ಸದಾ ಒಂದಲ್ಲಾ ಒಂದು ಕೆಲಸದಲ್ಲಿ ನಿರತರಾಗಿರುವ ನಟ, ಬರಹಗಾರ, ಹಾಡುಗಾರ ನವೀನ್ ಕೃಷ್ಣ ಕೊರೊನಾ ಸಮಯದಲ್ಲಿ ತಮ್ಮ ಯೂಟ್ಯೂಬ್ ಹಾಗೂ ಫೇಸ್ಬುಕ್ ಮೂಲಕ ಅಭಿಮಾನಿಗಳನ್ನು ರಂಜಿಸಿದ್ದರು. ಜೊತೆಗೆ ತಮ್ಮ ಪುತ್ರರಾದ ಹರ್ಷಿತ್ ಹಾಗೂ ಹರುಷ್ ಅವರನ್ನು ಚಿತ್ರರಂಗಕ್ಕೆ ಪರಿಚಯಿಸುವ ಪ್ರಯತ್ನ ಕೂಡಾ ಮಾಡುತ್ತಿದ್ದಾರೆ.
'ನಾನಾ ನೀನಾ' ಅಂತಿದ್ದಾರೆ ನವೀನ್ ಕೃಷ್ಣ...ಅಕಪೆಲ್ಲ ಶೈಲಿಯ ಹಾಡು ನಾಳೆ ರಿಲೀಸ್ - Naveen Krishna Acapella style song
ಹಿರಿಯ ನಟ ಶ್ರೀನಿವಾಸ ಮೂರ್ತಿ ಪುತ್ರ ನವೀನ್ ಕೃಷ್ಣ ಆರಂಭಿಸಿರುವ ಹೊಸ ಯೂಟ್ಯೂಬ್ ಚಾನೆಲ್ನಲ್ಲಿ ಅಕಪೆಲ್ಲ ಶೈಲಿಯಲ್ಲಿ ಅವರೇ ಹಾಡಿರುವ 'ನಾನಾ ನೀನಾ' ಎಂಬ ಹಾಡು ನಾಳೆ ಬಿಡುಗಡೆಯಾಗುತ್ತಿದೆ.
ದಯಾಳ್ ಪದ್ಮನಾಭನ್ ನಿರ್ದೇಶಿಸುತ್ತಿರುವ 'ಆ ಕರಾಳ ರಾತ್ರಿ' ಚಿತ್ರದ ತೆಲುಗು ರೀಮೇಕ್ನಲ್ಲಿ ನವೀನ್ ಕೃಷ್ಣ ಸಹ ನಿರ್ದೇಶಕ ಹಾಗೂ ನಟರಾಗಿ ಕೂಡಾ ಕೆಲಸ ಮಾಡಲಿದ್ದಾರೆ. ಅದಕ್ಕೂ ಮುನ್ನ ಅವರು ತಮ್ಮದೇ ಆದ ಯೂಟ್ಯೂಬ್ ಚಾನೆಲ್ ಒಂದನ್ನು ಆರಂಭಿಸಿದ್ದಾರೆ. ಈ ಯೂಟ್ಯೂಬ್ ಚಾನೆಲ್ ಮೂಲಕ ವಿವಿಧ ರೀತಿಯ ಕಾರ್ಯಕ್ರಮಗಳನ್ನು ನವೀನ್ ಕೃಷ್ಣ ನೀಡಲಿದ್ದಾರೆ.
ಏನೇ ಮಾಡು ಕೊರೊನಾ, ನಡೆಯಬೇಕು ಜೀವನ...ನೋಡೇ ಬಿಡೋಣ...ಇನ್ನು ನಾನಾ ಇಲ್ಲ ನೀನಾ....ಎಂಬ ಹಾಡನ್ನು ತಮ್ಮ ಯೂಟ್ಯೂಬ್ ಚಾನೆಲ್ ಮೂಲಕ ನಾಳೆ ಬಿಡುಗಡೆ ಮಾಡಲಿದ್ದಾರೆ. ಈ ಹಾಡಿಗೆ ಸಾಹಿತ್ಯ ಬರೆದಿರುವವರು ಸಾಯಿ ಸುಕನ್ಯ. ಆಕಪೆಲ್ಲ ಶೈಲಿಯಲ್ಲಿ ಈ ಹಾಡು ಮೂಡಿ ಬರಲಿದೆ. ಅಂದರೆ ವಾದ್ಯಗಳ ಶಬ್ಧವನ್ನು ಕೂಡಾ ನವೀನ್ ಕೃಷ್ಣ ತಮ್ಮ ಕಂಠದಿಂದ ನುಡಿಸಲಿದ್ದಾರೆ. 3:30 ಅವಧಿಯ ನಿಮಿಷದ 'ನಾನಾ ನೀನಾ' ಹಾಡು ನಾಳೆ ಬಿಡುಗಡೆಯಾಗಲಿದೆ.