ಕರ್ನಾಟಕ

karnataka

ETV Bharat / sitara

ಡಾ. ವಿಷ್ಣುವರ್ಧನ್​​​​​​​ ಬರ್ತ್​ಡೇಗಾಗಿ ಅಭಿಮಾನಿಗಳಿಗೆ ನವೀನ್ ಕೃಷ್ಣ ನೀಡಿದ ಚಾಲೆಂಜ್ ಇದು - ಕದಂಬ ಚಿತ್ರದ ನಟ ನವೀನ್ ಕೃಷ್ಣ

ಇನ್ನು ಮೂರು ದಿನಗಳು ಕಳೆದರೆ ಅಭಿನಯ ಭಾರ್ಗವ ಡಾ. ವಿಷ್ಣುವರ್ಧನ್ ಅವರ 70 ನೇವರ್ಷದ ಹುಟ್ಟುಹಬ್ಬ. ಈ ವಿಶೇಷ ದಿನದ ಅಂಗವಾಗಿ ನಟ, ನಿರ್ದೇಶಕ, ಬರಹಗಾರ ನವೀನ್ ಕೃಷ್ಣ ಸಾಹಸಸಿಂಹನ ಬಗ್ಗೆ 10 ಸಾಲುಗಳನ್ನು ಬರೆಯುವಂತೆ ಅಭಿಮಾನಿಗಳಿಗೆ ಚಾಲೆಂಜ್ ಮಾಡಿದ್ದಾರೆ.

Naveen Krishna challenge
ನವೀನ್ ಕೃಷ್ಣ ನೀಡಿದ ಚಾಲೆಂಜ್

By

Published : Sep 15, 2020, 3:04 PM IST

ಸೆಪ್ಟೆಂಬರ್ 18 ರಂದು ಸಾಹಸಸಿಂಹ ಡಾ. ವಿಷ್ಣುವರ್ಧನ್ ಅವರ 70ನೇ ವರ್ಷದ ಹುಟ್ಟುಹಬ್ಬ. ಈ ಬಾರಿ ವಿಷ್ಣು ಅಭಿಮಾನಿಗಳಿಗೆ ಡಬಲ್ ಖುಷಿ. ಒಂದು ಮೆಚ್ಚಿನ ನಟನ ಹುಟ್ಟುಹಬ್ಬವಾದರೆ, ಮತ್ತೊಂದು 11 ವರ್ಷಗಳ ಬಳಿಕ ವಿಷ್ಣು ಸ್ಮಾರಕ ನಿರ್ಮಾಣ ಕಾರ್ಯಕ್ಕೆ ಚಾಲನೆ ದೊರೆತಿರುವುದು.

ಪ್ರತಿ ವರ್ಷದಂತೆ ಈ ಬಾರಿ ಕೂಡಾ ಡಾ. ವಿಷ್ಣುವರ್ಧನ್ ಹುಟ್ಟುಹಬ್ಬಕ್ಕೆ ಅಭಿಮಾನಿಗಳು ವಿವಿಧ ರೀತಿಯ ಕಾರ್ಯಕ್ರಮಗಳನ್ನು ಏರ್ಪಡಿಸುತ್ತಿದ್ದಾರೆ. ಈ ನಡುವೆ ಡಾ. ವಿಷ್ಣು ಜೊತೆ 'ಕದಂಬ' ಚಿತ್ರದಲ್ಲಿ ಮಗನಾಗಿ ಅಭಿನಯಿಸಿದ್ದ ನವೀನ್ ಕೃಷ್ಣ ಅಭಿಮಾನಿಗಳಿಗೆ ಒಂದು ಚಾಲೆಂಜ್ ನೀಡಿದ್ದಾರೆ. ತಮ್ಮ ಫೇಸ್​ಬುಕ್​​ನಲ್ಲಿ ನವೀನ್ ಕೃಷ್ಣ ಇದರ ಬಗ್ಗೆ ಬರೆದುಕೊಂಡಿದ್ದಾರೆ.

