ಕರ್ನಾಟಕ

karnataka

ETV Bharat / sitara

ಯುಗಾದಿಗೆ ಇಗ್ನೇಶನ್​ ಆನ್​...  'ಪ್ರೀಮಿಯರ್ ಪದ್ಮಿನಿ' ಟ್ರೇಲರ್​  ಬಿಡುಗಡೆಗೆ ಡೇಟ್​ ಫಿಕ್ಸ್​ - undefined

ತಮ್ಮ ಹೊಸ ಸಿನಿಮಾ ‘ಪ್ರೀಮಿಯರ್ ಪದ್ಮಿನಿ’ ಸಿನಿಮಾದ ಬಗ್ಗೆ ಮಾತನಾಡಲು ಸುದ್ದಿಗೋಷ್ಠಿ ಏರ್ಪಡಿಸಿದ್ದ ನವರಸ ನಾಯಕ ಜಗ್ಗೇಶ್​ ಇಂತಹ ಚಿತ್ರವನ್ನು ಯಾವುದೇ ಕಾರಣಕ್ಕೂ ಕೈ ಬಿಡಬೇಡಿ ಎಂದು ಪ್ರೇಕ್ಷಕರಲ್ಲಿ ಮನವಿ ಮಾಡಿದರು. ಚಿತ್ರದ ಟ್ರೇಲರ್ ಏಪ್ರಿಲ್ 5 ರಂದು ಬಿಡುಗಡೆಯಾಗಲಿದೆ.

ನವರಸ ನಾಯಕ ಜಗ್ಗೇಶ್

By

Published : Apr 2, 2019, 1:11 PM IST

ನವರಸ ನಾಯಕ ಜಗ್ಗೇಶ್​ ಸಿನಿಮಾದಲ್ಲಿ ಮಾತ್ರವಲ್ಲ ನಿಜಜೀವನದಲ್ಲೂ ಹಾಸ್ಯಪ್ರಿಯರೇ. ಮನೆಯಲ್ಲಿದ್ದಾಗಲೂ, ಸ್ನೇಹಿತರೊಂದಿಗೆ ಇದ್ದಾಗಲೂ ಎದುರಿಗೆ ಇದ್ದವರನ್ನು ನಗೆಗಡಲಲ್ಲಿ ತೇಲುವಂತೆ ಮಾಡುವ ಶಕ್ತಿ ಅವರಲ್ಲಿದೆ.

ಇನ್ನು ಇತ್ತೀಚೆಗೆ ಜಗ್ಗೇಶ್ ಪ್ರತಿಕಾಗೋಷ್ಠಿಯೊಂದನ್ನು ಏರ್ಪಡಿಸಿದ್ದರು. ಈ ವೇಳೆ ಮಾತನಾಡಿದ ಅವರು ಹಿಂದುಗಳಿಗೆ ಯುಗಾದಿ ಹೊಸ ವರ್ಷವಾದ್ದರಿಂದ ಆ ದಿನ ತಮ್ಮ ಹೊಸ ಚಿತ್ರ ‘ಪ್ರೀಮಿಯರ್ ಪದ್ಮಿನಿ’ ಟ್ರೇಲರ್ ಬಿಡುಗಡೆ ಮಾಡುತ್ತಿರುವುದಾಗಿ ಹೇಳಿದರು. ಇಂತಹ ಸಿನಿಮಾಗಳನ್ನು ಯಾವ ಕಾರಣಕ್ಕೂ ಕೈ ಬಿಡಬೇಡಿ. ನಿರ್ಮಾಪಕಿ ಶ್ರುತಿ ನಾಯ್ಡು ಅವರು ಸಿನಿಮಾದ ಮಾರ್ಕೆಟಿಂಗ್ ವ್ಯವಸ್ಥೆಯನ್ನು ಬಹಳ ಅಚ್ಚುಕಟ್ಟಾಗಿ ನಿಭಾಯಿಸಿದ್ದಾರೆ ಎಂದು ಮೆಚ್ಚುಗೆ ವ್ಯಕ್ತಪಡಿಸಿದರು.

ಇನ್ನು ಚಿತ್ರದ ನಟ-ನಟಿಯರ ಬಗ್ಗೆ ಮಾತನಾಡಿದ ಅವರು ಈ ಸಿನಿಮಾದಲ್ಲಿ ಸಾಕಷ್ಟು ಹೊಸ ಪ್ರತಿಭೆಗಳಿವೆ. ಪ್ರಮೋದ್, ಕೃತಿ, ವಿವೇಕ್ ಎಲ್ಲರೂ ಅವರವರ ಪಾತ್ರಕ್ಕೆ ನ್ಯಾಯ ಒದಗಿಸಿದ್ದಾರೆ. ಸುಧಾರಾಣಿ ಹಾಗೂ ಬಹಳ ದಿನಗಳ ನಂತರ ಮತ್ತೆ ಸ್ಯಾಂಡಲ್​​ವುಡ್​ಗೆ ಬಂದಿರುವ ಮಧುಬಾಲಾ ಕೂಡಾ ಚೆನ್ನಾಗಿ ನಟಿಸಿದ್ದಾರೆ. ಈ ಸಿನಿಮಾ ಗೆದ್ದರೆ ಅದು ನಮ್ಮ ತಂಡಕ್ಕೆ ಸಿಗುವ ಗೆಲುವು ಮಾತ್ರವಲ್ಲ ಇಡೀ ಸಿನಿಮಾ ಉದ್ಯಮ ಹಾಗೂ ಪ್ರೇಕ್ಷಕನಿಗೆ ಸಿಗುವಂತ ಗೆಲುವು ಎಂದು ಜಗ್ಗೇಶ್ ಚಿತ್ರದ ಬಗ್ಗೆ ಮಾತನಾಡಿದರು.

For All Latest Updates

TAGGED:

ABOUT THE AUTHOR

...view details