ಬೇರೆ ದೇಶ, ರಾಜ್ಯಗಳಿಂದ ಕರ್ನಾಟಕಕ್ಕೆ ಬಂದು ಕನ್ನಡ ಕಲಿತು, ಇಲ್ಲೇ ಕೆಲಸ ಅರಿಸಿ ಸೆಟಲ್ ಆಗಿರುವವರು ಸಾಕಷ್ಟು ಮಂದಿ ಇದ್ದಾರೆ. ಸಾಮಾನ್ಯರು ಮಾತ್ರವಲ್ಲ ಸಿನಿಮಾ ನಟರು, ನಿರ್ದೇಶಕರು ಕೂಡಾ ಬೇರೆ ಕಡೆಯಿಂದ ಬಂದು ಈಗ ನಮ್ಮವರೇ ಆಗಿ ಹೋಗಿದ್ದಾರೆ.
ಬೆಂಗಳೂರಲ್ಲಿ ತಮ್ಮ ಹೊಸ ಕಚೇರಿ ಆರಂಭಿಸಿದ ನಟ, ನಿರ್ಮಾಪಕ ನವರಸನ್ - undefined
ರಾಧಿಕಾ ಕುಮಾರಸ್ವಾಮಿ ಅಭಿನಯದ ‘ದಮಯಂತಿ‘ ಸಿನಿಮಾ ನಿರ್ಮಾಪಕ ನವರಸನ್ ಮೂಲತಃ ತಮಿಳುನಾಡಿನವರಾಗಿದ್ದು ಇದೀಗ ಬೆಂಗಳೂರಿನ ನಾಗರಬಾವಿಯಲ್ಲಿ ತಮ್ಮ ಹೊಸ ಕಚೇರಿ ಆರಂಭಿಸಿದ್ದಾರೆ. ಚಿತ್ರರಂಗದ ಗಣ್ಯರು ಕಚೇರಿ ಉದ್ಘಾಟನಾ ಸಮಾರಂಭಕ್ಕೆ ಆಗಮಿಸಿ ನವರಸನ್ಗೆ ಶುಭ ಕೋರಿದ್ದಾರೆ.
ತಮಿಳುನಾಡಿನಿಂದ ಬಂದು ಕನ್ನಡದ ‘ರಾಕ್ಷಸಿ‘ ಸಿನಿಮಾದಿಂದ ಸ್ಯಾಂಡಲ್ವುಡ್ನಲ್ಲಿ ನಿರ್ದೇಶನ, ನಟನೆ ಆರಂಭಿಸಿ ಸಾಕಷ್ಟು ಸಿನಿಮಾಗಳಿಗೆ ವಿತರಕರಾಗಿ ಕೆಲಸ ಮಾಡಿ, ರಾಧಿಕಾ ಕುಮಾರಸ್ವಾಮಿ ಅಭಿನಯದ ‘ದಮಯಂತಿ‘ ಸಿನಿಮಾ ಮೂಲಕ ನಿರ್ಮಾಪಕ ಕೂಡಾ ಆದ ನವರಸನ್, ಇದೀಗ ಬೆಂಗಳೂರಿನ ನಾಗರಬಾವಿಯಲ್ಲಿ ‘ಶ್ರೀ ಲಕ್ಷ್ಮಿ ವೃಷಾದ್ರಿ ಪ್ರೊಡಕ್ಷನ್‘ ಹೆಸರಿನಲ್ಲಿ ತಮ್ಮದೇ ಕಚೇರಿ ಆರಂಭಿಸಿದ್ದಾರೆ. ‘ವೈರ‘, ‘ಸೈಕೋ ಶಂಕ್ರ‘ ಸಿನಿಮಾಗಳಲ್ಲಿ ಕೂಡಾ ನವರಸನ್ ನಟಿಸಿದ್ದರು. ಒಬ್ಬರೇ ವ್ಯಕ್ತಿ ನಟನೆ, ನಿರ್ದೇಶನ, ನಿರ್ಮಾಣ ಹಾಗೂ ಚಿತ್ರಗಳ ವಿತರಣೆ ಕೂಡಾ ಮಾಡುವುದು ಬಹಳ ವಿರಳ.
ಮಾತಿನ ಮಲ್ಲ ನವರಸನ್ ನೂತನ ಕಚೇರಿ ಉದ್ಘಾಟನಾ ಸಮಾರಂಭಕ್ಕೆ ಭಾ.ಮಾ. ಹರೀಶ್, ಭಾ.ಮಾ. ಗಿರೀಶ್, ನಿರ್ದೇಶಕ ಗುರು ದೇಶಪಾಂಡೆ , ಚೇತನ್ ಕುಮಾರ್, ತಬಲಾ ನಾಣಿ, ಕೆಂಪೇಗೌಡ, ಭಜರಂಗಿ ಲೋಕಿ, ಮಜಾ ಟಾಕೀಸ್ ಖ್ಯಾತಿಯ ಪವನ್, ಗಿರಿ, ಮಿತ್ರ, ಮೈಸೂರು ಬಾಲ, ಸಂಜಯ್ ಗೌಡ, ರವಿಗೌಡ ಇತರರು ಆಗಮಿಸಿ ಶುಭ ಕೋರಿದ್ದಾರೆ.