳು ಈಗಾಗಲೇ ಇತಿಹಾಸದ ಪುಟ ಸೇರಿವೆ. ಆದರೆ ಕೆಲವು ಚಿತ್ರಮಂದಿರಗಳು ಮಾತ್ರ ತನ್ನ ಅಸ್ತಿತ್ವವನ್ನು ಉಳಿಸಿಕೊಂಡಿದ್ದು ಹೈಟೆಕ್ ಟಚ್ ಪಡೆದುಕೊಂಡಿವೆ.
ಸದ್ಯ ಎಂ.ಜಿ ರೋಡ್ನ ಶಂಕರನಾಗ್ ಚಿತ್ರಮಂದಿರ ಹೈಟೆಕ್ ತಂತ್ರಜ್ಞಾನದೊಂದಿಗೆ ಪುನರ್ ನವೀಕರಣಗೊಂಡಿದೆ. ಇದೆ ಸಾಲಿಗೆ ಕನ್ನಡದ ಅತಿ ಹೆಚ್ಚು ಚಿತ್ರಗಳನ್ನ ಪ್ರದರ್ಶನ ಮಾಡುವ ರಾಜಾಜಿನಗರದ ನವರಂಗ ಚಿತ್ರಮಂದಿರ ಕೂಡಾ ಸೇರಿದ್ದು ಹೈಟೆಕ್ ಟಚ್ನೊಂದಿಗೆ ಮರುಜೀವ ಪಡೆಯುತ್ತಿದೆ.
ಅಧುನಿಕ್ ರಂಗಿನೊಂದಿಗೆ ಮತ್ತೇ ರಂಜಿಸಲು ಸಿದ್ದವಾಯ್ತು ನವರಂಗ್ ಚಿತ್ರಮಂದಿರ ಸದ್ಯಕ್ಕೆ ನವರಂಗ್ ಚಿತ್ರಮಂದಿರದ ರೇನೋವೇಶನ್ ಕೆಲಸ ಚಾಲ್ತಿಯಲ್ಲಿದ್ದು. 4ಕೆ ಸ್ಕ್ರೀನ್, ಉತ್ತಮ ಸೌಂಡ್ ಸಿಸ್ಟಮ್ಗಳೊಂದಿಗೆ ಥೀಯೆಟರ್ಗೆ ಅಧುನಿಕ ಸ್ಪರ್ಶ ನೀಡಲಾಗಿದೆ. ಇದೆ ಸಪ್ಟೆಂಬರ್ 12 ರಿಂದ ಚಿತ್ರ ಪ್ರದರ್ಶನ ಮಾಡಲು ಸಿದ್ಧತೆ ನಡೆಸಲಾಗಿದೆ ಎಂದು ಮಾಲೀಕರಾದ ಕೆಸಿಎನ್ ಮೋಹನ್ ತಿಳಿಸಿದ್ದಾರೆ.
1963ರಲ್ಲಿ ಎಸ್. ನಿಜಲಿಂಗಪ್ಪ ನವರಂಗ್ ಚಿತ್ರಮಂದಿರವನ್ನು ಉದ್ಘಾಟಿಸಿದರು. ಡಾ. ರಾಜಕುಮಾರ್ ಅಭಿನಯದ ವೀರ ಕೇಸರಿ ಚಿತ್ರದ ಮೂಲಕ ಸಿನಿ ಪ್ರಿಯರನ್ನು ರಂಜಿಸುತ್ತಾ ಬಂದಿದ್ದ ನವರಂಗ್ ಈಗ ಮತ್ತೆ ಹೈಟೆಕ್ ತಂತ್ರಜ್ಞಾನದೊಂದಿಗೆ ಕನ್ನಡ ಸಿನಿ ರಸಿಕರನ್ನು ರಂಜಿಸಲು ಮತ್ತೆ ರೆಡಿಯಾಗ್ತಿದೆ. ವಿಶೇಷವೆಂದರೆ ನವರಂಗ್ ಚಿತ್ರಮಂದಿರದಲ್ಲಿ ಹೆಚ್ಚಾಗಿ ಕನ್ನಡಚಿತ್ರಗಳು ಪ್ರದರ್ಶನವಾಗುತ್ತವೆ. ಜೋಗಿ, ಮುಂಗಾರು ಮಳೆ, ನವರಂಗ್ ಚಿತ್ರಮಂದಿರದಲ್ಲಿ ಭರ್ಜರಿ 25 ವಾರಗಳ ಪ್ರದರ್ಶನ ಕಂಡಿದ್ದವು.