"ನಾ ಕಂಡಂತೆ ಡಾ. ವಿಷ್ಣುವರ್ಧನ್​​ ಅಥವಾ ನನ್ನ ಪ್ರಕಾರ ಡಾ. ವಿಷ್ಣುವರ್ಧನ್​​​​ ಅಂದ್ರೆ ಏನು..? ಎಂಬುದರ ಬಗ್ಗೆ ಒಂದು ಹತ್ತು ಸಾಲುಗಳನ್ನು ಬರೆದು ನಿಮ್ಮ ಫೇಸ್​​ಬುಕ್​​​​​​​, ಟ್ವಿಟ್ಟರ್​​​​​​​​​​​​​​​​​​​​ನಲ್ಲಿ ಪೋಸ್ಟ್ ಮಾಡಬೇಕು. ನವೀನ್ ಕೃಷ್ಣ ಮೊದಲು ಆ ಕೆಲಸ ಮಾಡಿದ್ದಾರೆ. ನನ್ನ ಪ್ರಕಾರ ಡಾ. ವಿಷ್ಣುವರ್ಧನ್​​​​ ಅಂದ್ರೆ....ದಿನ ಆರಂಭವಾಗುತ್ತಿದ್ದು ಅವರ 'ಸುಪ್ರಭಾತ' ದಿಂದ ದಿನದ ಅಂತ್ಯವಾಗುತ್ತಿದ್ದು ಅವರ 'ಲಾಲಿ' ಯಿಂದ. ಇಂದಿಗೂ ದಿ ಬೆಸ್ಟ್​​ ಎಂದರೆ ನೀರು ತೊಟ್ಟಿಕ್ಕುವ ಮುತ್ತಿನ ಹಾರ. ಪಾರಿವಾಳಗಳ ನಡುವೆ ನಿಷ್ಕರ್ಷದ ಪ್ರಹಾರ ನನ್ನ ತಂದೆಯೇ ನನ್ನ ಮೊದಲ ಹೀರೋ, 'ಕದಂಬ' ದಲ್ಲಿ ತಂದೆಯಾದರೂ ಎವರ್​​​​​​​​​​ಗ್ರೀನ್​ ಹೀರೋ.

ನಟನೆಯಲ್ಲಿ ಬಲಹೀನನಾದಾಗ ಬಲ ತುಂಬಿದರು. ಒಮ್ಮೊಮ್ಮೆ ಮಾತನಾಡಲು ಹೋದರೆ ಮೌನಿಯಾಗುತ್ತಿದ್ದರು. ನನ್ನ ಲವ್​​ ಸ್ಟೋರಿಗೆ ಮದುವೆಯ ಶ್ರೀಕಾರ ಹಾಕಿದರು. 'ಕದಂಬ' ಚಿತ್ರದ ಸೋಲು ನನ್ನ ಜೀವನದ ಸೋಲು ಎಂದು ಎದೆಗುಂದಿದಾಗ ಮನೆಗೆ ಕರೆಸಿ ನಾಜೂಕಾಗಿ ಬೈದು ಮುಂದಿನ ಜೀವನದ ದಾರಿದೀಪವಾದರು. ಅವರ ನೆರಳೇ ನಮಗೆ ಶ್ರೀರಕ್ಷೆ. ನಾವು ನಟಿಸುತ್ತಿರುವುದು ಅವರು ಜೀವಿಸಿದ ಪಾತ್ರಗಳ ಭಿಕ್ಷೆ" ಎಂದು ನವೀನ್ ಡಾ. ವಿಷ್ಣುವರ್ಧನ್ ಅವರ ಬಗ್ಗೆ ಬಹಳ ಭಾವಪೂರ್ಣವಾಗಿ ಬರೆದುಕೊಂಡಿದ್ದಾರೆ.

ABOUT THE AUTHOR

...view details