ಕರ್ನಾಟಕ

karnataka

ETV Bharat / sitara

ಹೊಸ ಆ್ಯಪ್ ಬಿಡುಗಡೆ ಮಾಡಲು ಮುಂದಾದ ನಿರ್ದೇಶಕ, ನಿರ್ಮಾಪಕ ನವರಸನ್​​​

ನಿರ್ದೇಶನ, ನಿರ್ಮಾಣ, ವಿತರಣೆಯಲ್ಲೂ ಮುಂದಿರುವ ನವರಸನ್, ಡಿಸೆಂಬರ್​​ನಲ್ಲಿ 'ಮೈ ಮೂವಿ ಬಜಾರ್' ಎಂಬ ಹೊಸ ಆ್ಯಪ್​​​​ವೊಂದನ್ನು ಬಿಡುಗಡೆ ಮಾಡಲು ಮುಂದಾಗಿದ್ದಾರೆ. ಇದರ ಜೊತೆಗೆ ಲಾಕ್​ಡೌನ್​​ನಲ್ಲಿ ಎರಡು ಹೊಸ ಕಥೆಗಳನ್ನು ರೆಡಿ ಮಾಡಿಕೊಂಡು ಈಗ ಸಿನಿಮಾ ಮಾಡಲು ಮುಂದಾಗಿದ್ದಾರೆ.

Navarasan app
ನಿರ್ಮಾಪಕ ನವರಸನ್​​​

By

Published : Nov 2, 2020, 1:43 PM IST

ರಾಕ್ಷಸಿ, ವೈರ ಚಿತ್ರಗಳ ಮೂಲಕ ಹೆಸರಾದ ನವರಸನ್, ಕಳೆದ ವರ್ಷ ಬಿಡುಗಡೆಯಾದ ರಾಧಿಕಾ ಕುಮಾರಸ್ವಾಮಿ ಅಭಿನಯದ 'ದಮಯಂತಿ' ಚಿತ್ರವನ್ನು ನಿರ್ಮಿಸಿ, ನಿರ್ದೇಶನ ಹಾಗೂ ವಿತರಣೆ ಜವಾಬ್ದಾರಿ ಕೂಡಾ ವಹಿಸಿಕೊಂಡು ಸೈ ಎನಿಸಿಕೊಂಡಿದ್ದರು.

ಕೊರೊನಾ ಲಾಕ್​ಡೌನ್ ಸಮಯದಲ್ಲಿ ಎರಡು ಹೊಸ ಕಥೆಗಳನ್ನು ರೆಡಿ ಮಾಡಿರುವ ನವರಸನ್, ಈಗ 'ಮೈ ಮೂವಿ ಬಜಾರ್' ಎಂಬ ವಿನೂತನ್ ಆ್ಯಪ್ ಬಿಡುಗಡೆ ಮಾಡಲು ಹೊರಟಿದ್ದಾರೆ. ಸುಮಾರು 41 ದೇಶಗಳಲ್ಲಿ 18 ಭಾಷೆಗಳಲ್ಲಿ ಈ ಆ್ಯಪ್ ಲಭ್ಯವಿದೆ. ಈ ಆ್ಯಪ್​​​ನಲ್ಲಿ ಒಂದು ಬಟನ್ ಒತ್ತುವುದರ ಮೂಲಕ ಭಾರತೀಯ ಚಿತ್ರರಂಗದ ವಿಚಾರವನ್ನು ತಿಳಿದುಕೊಳ್ಳಬಹುದು. ಈ ಆ್ಯಪ್ ಡಿಸೆಂಬರ್​ನಲ್ಲಿ ಲಾಂಚ್ ಆಗಲಿದೆ.

ನವರಸನ್​​​

ಈ ಆ್ಯಪ್​​ನಲ್ಲಿ ಸುಮಾರು 10 ಬಗೆಯ ಕಂಟೆಂಟ್ ಇರಲಿವೆಯಂತೆ. ಪ್ಲೇ ಸ್ಟೋರ್​​​ನಲ್ಲಿ ಆ್ಯಪ್ ಡೌನ್​​ಲೋಡ್ ಮಾಡಿಕೊಂಡು ಬೇಕಾದ ಮಾಹಿತಿ ಪಡೆಯಬಹುದು ಎನ್ನಲಾಗಿದೆ. ನಿರ್ಮಾಪಕ, ಪ್ರದರ್ಶಕ, ವಿತರಕ, ಕಲಾವಿದರು, ತಂತ್ರಜ್ಞರ ಬಗ್ಗೆ ಹಾಗೂ ಮುಂಬರುವ ಸಿನಿಮಾಗಳ ಬಗ್ಗೆ ಕೂಡಾ ಈ ಆ್ಯಪ್​​​ನಲ್ಲಿ ಮಾಹಿತಿ ಲಭ್ಯವಿರಲಿದೆ ಎನ್ನಲಾಗಿದೆ.

ಶಿವರಾಜ್​ ಕೆ.ಆರ್. ಪೇಟೆ ಅಭಿನಯದ 'ನಾನು ಮತ್ತು ಗುಂಡ' ಚಿತ್ರವನ್ನು ತೆಲುಗು, ತಮಿಳು ಹಾಗೂ ಮಲಯಾಳಂ ಭಾಷೆಗಳಲ್ಲಿ ರೀಮೇಕ್ ಮಾಡಲು ನವರಸನ್ ಹಕ್ಕು ಪಡೆದಿದ್ದಾರಂತೆ. ಕೆಲವೊಂದು ಬದಲಾವಣೆಗಳೊಂದಿಗೆ ಅಲ್ಲಿನ ನೇಟಿವಿಟಿಗೆ ತಕ್ಕಂತೆ ಈ ಸಿನಿಮಾ ಮಾಡಲು ಮುಂದಾಗಿದ್ದಾರೆ ನವರಸನ್. ಇದರೊಂದಿಗೆ ಕಾಡಿನ ಹಿನ್ನೆಲೆ ಇರುವ ಸಿನಿಮಾಗಾಗಿ ಕಥೆಯನ್ನು ರೆಡಿ ಮಾಡಿದ್ದಾರಂತೆ.

ABOUT THE AUTHOR

...view details